Recent Posts

Sunday, January 19, 2025
ಪುತ್ತೂರು

ವಿವೇಕಾನಂದ ಸೆಂಟ್ರಲ್ ಸ್ಕೂಲ್‍ನಲ್ಲಿ ವೆಬಿನಾರ್- ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ನೆಹರುನಗರ, ಪುತ್ತೂರು, ಕಮ್ಯುನಿಟಿ ರೇಡಿಯೋ ಅಸೋಸಿಯೇಶನ್, UNICEF ಮತ್ತು ರೇಡಿಯೋ ಪಾಂಚಜನ್ಯ ಇದರ ಸಹಯೋಗದಲ್ಲಿ “ಕೋವೀಡ್-19 ಸಂದರ್ಭದಲ್ಲಿ ಪೋಷಣೆಯ ಅಗತ್ಯತೆ” ಎಂಬ ವಿಷಯದ ಕುರಿತು ಡಾ. ಶಿವಾನಂದ ನಾಯಕ್, ನಿರ್ದೇಶಕರು ಶಿವಾನಿ ಡಯೋಗ್ನೋಸ್ಟಿಕ್ ಮತ್ತು ಪ್ರಾಧ್ಯಾಪಕರು ಜೀವರಸಾಯನಶಾಸ್ತ್ರ ವಿಭಾಗ (ಸುಬ್ಬಯ್ಯ ಇನ್‍ಸ್ಟಿಟ್ಯೂಷನ್ ಆಫ್ ಮೆಡಿಕಲ್ ಸೈನ್ಸ್, ಶಿವಮೊಗ್ಗ) ಇವರಿಂದ ವೆಬಿನಾರ್ ಕಾರ್ಯಕ್ರಮವು ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ. ಎಂ.ಕೃಷ್ಣ ಭಟ್ ವಹಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‍ಇ) ನೆಹರುನಗರದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಮತಿ ವಸಂತಿ ಕೆದಿಲ, ಕಾರ್ಯದರ್ಶಿ ಶ್ರೀ ಭರತ್ ಪೈ, ಮುಖ್ಯಶಿಕ್ಷಕಿ ಶ್ರೀಮತಿ ಸಿಂಧೂ ವಿ.ಜಿ, ರೇಡಿಯೋ ಪಾಂಚಜನ್ಯದ ಸಂಯೋಜಕಿ ತೇಜಸ್ವಿನಿ ಹಾಗೂ ಶಾಲಾ ಶಿಕ್ಷಕ- ಶಿಕ್ಷಕೇತರ ವೃಂದದವರು ಉಪಸ್ಥಿತರಿದರು.

ಜಾಹೀರಾತು

ಜಾಹೀರಾತು
ಜಾಹೀರಾತು