Sunday, January 19, 2025
ಸುದ್ದಿ

ಮೊಗವೀರ ಮಹಾ ಸಮಾಜದ ವತಿಯಿಂದ ಮತ್ಥ್ಯ ಸಂಪತ್ತನ್ನು ಕರುಣಿಸಲು ಮತ್ತು ಮೀನುಗಾರ ಬಂಧುಗಳ ಸುರಕ್ಷೆಗಾಗಿ ಸಮುದ್ರ ಪೂಜೆಗೆ ಚಾಲನೆ ನೀಡಿದ ಶಾಸಕ ಡಾ. ಭರತ್ ಶೆಟ್ಟಿ- ಕಹಳೆ ನ್ಯೂಸ್

ಮಂಗಳೂರು: ಮೀನುಗಾರಿಕಾ ಋತುವಿನ ಆರಂಭದಲ್ಲಿ ಸಮುದ್ರ ಪೂಜೆಯನ್ನು ಮಾಡುವ ಮೂಲಕ ಮತ್ಥ್ಯ ಸಂಪತ್ತನ್ನು ಕರುಣಿಸಲು ಮತ್ತು ಮೀನುಗಾರ ಬಂಧುಗಳ ಸುರಕ್ಷೆಗಾಗಿ ಪ್ರಾರ್ಥಿಸಿ ಮಿತ್ರಪಟ್ಟಣ ಮೊಗವೀರ ಮಹಾ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಸಮುದ್ರ ಪೂಜೆಗೆ ಶಾಸಕರಾದ ಡಾ. ಭರತ್ ಶೆಟ್ಟಿಯವರು ಸಮುದ್ರಕ್ಕೆ ಹಾಲು ಹಾಕುವುದರ ಮೂಲಕ ಚಾಲನೆ ಕೊಟ್ಟರು. ಈ ಸಂದರ್ಭದಲ್ಲಿ ಮಿತ್ರಪಟ್ಟಣ ಮೊಗವೀರ ಸಮಾಜದ ಅಧ್ಯಕ್ಷರಾದ ರವೀಂದ್ರ ಕರ್ಕೇರ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸುರೇಶ್ ಕರ್ಕೇರ, ಸ್ಥಳೀಯ ಕಾರ್ಪೋರೇಟರ್ ಶೋಭಾ ರಾಜೇಶ್, ರಾಮ ಮಂದಿರದ ಅಧ್ಯಕ್ಷರಾದ ಪ್ರದೀಪ್ ಕುಂದರ್, ಊರಿನ ಗುರಿಕಾರರಾದ ಗಂಗಾಧರ್ ಗುರಿಕಾರ, ಹಿರಿಯರಾದ ದಿನಕರ್ ಎಂ, ಮಹಿಳಾ ಸಮಾಜದ ಅಧ್ಯಕ್ಷರಾದ ಕವಿತಾ ಶರತ್, ರಾಜೇಶ್ ಪುತ್ರನ್ ಮುಂಬೈ ಸಮಿತಿಯ ಹಿರಿಯರಾದ ನಾರಾಯಣ ಬಂಗೇರ ಮಿತ್ರಪಟ್ಟಣ ಮೀನುಗಾರಿಕಾ ಸಹಕಾರಿ ಸಂಘದ ಅಧ್ಯಕ್ಷರಾದ ವಸಂತ್ ಸುವರ್ಣ, ಪ್ರಮುಖರಾದ ಸುನಿಲ್ ಸಾಲಿಯಾನ್ ಹಾಗೂ ಮೊಗವೀರ ಸಮಾಜದ ಎಲ್ಲಾ ಬಾಂಧವರು ಉಪಸ್ಥಿತರಿದ್ದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

   

ಜಾಹೀರಾತು
ಜಾಹೀರಾತು
ಜಾಹೀರಾತು