Sunday, January 19, 2025
ಪುತ್ತೂರು

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಪೂರೈಸಿದ ನಳಿನ್ ಕುಮಾರ್ ಕಟೀಲ್ ; ಮಾಣಿ ಮಠಕ್ಕೆ ಭೇಟಿ – ತನ್ನ ರಾಜಕೀಯ ಗುರು, ಆರ್.ಎಸ್.ಎಸ್. ಹಿರಿಯ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಪಾದಮುಟ್ಟಿ ಆಶೀರ್ವಾದ ಪಡೆದ ಕಟೀಲ್ – ಕಹಳೆ ನ್ಯೂಸ್

ರಾಜ್ಯ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾಗಿ 18 ಬಾರಿ ಪೂರ್ತಿ ರಾಜ್ಯ ಹಾಗೂ ರಾಜ್ಯದ 311 ಮಂಡಲಗಳಲ್ಲಿ 300 ಮಂಡಲದ ಪ್ರವಾಸ ಮಾಡಿ ತನ್ನ ಅಧಿಕಾರದ ಅವಧಿಯ ಎಲ್ಲ ಚುನಾವಣೆಗಳಲ್ಲಿ ಸಂಘಟನಾತ್ಮಕ ಗೆಲುವು ಸಾಧಿಸಿ ಯಶಸ್ವಿ 2 ವರ್ಷ ಪೂರೈಸಿದ ನಳಿನ್ ಕುಮಾರ್ ಕಟೀಲ್ ರವರು ಈ ದಿನ ಖಾಸಾಗಿ ಕಾರ್ಯಕ್ರಮಕ್ಕಾಗಿ ಪೆರಾಜೆಯ ಶ್ರೀ ರಾಮಚಂದ್ರಾಪುರ ಮಠಕ್ಕೆ ಬೇಟಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸಂಘದ ಹಿರಿಯರು, ನಳಿನ್ ರಾಜಕೀಯ ಗುರುಗಳೂ ಆದ ಡಾ.ಪ್ರಭಾಕರ ಭಟ್ ಕಲ್ಲಡ್ಕರವರು ನಳಿನ್ ಕುಮಾರ್ ರವರನ್ನು ಶಾಲು ಹಾಕಿ ಗೌರವಿಸಿ ಆಶೀರ್ವಾದಿಸಿದರು. ಹಾಗೂ ನಳಿನ್ ಕಲ್ಲಡ್ಕ ಭಟ್ ಪಾದಮುಟ್ಟಿ ವಂದಿಸಿದರು.


ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಡಾ.ಕಮಲ ಪ್ರ.ಭಟ್, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿಗಳಾದ ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ, ಕೊಂಕೋಡಿ ಪದ್ಮನಾಭ ಭಟ್, ಪುಷ್ಪರಾಜ್ ಚೌಟ, ರಾಜಾರಾಮ ಭಟ್, ನಾರಾಯಣ ಶೆಟ್ಟಿ, ವಿನೀತ್ ಮುಂತಾದವರು ಉಪಸ್ಥಿತರಿದ್ದರು.