Sunday, January 19, 2025
ಪುತ್ತೂರು

ನಿರಂತರ ಪ್ರಯತ್ನವೇ ಸಾಧನೆಗೆ ಹಾದಿ: ಶ್ರೀಮತಿ ಜ್ಯೋತ್ಸ್ನಾ ಡಿ –ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯ ಹಾಗು ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ “ಸಾಧನಾ” ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಪಿ ಈಶ್ವರ ಭಟ್, ಬೆಟ್ಟ ಅಸೋಸಿಯೇಟ್ಸ್, ಪುತ್ತೂರು ಮಾತಾನಾಡಿ ಶ್ರೀಮತಿ ಜ್ಯೋತ್ಸ್ನಾ ಡಿಯವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿನಿಯಾಗಿ ಇದೇ ಕಾಲೇಜಿನ ಉಪನ್ಯಾಸಕಿಯಾಗಿ, ಪ್ರಬಾರ ಪ್ರಾಂಶುಪಾಲೆಯಾಗಿ ಹಾಗೂ ಇದೀಗ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಪ್ರಸ್ತುತ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಮೂವರು ಹಿರಿಯ ವಿದ್ಯಾರ್ಥಿಗಳು ನೇರವಾಗಿ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಗೊಂಡಿದ್ದಾರೆ. ಅಂತಹ ಉತ್ತಮ ವಿದ್ಯಾರ್ಥಿಗಳನ್ನು ಕಾನೂನು ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ ಏಕೈಕ ಸಂಸ್ಥೆ ನಮ್ಮದು ಎಂದು ಹೇಳಿದರು. ಬಳಿಕ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಶಶಿಧರ್ ಬಿ ಎನ್, ವಕೀಲರು, ಪುತ್ತೂರು ಇವರು ಉತ್ತಮ ಕಲಿಕೆ ಸಾಧನೆಗೆ ನಿರಂತರ ಪ್ರಯತ್ನ ಬೇಕು ಹಾಗೂ ಶ್ರೀಮತಿ ಜ್ಯೋತ್ಸ್ನಾ ಡಿ ಅವರ ಉಜ್ವಲ ಭವಿಷ್ಯಕ್ಕೆ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಕೇಂದ್ರ ಬಿಂದುವಾದ ಹಾಗು ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಗೊಂಡ ಶ್ರೀಮತಿ ಜ್ಯೋತ್ಸ್ನಾ ಡಿ ಸಭೆಯನ್ನುದ್ದೇಶಿಸಿ ಮಾತನಾಡಿ ಕಾರ್ಯಕ್ರಮದ ಹೆಸರು ಸಾಧನಾ ಎಂದು ಆಯ್ಕೆ ಮಾಡಿರುವುದು ವಿದ್ಯಾರ್ಥಿಗಳು ಸರಿಯಾದ ದಿಶೆಯತ್ತ ಸಾಗಲಿ ಎಂಬ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯತ್ನ. ಇಂದು ಸಾಧನೆಗೈಯಬೇಕಾದರೆ ನನ್ನ ಪ್ರಯತ್ನ ಮಾತ್ರವಲ್ಲದೇ ಪ್ರತಿಯೊಬ್ಬರ ಹಾರೈಕೆಯೂ ಇರುವುದು. ಒಬ್ಬ ಉತ್ತಮ ಸಾಧನೆಗೈಯಬೇಕಾದರೆ ಪ್ರೇರಣಾತ್ಮಕ ಮಾತುಗಳು ಅಗತ್ಯ. ನನ್ನ ಸಾಧನೆಯ ಹಿಂದೆ ಹಲವಾರು ಹಿರಿಯರ ಆಶೀರ್ವಾದ ಹಾಗು ಸ್ಪೂರ್ತಿದಾಯಕ ಮಾತುಗಳು ಇವೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೆ.ಎಂ. ಕೃಷ್ಣ ಭಟ್ ಶುಭಹಾರೈಸುತ್ತಾ ಶ್ರೀಮತಿ ಜ್ಯೋತ್ನಾ ಡಿ ಜಿಲ್ಲಾ ನ್ಯಾಯಾಧೀಶೆಯಾಗಿ ಆಯ್ಕೆಗೊಂಡಿರುವ ಹಿಂದೆ ನಿರಂತರ ಕಠಿಣ ಪ್ರಯತ್ನ ಇದೆ ಭವಿಷ್ಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿಯೂ ಹೊರ ಹೊಮ್ಮಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕರಾದ ಶ್ರೀ ವಿಜಯನಾರಾಯಣ ಕೆ ಎಂ, ಹಾಗು ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ. ಕೆ. ರವೀಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ನಾಯಕ ಸಂತೋಷ್ ಕುಮಾರ್ ಸ್ವಾಗತಿಸಿ, ಕುಮಾರಿ ಅಕ್ಷಿತಾ ಜೆ ಆರ್ ವಂದಿಸಿದರು. ಕುಮಾರಿ ಶುಭಲಕ್ಷ್ಮಿ ನಿರೂಪಿಸಿದರು.