Sunday, January 19, 2025
ಬೆಳ್ತಂಗಡಿ

ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಬೆಳಾಲು ವತಿಯಿಂದ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ-ಕಹಳೆ ನ್ಯೂಸ್

ಬೆಳಾಲು: ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಬೆಳಾಲು ಇದರ ವತಿಯಿಂದ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಏಳನೇ ವರ್ಷದ ವರಮಹಾಲಕ್ಷ್ಮಿ ಪೂಜೆ ನಡೆಯಿತು. ಪೂಜಾ ಕಾರ್ಯಕ್ರಮವನ್ನು ಶ್ರೀ ದುರ್ಗಾ ಪ್ರಸಾದ್ ಕೆರ್ಮುಣ್ಣಾಯ ಮತ್ತು ಗಿರೀಶ್ ಬಾರಿತ್ತಾಯ ನೆರವೇರಿಸಿಕೊಟ್ಟರು. ಅದರಂತೆ ವೃತಧಾರಿಗಳು ಪೂಜೆಗೆ ಕುಳಿತು ಪೂಜೆಯನ್ನು ಯಶಸ್ವಿಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪೂಜೆಗೆ ವಿಶೇಷವಾಗಿ ರವಕೆ ಕಣದ ದಾನಿಗಳಾಗಿ ಶ್ರೀ ಅನಿಲ್ ಕುಂಬ್ಲೆ ಸಂಪೂರ್ಣ ಟೆಕ್ಸ್ ಟೈಲ್ ಉಜಿರೆ ಹಾಗೂ ಅಡುಗೆ ಸಾಮಾನು ನೀಡಿದ ದಾನಿಗಳಾದ ಶ್ರೀ ಪ್ರಭಾಕರ ಹೆಗ್ಡೆ ಮಹಾವೀರ ಟೆಕ್ಸ್ ಟೈಲ್ ಸೂಪರ್ ಮಾರ್ಕೆಟ್ ಉಜಿರೆ, ಹಾಗೂ ಫಲವಸ್ತುಗಳ ದಾನಿಗಳಾಗಿ ಸತೀಶ್ ಜೈನ್ ಕುಜುಂಬೊಟ್ಟು ಇವರು ಸಹಕರಿಸಿದರು. ಪೂಜಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಶ್ರೀನಿವಾಸಗೌಡ ನೋಟರಿ ವಕೀಲರು, ಬೆಳಾಲು ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಗೌಡ ಎಳ್ಳುಗದ್ದೆ, ಸಿ.ಎ ಬ್ಯಾಂಕಿನ ಮೆನೇಜರ್‍ರಾದ ನಾರಾಯಣಗೌಡ ಎಳ್ಳುಗದ್ದೆ, ಎಸ್.ಡಿ.ಎಂ ಹೈಸ್ಕೂಲ್‍ನ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಹಾಗೂ ಸಮಿತಿಯ ಪದಾಧಿಕಾರಿಗಳಾದ ವರಮಹಾಲಕ್ಷ್ಮಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಮೋಹನ್ ಗೌಡ ಏರ್ದೊಟ್ಟು, ಕಾರ್ಯದರ್ಶಿಯಾದ ವೇದ ದಿನೇಶ್ ಸಮಿತಿಯ ಕೋಶಾಧಿಕಾರಿ ಲೋಕಮ್ಮಮಂಜುನಾಥ, ಗ್ರಾ.ಪಂ ಸದಸ್ಯರಾದ ಶ್ರೀಮತಿ ವಿದ್ಯಾ ಶ್ರೀನಿವಾಸ ಗೌಡ, ದೇವಸ್ಥಾನದ ಮಹಿಳಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಹೇಮಲತಾ, ಶ್ರೀನಿವಾಸ ಗೌಡ ಗಣಪಣಗುತ್ತು ಉಪಸ್ಥಿತರಿದ್ದರು.