Recent Posts

Monday, January 20, 2025
ಬಂಟ್ವಾಳ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಕ್ಯಾಂಟೀನ್‍ ನಲ್ಲಿ ಪ್ರಥಮವಾಗಿ ತುಳು ಲಿಪಿಯ ನಾಮಫಲಕ ಅನಾವರಣ-ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ಮೂಡಬಿದಿರೆ ರಸ್ತೆಯ ಎಸ್.ವಿ.ಎಸ್.ಕಾಲೇಜು ಸಮೀಪದಲ್ಲಿರುವ ಶ್ರೀ ದುರ್ಗಾ ಕ್ಯಾಂಟೀನ್‍ ಗೆ ತುಳುನಾಡ ಯುವ ಸೇನೆ ವತಿಯಿಂದ ಪ್ರಥಮವಾಗಿ ತುಳು ಲಿಪಿಯಲ್ಲಿ ಬರೆದ ನಾಮಫಲಕವನ್ನು ಅಳವಡಿಸಿಲಾಗಿದೆ. ಜೈ ತುಳುನಾಡು ಇದರ ಸದಸ್ಯೆ ಪೂರ್ಣಿಮಾ ಅವರು ಇಂದು ನಾಮಫಲಕವನ್ನು ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತುಳುನಾಡ ಯುವ ಸೇನೆಯ ಉಪಾಧ್ಯಕ್ಷ ಪ್ರತೀಕ್ ತುಲುವೆ, ಸಂಚಾಲಕ ಮಹೇಶ್, ಕಾರ್ಯದರ್ಶಿ ಚಿಂತನ್, ಸಹಕಾರ್ಯದರ್ಶಿ ಲಿಖಿತ್ ರಾಜ್ ಸೆರ್ಕಳ, ಸದಸ್ಯ ಅರುಣ್ ಕುಮಾರ್ ಅವರು ಉಪಸ್ಥಿತರಿದ್ದರು.


ತುಳು ಭಾಷೆಯನ್ನು 8 ನೇ ಪರಿಚ್ಛೇದ ಅಡಿಯಲ್ಲಿ ಸೇರಿಸಬೇಕು ಎಂಬ ಕೂಗು ಕೇಳುತ್ತಿರುವ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನಲ್ಲಿ ತುಳು ಭಾಷೆಗಾಗಿ ಅನೇಕ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಒಂದಷ್ಟು ಮಂದಿಗೆ ತುಳು ಲಿಪಿ ಕಳಿಸುವ ಕೆಲಸ, ತುಳು ಲಿಪಿ ನಾಮಫಲಕ ಹೀಗೆ ಅನೇಕ ಹೋರಾಟದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಅಭಿನಂದನೀಯ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು