ವಿಟ್ಲ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಉಮ್ಮರ್ ವಿರುದ್ಧ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ದೂರು ದಾಖಲು- ಕಹಳೆ ನ್ಯೂಸ್
ವಿಟ್ಲ: ವಿಎಚ್ ಕಾಂಪ್ಲೆಕ್ಸ್ ನಲ್ಲಿರುವ ಉಮ್ಮರು. ಕೆ ಎಂಬವರ ವಕೀಲ ಕಛೇರಿಯಲ್ಲಿ ದುಡಿಯುತ್ತಿದ್ದ ವಿಟ್ಲ ಮೂಲದ ಯುವತಿಯೊರ್ವಳೊಂದಿಗೆ ವಕೀಲ ಉಮ್ಮರು ಅಸಭ್ಯವಾಗಿ ವರ್ತಿಸಿದ್ದ, ಅಲ್ಲದೆ ಮನೆಗೆ ತಿಳಿಸಿದರೆ ನಿನ್ನ ಮರ್ಯಾದೆ ಹೋಗುತ್ತದೆ ಎಂದು ಹೆದರಿಸಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಇದೀಗ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಉಮ್ಮಾರ್ ನನ್ನು ಬಂದಿಸಿದ ಕೆಲ ಹೊತ್ತಲ್ಲೆ ಜಾಮೀನು ತೆಗೆದುಕೊಂಡು ಹೊರಗೆ ಬಂದಿದ್ದು, ಕಂಪ್ಲೇ0ಟ್ ಮಾಡಿದ ಯುವತಿಯ ಬಗ್ಗೆ ಅಪಪ್ರಚಾರ ಮಾಡುತ್ತಿರುವುದರ ಬಗ್ಗೆ ಹಿಂದೂ ಜಾಗರಣ ವೇದಿಕೆಯ ಗಮನಕ್ಕೆ ಬಂದಿದ್ದು, ಅಪರಾಧಿಯ ವಿರುದ್ಧ ಪೊಲೀಸ್ ಠಾಣೆ ಅಧಿಕಾರಿಯನ್ನು ಭೇಟಿಯಾಗಿ ಕೇಸು ದಾಖಲಿಸಲು ಒತ್ತಡ ಹಾಕಲಾಗಿದೆ ಅಲ್ಲದೆ ವಿಟ್ಲ ಪರಿಸರದಾದ್ಯಂತ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ನಡೆಯುತ್ತಿದೆ. ಇದನ್ನು ಮಟ್ಟ ಹಾಕಬೇಕೆಂದು ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ವಿನಂತಿಸಿಕೊ0ಡಿದ್ದು, ಇದು ಮುಂದುವರಿದಲ್ಲಿ ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಪ್ರತಿಭಟಿಸುತ್ತದೆ.
ಇಂತಹ ಜಿಹಾದಿ ಶಕ್ತಿಗಳ ವಿರುದ್ದ ಶಾಶ್ವತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಭ0ದಪಟ್ಟ ಅಧಿಕಾರಿಯನ್ನು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಪರ್ಕ ಪ್ರಮುಖ ನರಸಿಂಹ ಶೆಟ್ಟಿ ಮಾಣಿ, ಹಿಂದೂ ಜಾಗರಣ ವೇದಿಕೆ ತಾಲೂಕು ಅಧ್ಯಕ್ಷರಾದ ಗಣೇಶ್ ಕುಲಾಲ್ ಕೆದಿಲ, ತಾಲೂಕು ಕಾರ್ಯದರ್ಶಿ ಹರ್ಷ ರೈ ವಿಟ್ಲ, ಮಾತೃಸುರಕ್ಷಾ ಸಂಯೋಜಕ ಲಿತೀಶ ಗಡಿಯಾರ, ಹಿಂದೂ ಯುವ ವಾಹಿನಿ ಸಹ ಸಂಯೋಜಕ ದಿವಾಕರ್ ಪೆರ್ನೆ, ಚೇತನ್ ಕಡಂಬು , ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಉಪಸ್ಥಿತಿ ಇದ್ದರು