Sunday, November 24, 2024
ಪುತ್ತೂರು

ಪುತ್ತೂರಿನ ಡಾಕ್ಟರ್ ಶಿವರಾಮ ಕಾರಂತ ಬಾಲವನಕ್ಕೆ ನಮ್ಮೂರಿನ ಉತ್ತಮ ಕಲಾವಿದರನ್ನು ರೂಪಿಸಲು ಅವಕಾಶಗಳನ್ನು ಮಾಡಿಕೊಡಬೇಕೆಂದು ಶಾಸಕರಿಗೆ ಮನವಿ-ಕಹಳೆ ನ್ಯೂಸ್

ಪುತ್ತೂರಿನಲ್ಲಿ ಡಾಕ್ಟರ್ ಶಿವರಾಮ ಕಾರಂತ ಬಾಲವನಕ್ಕೆ ಉತ್ತಮ ಕಲಾವಿದರನ್ನು ರೂಪಿಸಲು ಅವಕಾಶಗಳನ್ನು ಮಾಡಿಕೊಡಬೇಕೆಂದು ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪುತ್ತೂರಿನಲ್ಲಿ ಡಾಕ್ಟರ್ ಶಿವರಾಮ ಕಾರಂತ ಬಾಲವನ ಸಾಂಸ್ಕøತಿಕ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ಮೂಡಿ ಬರುತಿದ್ದು, ಪುತ್ತೂರಿನ ಕಲಾವಿದರನ್ನು ಗುರುತಿಸಿ, ಅವರಿಗೆ ಉತ್ತಮ ಅವಕಾಶಗಳನ್ನು ಕೊಡುವಲ್ಲಿ, ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಹಾಗೆ ಮಾಡುತ್ತಿದ್ದು, ಸಧ್ಯ ಈ ತಾಣವನ್ನು ಉನ್ನತ ಕಲಾ ಕೇಂದ್ರವಾಗಿ ಮಾಡಬೇಕು. ಅದಕ್ಕಾಗಿ ರಂಗಾಸಕ್ತರಲ್ಲಿ ರಂಗ ಚಟುವಟಿಕೆಗಳನ್ನು ತರಬೇತಿ ಮಾಡುವ ಸಲುವಾಗಿ, ಸ್ಥಳೀಯ ಕಲಾವಿದರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕೆಂದು ಹಾಗೂ ಕರ್ನಾಟಕ ರಂಗಾಯಣದ ಐದನೇ ಘಟಕವನ್ನು ಪುತ್ತೂರಿನ ಬಾಲವನಕ್ಕೆ ತರಿಸಬೇಕು, ಉತ್ತಮ ಕಲಾವಿದರನ್ನು ನಮ್ಮೂರಿನಿಂದ ರೂಪಿಸಲು ಅವಕಾಶಗಳನ್ನು ಮಾಡಿಕೊಡಬೇಕೆಂದು ಇಂದು ಶಾಸಕರಾದ ಸಂಜೀವ ಮಠಂದೂರು ಅವರಿಗೆ, ವಿವೇಕಾನಂದ ಪದವಿ ಕಾಲೇಜು ಪುತ್ತೂರು, ಕರ್ನಾಟಕ ಸಂಘ ಪುತ್ತೂರು. ವಿದ್ಯಾರಶ್ಮಿ ವಿದ್ಯಾಸಂಸ್ಥೆ ಸವಣೂರು. ಕಾಡು ಬಳಗ ಪುತ್ತೂರು, ಗಾನಸಿರಿ ಕಲಾ ಕೇಂದ್ರ ಪುತ್ತೂರು, ವರ್ಣಕುಟೀರ ಕಲಾ ಸಂಸ್ಥೆ ಪುತ್ತೂರು, ರಂಗ ದೀಪ ತಂಡ ಪುತ್ತೂರು ಇವರಿಂದ ಮನವಿ ಪತ್ರವನ್ನು ನೀಡಲಾಯಿತು. ಈ ಸಂಧರ್ಭದಲ್ಲಿ ನಗರ ವಂಡಲ ಬಿ.ಜೆ.ಪಿ ಅಧ್ಯಕ್ಷರಾದ ಪಿ.ಜಿ. ಜಗನ್ನಿವಾಸ್ ರಾವ್, ಶ್ರೀ ರಾಘವೇಂದ್ರ ಹೆ.ಎಮ್, ನ್ಯಾಯವಾದಿ ಶಶಿಧರ್ ಬಿ.ಎನ್. ಕಿರಣ್ ಕುಮಾರ್ ಗಾನಸಿರಿ, ಪ್ರವೀಣ್ ವರ್ಣಕುಟೀರ, ವೀಣಾ ತಂತ್ರಿ, ಯಶೋದ , ಹಾಗೂ ವಸಂತ ಲಕ್ಷ್ಮಿಯವರು ಪಾಲ್ಗೊಂಡಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು