Friday, September 20, 2024
ರಾಜಕೀಯ

ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾಗಿದೆ ತುಳುನಾಡು – ಕಹಳೆ ನ್ಯೂಸ್

ಮಂಗಳೂರು: ಮತ್ತೊಂದು ಹೈವೋಲ್ಟೇಜ್ ಚುನಾವಣಾ ಪ್ರಚಾರಕ್ಕೆ ಮಂಗಳೂರು ನಗರ ಸಜ್ಜಾಗಿದೆ. ಮೇ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಚುನಾವಣಾ ಪ್ರಚಾರಕ್ಕೆ ಮಂಗಳೂರಿಗೆ ಆಗಮಿಸಲಿದ್ದು ಸಮಾವೇಶ ನಡೆಯಲಿರುವ ಕೇಂದ್ರ ಮೈದಾನದಲ್ಲಿ ಸಿದ್ದತೆ ಭರದಿಂದ ಸಾಗಿದೆ.

ಮೋದಿ ಸಮಾವೇಶಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ವಿಶೇಷ ಭದ್ರತಾ ಸಿಬ್ಬಂದಿ ಈಗಾಗಲೇ ಮಂಗಳೂರು ತಲುಪಿದ್ದು, ವೇದಿಕೆ ಹಾಗೂ ಸಭಾಂಗಣ ನಿರ್ಮಾಣ ಮಾಡುವಲ್ಲಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮೈದಾನದ ಸುತ್ತ ಸಿಸಿ ಕ್ಯಾಮರಾ ಸೇರಿದಂತೆ ಎಲ್ಲ ರೀತಿಯ ಭದ್ರತಾ ಕ್ರಮಕೈಗೊಳ್ಳಲಾಗುತ್ತಿದೆ. ಅರೆ ಸೇನಾಪಡೆ, ಹೊರ ರಾಜ್ಯದ ಪೊಲೀಸ್ ಪಡೆ, ರಾಪಿಡ್ ಆಕ್ಷನ್ ಫೋರ್ಸ್ ಗಳು ನಗರದಲ್ಲಿ ಬೀಡು  ಬಿಟ್ಟಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ರಸ್ತೆಯಲ್ಲಿ ಭದ್ರತೆ ಹಾಗೂ ಸುರಕ್ಷತೆ ಹಿನ್ನಲೆಯಲ್ಲಿ ಮೇ 5 ರಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆ ತನಕ ರಸ್ತೆ ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಕೆಂಜಾರು- ಮರವೂರು-ಮರಕಡ-ಕಾವೂರು-ಯೆಯ್ಯಾಡಿ- ಸರ್ಕ್ಯೂಟ್ ಹೌಸ್ಸ-ಕದ್ರಿ ಕಂಬಳ – ಬಂಟ್ಸ ಹಾಸ್ಟೆಲ್-ಡಾ. ಅಂಬೇಡ್ಕರ್ ವೃತ್ತ- ಹಂಪನಕಟ್ಟೆ-ಎ.ಬಿ. ಶೆಟ್ಟಿ ವೃತ್ತ ಕೇಂದ್ರ ಮೈದಾನದ ಇಕ್ಕೆಲಗಳಲ್ಲಿ ಎಲ್ಲ ರೀತಿಯ ವಾಹನ ನಿಲುಗಡೆ ನಿಷೇಧಿಸಿ  ಮಂಗಳೂರು ನಗರ ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಜಾಹೀರಾತು

ಸಮಾವೇಶದಲ್ಲಿ ಲಕ್ಷಾಂತರ ಜನರು ಸೇರುವ ನಿರೀಕ್ಷೆಯಿದ್ದು, ಕಾರ್ಯಕ್ರಮದ ಮೂಲಕ ರಾಜ್ಯದ ಮತದಾರರನ್ನು ಓಲೈಸಲು ಬಿಜೆಪಿ ಮುಖಂಡರು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.