Sunday, January 19, 2025
ಬೆಳ್ತಂಗಡಿ

ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ತಾಲೂಕಿನ ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನ-ಕಹಳೆ ನ್ಯೂಸ್

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ವಾರದ ಸಭೆಯಲ್ಲಿ ಬೆಳ್ತಂಗಡಿ ತಾಲೂಕಿನ ಎಸ್.ಎಸ್.ಎಲ್.ಸಿ ಸಾಧಕರನ್ನು ಸನ್ಮಾನಿಸಲಾಯಿತು. ರಾಜ್ಯದಲ್ಲೇ ಪ್ರಥಮ ಸ್ಥಾನಗಳಿಸಿದ ಸೈಂಟ್ ಮೇರೀಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಸಂಯುಕ್ತಾ ಪ್ರಭು, ಗಿಲ್ಲಾ ಮಾಥು, ಜೀವನ್ ಆಶಿತ್ ಪಿರೇರಾ ಹಾಗೂ ರೋಟರಿ ಕುಟುಂಬದ ಸದಸ್ಯ, ಎಸ್.ಡಿ.ಎಂ. ಹೈಸ್ಕೂಲ್ ಉಜಿರೆ ವಿದ್ಯಾರ್ಥಿನಿ ಅನಘಾ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಶರತ್ ಕೃಷ್ಣ ಪಡುವಟ್ನಾಯ, ಕಾರ್ಯದರ್ಶಿ ಆಬೂಬಕ್ಕರ್, ನಿಕಟ ಪೂರ್ವ ಅಧ್ಯಕ್ಷ ಧನಂಜಯ್ ರಾವ್, ಹಾಗೂ ಕ್ಲಬ್‌ನ ಪೂರ್ವಾಧ್ಯಕ್ಷರುಗಳು, ಸದಸ್ಯರುಗಳು ಹಾಗೂ ಸನ್ಮಾನಿತರ ಪೋಷಕರುಗಳು ಉಪಸ್ಥಿತರಿದ್ದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು