Sunday, January 19, 2025
ಸುದ್ದಿ

ಕೊರೊನಾ ನಿಯಮವನ್ನು ಪಾಲಿಸಿ ಹಬ್ಬ ಆಚರಿಸಿ – ಜನತೆಯಲ್ಲಿ ಸಿಎಂ ಬೊಮ್ಮಾಯಿ ಮನವಿ-ಕಹಳೆ ನ್ಯೂಸ್

ಬೆಂಗಳೂರು: ಕೊರೊನಾ ನಿಯಮಾವಳಿಗಳನ್ನು ಪಾಲನೆ ಮಾಡುವ ಮೂಲಕ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿಡುವ ಸರ್ಕಾರದ ಕಾರ್ಯದ ಜೊತೆ ನಾಡಿನ ಜನತೆ ಕೈ ಜೋಡಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಆರ್‍ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಮುಂದೆಯೂ ಕೂಡಾ ಜನತೆ ಕೊರೊನಾ ನಿಯಂತ್ರಣಕ್ಕೆ ಸಹಕರಿಸುವುದು ಮುಖ್ಯ. ಮಾರುಕಟ್ಟೆಗಳಲ್ಲಿ ಹೆಚ್ಚು ಜನಸಂದಣಿ ಆಗದಂತೆ ಜನರು ಸ್ವಯಂನಿಯಂತ್ರಣ ಹಾಕಿಕೊಳ್ಳಬೇಕು. ಹಬ್ದ ಸಂಭ್ರಮದಲ್ಲಿ ಜನರು ಮೈಮರೆಯಬೇಡಿ. ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ಹೆಚ್ಚಿನ ಜನ ಸೇರುವುದು ಬೇಡ. ಕೊರೊನಾ ನಿಯಮವನ್ನು ಪಾಲಿಸಿ ಹಬ್ಬ ಆಚರಿಸಿ ಎಂದು ಮನವಿ ಮಾಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು