Recent Posts

Monday, January 20, 2025
ಸುದ್ದಿ

ಅಫ್ಘಾನಿಸ್ತಾನದಿಂದ ಸ್ವದೇಶಕ್ಕೆ ಮರಳಿದ ಐವರು ಕರಾವಳಿಗರು- ಕಹಳೆನ್ಯೂಸ್

ಮಂಗಳೂರು: ತಾಲಿಬಾನಿಗರ ಕಪಿಮುಷ್ಟಿಯಿಂದ ನಲುಗಿರುವ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಪಾರು ಮಾಡುವಲ್ಲಿ ಭಾರತ ಸರ್ಕಾರ ಯಶಸ್ವಿಯಾಗಿದ್ದು, 392 ಮಂದಿ ಭಾರತೀಯರನ್ನು ಸ್ವದೇಶಕ್ಕೆ ಕರೆತರುವಲ್ಲಿ ಸಫಲವಾಗಿದೆ.

ಆಗಸ್ಟ್ 22ರಂದು ತಾಯ್ನಾಡಿಗೆ ಮರಳಿದ ಏಳು ಕನ್ನಡಿಗರಲ್ಲಿ ಐವರು ಮಂಗಳೂರಿನವರಾಗಿದ್ದು, ಬಜ್ಪೆಯಿಂದ ದಿನೇಶ್ ರೈ, ಮೂಡುಬಿದಿರೆ ಹೊಸಂಗಡಿಯ ಜಗದೀಶ್ ಪೂಜಾರಿ, ಕಿನ್ನಿಗೋಳಿಯ ಡೆಸ್ಮಂಡ್ ಡೇವಿಸ್ ಡಿಸೋಜಾ, ತೊಕ್ಕೊಟ್ಟಿನ ಪ್ರಸಾದ್ ಆನಂದ್ ಮತ್ತು ಉರ್ವದ ಶ್ರವಣ್ ಅಂಚನ್ ಅಫ್ಘಾನಿಸ್ತಾನದಿಂದ ವಿಮಾನದಲ್ಲಿ ನವದೆಹಲಿಗೆ ಕರೆತರಲಾಗಿದ್ದು, ಇಂದು ತಮ್ಮ ತಮ್ಮ ಮನೆಗಳನ್ನು ತಲುಪುವ ನಿರೀಕ್ಷೆಯಿದೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು