Sunday, January 19, 2025
ರಾಜಕೀಯ

ನಾಳೆ ಪ್ರಧಾನಿ ಮೋದಿ ಮಂಗಳೂರಿಗೆ : ವ್ಯಾಪಕ ಬಂದೋಬಸ್ತ್ ; ನಗರದ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ – ಕಹಳೆ ನ್ಯೂಸ್

ಮಂಗಳೂರು : ಕರ್ನಾಟಕ ವಿಧಾನ ಸಭಾ ಚುನಾವಣಾ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲು ನಾಳೆ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಮಂಗಳೂರು ವಿಮಾನ ನಿಲ್ದಾಣದಿಂದ ಮಂಗಳೂರಿನ ನೆಹರೂ ಮೈದಾನಕ್ಕೆ ಆಗಮಿಸಿ ವಾಪಸ್ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಸಮಯದಲ್ಲಿ ವಿವಿಐಪಿ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಸಂಚಾರ ವ್ಯವಸ್ಥೆಯನ್ನು ಬದಲಿಸಲಾಗಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕೆಳಗೆ ಸೂಚಿಸಿದ ಸ್ಥಳಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶನಿವಾರ ಬೆಳಿಗ್ಗೆ 8-00 ಗಂಟೆಯಿಂದ ರಾತ್ರಿ 9-00 ಗಂಟೆಯವರೆಗೆ ಮಂಗಳೂರು ಕೆಂಜಾರು ವಿಮಾನನಿಲ್ದಾಣದಿಂದ ನೆಹರೂ ಮೈದಾನದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲ ತರಹದ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಅನವಶ್ಯಕ ವಾಹನಗಳನ್ನು ನಿಲ್ಲಿಸುವಂತಿಲ್ಲ ಎಂದು ಮಂಗಳುರು ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಟು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ವಾಹನ ನಿಲುಗಡೆ ನಿಷೇಧ :

ನೆಹರೂ ಮೈದಾನ ಮತ್ತು ಸುತ್ತಮುತ್ತಲಿನ 50 ಮೀಟರ್ ವ್ಯಾಪ್ತಿಯಲ್ಲಿ ಮೇ 5ರಂದು ಬೆಳಗ್ಗೆ 8 ಗಂಟೆಯಿಂದ ಕಾರ್ಯಕ್ರಮ ಮುಗಿಯುವ ತನಕ (ರಾತ್ರಿ 8 ಗಂಟೆವರೆಗೆ) ಎಲ್ಲಾ ತರದ ವಾಹನಗಳನ್ನು ಅನಾವಶ್ಯಕವಾಗಿ ನಿಲ್ಲಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಅಂದು ಬೆಳಗ್ಗೆ 8ಗಂಟೆಯಿಂದ ವಿವಿಐಪಿಯವರು ನಿರ್ಗಮಿಸುವವರೆಗೆ (ರಾತ್ರಿ 9 ಗಂಟೆ) ಸರ್ಕ್ಯೂಟ್ ಹೌಸ್ ಆವರಣದಲ್ಲಿ ಅನಾವಶ್ಯಕ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಪ್ರಧಾನಿ ಅವರು ಮಂಗಳೂರು ವಿಮಾನ ನಿಲ್ದಾಣದಿಂದ ಕೆಂಜಾರು-ಮರವೂರು-ಮರಕಡ-ಕಾವೂರು-ಬೊಂದೇಲ್-ಪದವಿನಂಗಡಿ- ಯೆಯ್ಯಾಡಿ- ಕೆಪಿಟಿ-ಸರ್ಕ್ಯೂಟ್ ಹೌಸ್ ಬಟ್ಟಗುಡ್ಡೆ-ಕದ್ರಿ ಕಂಬಳ- ಭಾರತ್ ಬೀಡಿ ಕ್ರಾಸ್-ಬಂಟ್ಸ್ ಹಾಸ್ಟೆಲ್- ಡಾ.ಅಂಬೇಡ್ಕರ್ ವೃತ್ತ- -ಎ.ಬಿ.ಶೆಟ್ಟಿ ವೃತ್ತ- ನೆಹರೂ ಮೈದಾನದವರೆಗೆ. ಹಾಗೂ ನೆಹರೂ ಮೈದಾನದಿಂದ ವಾಪಾಸು ಹೋಗುವ ಸಮಯದಲ್ಲಿ ಕ್ಲಾಕ್ ಟವರ್-ಕೆ.ಬಿ.ಕಟ್ಟೆ- ಲೈಟ್‌ಹೌಸ್ ಹಿಲ್ ರಸ್ತೆ- ಡಾ.ಅಂಬೇಡ್ಕರ್ ವೃತ್ತ- ಬಂಟ್ಸ್ ಹಾಸ್ಟೆಲ್, ಭಾರತ್ ಬೀಡಿ ಕ್ರಾಸ್- ಕದ್ರಿ ಕಂಬಳ-ಬಟ್ಟಗುಡ್ಡೆ- ಕೆ.ಪಿ.ಟಿ.ಯೆಯ್ಯೆಡಿ- ಪದವಿನಂಗಡಿ-ಬೊಂದೇಲ್- ಕಾವೂರು- ಮರಕಡ-ಮರವೂರು- ಕೆಂಜಾರು- ಮಂಗಳೂರು ವಿಮಾನ ನಿಲ್ದಾಣದ ವರೆಗೆ ಸಂಚರಿಸುವ ಮಾರ್ಗದಲ್ಲಿನ ಇಕ್ಕೆಲಗಳಲ್ಲಿ ಎಲ್ಲಾ ತರದ ವಾಹನಗಳನ್ನು ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ