Sunday, January 19, 2025
ಕಡಬ

ಕಡಬ: ಹೋಟೆಲ್‍ನಲ್ಲಿ ಕೆಲಸಕ್ಕಿದ್ದ ವ್ಯಕ್ತಿಯಿಂದ ಹಲವರಿಗೆ ಪಂಗನಾಮ: ಸಾಲ ಕೊಟ್ಟವರಿಗೆ ವಂಚಿಸಿ ಎಸ್ಕೇಪ್-ಕಹಳೆ ನ್ಯೂಸ್

ಕಡಬ: ಎರಡು ತಿಂಗಳ ಹಿಂದೆ ಪ್ರಾರಂಭಗೊಂಡಿದ್ದ ಹೋಟೆಲ್‍ನಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದ ವ್ಯಕ್ತಿ, ಸ್ಥಳೀಯರೊಂದಿಗೆ ಸ್ನೇಹ ಸಂಪಾದಿಸಿ ತನ್ನ ಮಾತಿನ ಮೋಡಿಯಲ್ಲಿಯೇ ಹಲವರಿಂದ ಹಣ ಹಾಗೂ ವಸ್ತುಗಳನ್ನು ಪಡೆದುಕೊಂಡು ವಂಚಿಸಿದ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಈ ವ್ಯಕ್ತಿ ಈಗಾಗಲೇ ಕಡಬದಿಂದ ನಾಪತ್ತೆಯಾಗಿದ್ದಾನೆ. ಈತ ನಾಪತ್ತೆಯಾಗುತ್ತಿದ್ದಂತೆ ಹಣ ನೀಡಿದವರು ದಂಗಾಗಿದಾರೆ ಮೈಸೂರು, ಪಿರಿಯಪಟ್ಟಣ ನಿವಾಸಿಯಾಗಿರುವ ಶರತ್ ಬಾಬು ಎಂಬಾತ ಕಡಬದ ಹೋಟೆಲ್‍ನಲ್ಲಿ ಅಡುಗೆ ಕೆಲಸ ಮಾಡಿಕೊಂಡು ಸ್ಥಳೀಯವಾಗಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದ್ದು, ಅತ್ಯಲ್ಪ ಸಮಯದಲ್ಲಿ ಹೋಟೆಲ್ ಸುತ್ತಮುತ್ತಲಿನ ಪರಿಸರದ ಹಲವರಲ್ಲಿ ಸ್ನೇಹ ಸಂಪಾದಿಸಿಕೊಂಡು, ಲ್ಯಾಪ್ ಟಾಪ್, ಟಿ.ವಿ, ಹೊಸ ಬೈಕ್ ಸೇರಿದಂತೆ ಹಣವನ್ನು ಪಡೆದುಕೊಂಡಿದ್ದ ತಾನು ಕಡಬದಲ್ಲಿ ಪಾಸ್ಟ್ ಫುಡ್ ವ್ಯಾಪಾರ ಮಾಡುವ ಉದ್ದೇಶವನ್ನು ಹೇಳಿಕೊಂಡಿದ್ದು ಈ ಬಗ್ಗೆ ತಯಾರಿಯೂ ನಡೆಸಿಕೊಂಡಿದ್ದ, ಇದೀಗ ದಿಢೀರ್ ನಾಪತ್ತೆಯಾಗಿದ್ದು ಹಣ ವಸ್ತು ಕಳೆದುಕೊಂಡವರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಈತನ ಫೋಟೋ ಹಾಕಿದ್ದಾರೆ. ವಂಚನೆಗೊಳಗಾದವರು ಈತನ ಮೂಲ ಹುಡುಕಿದಾಗ ಈತ ಮನೆ ಬಿಟ್ಟು 10 ವರ್ಷಗಳೇ ಕಳೆದಿವೆ ಎಂದು ತಿಳಿದು ಬಂದಿದೆ. ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಬಗ್ಗೆ ಸಿದ್ದತೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು