‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಹಿಂದೂ ಮತ್ತು ನಾಝಿ ಸ್ವಸ್ತಿಕ’ ಈ ವಿಷಯದ ಸಂಶೋಧನೆಯು ನವ ದೆಹಲಿಯ ಅಂತಾರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಮಂಡಣೆ !- ಕಹಳೆ ನ್ಯೂಸ್
ಪ್ರತೀಕಗಳಿಂದ ಪ್ರಕ್ಷೇಪಿಸುವ ಸೂಕ್ಷ್ಮ ಸ್ಪಂದನಗಳು ಸಮಾಜವು ಆ ಪ್ರತೀಕಗಳತ್ತ ನೋಡುವ ದೃಷ್ಟಿಯನ್ನು ನಿರ್ಧರಿಸುತ್ತದೆ
ಪ್ರತಿಯೊಂದು ಪ್ರತೀಕದಿಂದ ಸೂಕ್ಷ್ಮ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿರುತ್ತವೆ. ಈ ಸೂಕ್ಷ್ಮ ಸ್ಪಂದನಗಳು ಸಕಾರಾತ್ಮಕ ಅಥವಾ ನಕಾರಾತ್ಮಕ ಇರಬಹುದು. ಹೆಚ್ಚಿನ ಧಾರ್ಮಿಕ ಮುಖಂಡರು ತಮ್ಮ ಧರ್ಮದ ಪ್ರತೀಕಗಳಿಂದ ಪಕ್ಷೇಪಿತವಾಗುವ ಸೂಕ್ಷ್ಮ ಸ್ಪಂದನಗಳತ್ತ ಗಮನ ನೀಡುವುದಿಲ್ಲ. ಇದರಿಂದಾಗಿ ಈ ಸ್ಪಂದನಗಳಿಂದ ಅವರ ಭಕ್ತರ ಮೇಲೆ ಕೆಟ್ಟ ಪರಿಣಾಮವಾಗಬಹುದು, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು ಪ್ರತಿಪಾದಿಸಿದರು. ‘ದಿ ಇಂಟರನ್ಯಾಶನಲ್ ಕಾನ್ಫರೆನ್ಸ್ ಆನ್ ಇನ್ನೋವೇಶನ್ಸ್ ಇನ್ ಮಲ್ಟಿಡಿಸಿಪ್ಲಿನರಿ ರಿಸರ್ಚ್ (iConference) ನವ ದೆಹಲಿ’ ಈ ಅಂತಾರಾಷ್ಟ್ರೀಯ ಪರಿಷತ್ತಿನಲ್ಲಿ ಅವರು ಮಾತನಾಡುತ್ತಿದ್ದರು. ಈ ಪರಿಷತ್ತಿನಲ್ಲಿ ಶ್ರೀ. ಶಾನ್ ಕ್ಲಾರ್ಕ ಇವರು ‘ಹಿಂದೂ ಮತ್ತು ನಾಝಿ ಸ್ವಸ್ತಿಕದ ನಡುವಿನ ಆಧ್ಯಾತ್ಮಿಕ ವ್ಯತ್ಯಾಸ’ ಈ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ಶೋಧಪ್ರಬಂಧದ ಲೇಖಕರಾಗಿದ್ದು, ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ. ಈ ಪರಿಷತ್ತನ್ನು ‘ಐ ಕಾನ್ಫರೆನ್ಸ್’ ನವ ದೆಹಲಿ ಇದರ ವತಿಯಿಂದ ಆಯೋಜಿಸಲಾಗಿತ್ತು.
ಇದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ವೈಜ್ಞಾನಿಕ ಪರಿಷತ್ತಿನಲ್ಲಿ ಮಂಡಿಸಿದ 78 ನೇ ಶೋಧಪ್ರಬಂಧವಾಗಿತ್ತು. ಈ ಹಿಂದೆ 15 ರಾಷ್ಟ್ರೀಯ ಹಾಗೂ 62 ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ವಿವಿಧ ಶೋಧಪ್ರಬಂಧಗಳನ್ನು ಮಂಡಿಸಲಾಗಿತ್ತು. ಇದರಲ್ಲಿ 5 ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಮಂಡಿಸಿದ ಶೋಧಪ್ರಬಂಧಗಳಿಗೆ ‘ಸರ್ವೋತ್ತಮ ಶೋಧಪ್ರಬಂಧ’ ಪ್ರಶಸ್ತಿಯು ಲಭಿಸಿದೆ. ಶ್ರೀ. ಶಾನ್ ಕ್ಲಾರ್ಕ್ ಇವರು ವಿವಿಧ ಪ್ರತೀಕಗಳ ವಿಶೇಷವಾಗಿ ಹಿಂದೂ ಮತ್ತು ನಾಝಿ ಸ್ವಸ್ತಿಕ ವಿಷಯದಲ್ಲಿ ಮಾಡಿದ ಸಂಶೋಧನೆಯ ಅಂತರ್ಗತ ಮಾಡಿದ ವಿವಿಧ ಪ್ರಯೋಗಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ಇದರಲ್ಲಿ ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಎಂಬ ಉಪಕರಣದ ಮೂಲಕ ಮಾಡಿದ ಸಂಶೋಧನೆಯ ಮಾಹಿತಿ ನೀಡಿದರು.
೧. ಹಿಂದೂ ಸ್ವಸ್ತಿಕ ಮತ್ತು ನಾಝಿ ಸ್ವಸ್ತಿಕ ಇವುಗಳ ತುಲನಾತ್ಮಕ ಅಧ್ಯಯನ : ಮೂಲ ಹಿಂದೂ ಸ್ವಸ್ತಿಕದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಹಾಗೂ ನಾಝಿ ಸ್ವಸ್ತಿಕದಲ್ಲಿ ಬಹಳಷ್ಟು ನಕಾರಾತ್ಮಕ ಊರ್ಜೆ ಇರುವುದು ಗಮನಕ್ಕೆ ಬಂದಿತು.
೨. ‘ಹಿಂದೂ ಸ್ವಸ್ತಿಕ ಮತ್ತು ನಾಝಿ ಸ್ವಸ್ತಿಕವನ್ನು ಭುಜದ ಮೇಲೆ ಕಟ್ಟಿದಾಗ’ ಆದ ಪರಿಣಾಮ : ಈ ಪ್ರಯೋಗದಲ್ಲಿ ಪಾಲ್ಗೊಂಡ ಇಬ್ಬರ ಪೈಕಿ ಮೊದಲ ವ್ಯಕ್ತಿಗೆ ಆಧ್ಯಾತ್ಮಿಕ ತೊಂದರೆ ಇದ್ದುದರಿಂದ ಪ್ರಯೋಗದ ಮೊದಲು ಸಹ ಅವರಿಂದ ನಕಾರಾತ್ಮಕ ಸ್ಪಂದನ ಪ್ರಕ್ಷೇಪಿತವಾಗುತ್ತಿತ್ತು. ಪ್ರಯೋಗದ ಮೊದಲು ಮತ್ತೊಬ್ಬ ವ್ಯಕ್ತಿಯಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿತ್ತು. ಮೊದಲ ವ್ಯಕ್ತಿಯ ಭುಜದ ಮೇಲೆ ನಾಝಿ ಸ್ವಸ್ತಿಕ ಕಟ್ಟಿದಾಗ ಅವನ ನಕಾರಾತ್ಮಕ ಊರ್ಜೆಯ ಪ್ರಭಾವಲಯ ಎರಡುಪಟ್ಟು ಹೆಚ್ಚಾಗಿ 5.72 ಮೀಟರ್ ಆಯಿತು. ಮತ್ತೊಬ್ಬ ವ್ಯಕ್ತಿಯಲ್ಲಿ 5 ಮೀಟರ್ ಉದ್ದದ ನಕಾರಾತ್ಮಕ ಊರ್ಜೆಯ ಪ್ರಭಾವಲಯ ನಿರ್ಮಾಣವಾಗಿ ಅವನಲ್ಲಿನ ಸಕಾರಾತ್ಮಕ ಊರ್ಜೆ ಸಂಪೂರ್ಣ ನಾಶವಾಯಿತು.
ಮೇಲಿನ ಪರೀಕ್ಷಣೆಯ ನಂತರ ಅವರ ಭುಜದ ಮೇಲಿನ ನಾಝಿ ಸ್ವಸ್ತಿಕ ತೆಗೆದ ನಂತರ ಇಬ್ಬರೂ ವ್ಯಕ್ತಿಗಳು ಪ್ರಯೋಗದ ಮುಂಚಿನ ಮೂಲ ಸ್ಥಿತಿಗೆ ಬರುವ ತನಕ ಪ್ರಯೋಗವನ್ನು ನಿಲ್ಲಿಸಲಾಯಿತು. ಮೂಲ ಸ್ಥಿತಿಗೆ ಬಂದ ನಂತರ ಅವರ ಭುಜಗಳಿಗೆ ಹಿಂದೂ ಸ್ವಸ್ತಿಕ ಕಟ್ಟಲಾಯಿತು. ಅನಂತರ 20 ನಿಮಿಷಗಳಲ್ಲಿ ಮಾಡಿದ ಪರೀಕ್ಷಣೆಯಲ್ಲಿ ಮೊದಲ ವ್ಯಕ್ತಿಯ ನಕಾರಾತ್ಮಕ ಊರ್ಜೆಯ ಪ್ರಭಾವಲಯ ಸಂಪೂರ್ಣ ನಾಶವಾಗಿರುವುದು ಗಮನಕ್ಕೆ ಬಂದಿತು. ಇಷ್ಟೇ ಅಲ್ಲದೇ ಅವನಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಗಿ ಅದರ ಪ್ರಭಾವಲಯ 1 ಮೀಟರ್ ಇತ್ತು. ಇನ್ನೊಬ್ಬ ವ್ಯಕ್ತಿಯ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಮೂಲ 3.14 ದಿಂದ 6.23 ಮೀಟರ್ ಆಯಿತು, ಅಂದರೆ ಹೆಚ್ಚುಕಡಿಮೆ ದುಪ್ಪಟ್ಟು ಆಯಿತು. ತಮ್ಮತಮ್ಮ ರೀತಿಯಲ್ಲಿ ಮೇಲಿನ ಎರಡೂ ಪ್ರತೀಕಗಳು ಹೇಗೆ ಶಕ್ತಿಶಾಲಿಯಾಗಿವೆ ಎಂಬುದು ಈ ಪ್ರಯೋಗದಿಂದ ಗಮನಕ್ಕೆ ಬಂದಿತು. ನಾಝಿ ಸ್ವಸ್ತಿಕದಿಂದ ಅದನ್ನು ಧಾರಣೆ ಮಾಡಿದವರ ಮೇಲೆ ಪ್ರಚಂಡ ನಕಾರಾತ್ಮಕ ಪರಿಣಾಮವಾಯಿತು ಹಾಗೂ ಪ್ರಾಚೀನ ಭಾರತೀಯ ಸ್ವಸ್ತಿಕದಿಂದ ತುಂಬ ಸಕಾರಾತ್ಮಕ ಪರಿಣಾಮವಾಯಿತು,ಎಂಬುದು ಗಮನಕ್ಕೆ ಬಂದಿತು.
ನಿಮ್ಮ ವಿಶ್ವಾಸಿ,
ಶ್ರೀ. ರೂಪೇಶ ರೆಡಕರ,
ಸಂಶೋಧನಾ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ,
ಸಂಪರ್ಕ: 9561574972