Sunday, January 19, 2025
ಅಂಕಣ

ಆಕ್ರಮಣಕಾರಿ ಮೊಘಲರು ರಾಷ್ಟ್ರ ಕಟ್ಟಿದ್ದರೆ ಭಾರತದಲ್ಲಿನ ಪ್ರಭು ಶ್ರೀರಾಮನಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜರ ವರೆಗಿನ ಹಿಂದೂ ರಾಜರು ಏನಾಗಿದ್ದರು?-ಹಿಂದು ಜನಜಾಗೃತಿ ಸಮಿತಿ-ಕಹಳೆ ನ್ಯೂಸ್

ಕ್ರೂರ ಮೊಘಲ್ ಆಕ್ರಮಣಕಾರರು ರಾಷ್ಟ್ರ ಕಟ್ಟಿದವರು ಎಂದಾದರೆ ಪ್ರಭು ಶ್ರೀರಾಮನಿಂದ ಹಿಡಿದು ಛತ್ರಪತಿ ಶಿವಾಜಿಯ ವರೆಗಿನ ಹಿಂದೂ ರಾಜರು ಏನಾಗಿದ್ದರು ಎಂದು ಕಬೀರ್ ಖಾನ್‍ಗೆ ಹಿಂದೂ ಜನಜಾಗೃತಿ ಸಮಿತಿ ಪ್ರಶ್ನಿಸಿದೆ

ತಾಲಿಬಾನಿಗಳು ಕಳೆದ ವಾರ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ, ಅಲ್ಲಿಯ ಜನರ ಮೇಲಿನ ದೌರ್ಜನ್ಯಗಳು ಮತ್ತು ದೇಶದಿಂದ ಪಲಾಯನ ಮಾಡಲು ಅವರ ಹೋರಾಟವು ಬೆಳಕಿಗೆ ಬಂದಿದೆ. 12 ವರ್ಷದ ಬಾಲಕಿಯರನ್ನು ಪತ್ತೆಹಚ್ಚಿ ಬಲವಂತವಾಗಿ ಅಪಹರಿಸುವುದರಿಂದ ಹಿಡಿದು ಪತ್ರಕರ್ತರು ಮತ್ತು ನಾಗರಿಕರನ್ನು ಕೊಲ್ಲುವ ವರೆಗಿನ ಸತ್ಯ ವಾರ್ತೆಗಳನ್ನು ಆಧುನಿಕ ಮಾಧ್ಯಮಗಳು ಜಗತ್ತಿನ ಮುಂದೆ ತರುತ್ತಿವೆ. ತಾಲಿಬಾನಿಗಳು ಹಿಂದಿನ ಆಡಳಿತಾವಧಿಯಲ್ಲಿ ಬಾಮಿಯಾನ್‍ನಲ್ಲಿನ ಪ್ರಾಚೀನ ಬುದ್ಧನ ಪ್ರತಿಮೆಗಳನ್ನು ಧ್ವಂಸಗೊಳಿಸಿದರು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಇಂದು ಆಧುನಿಕ ಕಾಲದಲ್ಲಿ ಅಲ್ಪಸಂಖ್ಯಾತರು ಮತ್ತು ಇತರ ಪಂಥಗಳ ಶ್ರದ್ಧಾಸ್ಥಾನಗಳ ಮೇಲೆ ಇಂತಹ ಅತ್ಯಾಚಾರಗಳು ನಡೆಯುತ್ತಿದ್ದರೆ, 700-800 ವರ್ಷಗಳ ಹಿಂದೆ ಭಾರತದ ಮೇಲೆ ದಾಳಿ ಮಾಡಿದ ಮೊಘಲ್ ದಾಳಿಕೋರರು ಎಷ್ಟು ಅತ್ಯಾಚಾರಗಳನ್ನು ಮಾಡಿದ್ದಾರೆಂದು ಊಹಿಸಲೂ ಸಾಧ್ಯವಿಲ್ಲ ! ಭಾರತದ ಕೆಲವು ವಿಶಿಷ್ಟ ಗುಂಪುಗಳು ಇವೆಲ್ಲ ಸತ್ಯಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿವೆ. ಟಿಪ್ಪು ಸುಲ್ತಾನನನ್ನು ‘ದೇಶಭಕ್ತ’ ಎಂದು ನಿರ್ಧರಿಸುವುದರಿಂದ ಹಿಡಿದು ಔರಂಗಜೇಬನನ್ನು ‘ಸೂಫಿ ಸಂತ’ ಎಂದು ಘೋಷಿಸುವ ಪ್ರಯತ್ನಗಳು ಆಗುತ್ತಿವೆ. ಈ ವಿಷಯದಲ್ಲಿ ಭಾರತದ ಬಾಲಿವುಡ್ ಮುಂಚೂಣಿಯಲ್ಲಿದೆ. ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡಿ ಸೈನಿಕರನ್ನು ಕೊಂದಿದೆ ಎಂದು ವಿμÁದಿಸುವ ಬದಲು ಬಾಲಿವುಡ್ ಇದು ಪಾಕಿಸ್ತಾನದ ಕಲಾವಿದರನ್ನು ಭಾರತಕ್ಕೆ ಕರೆತಂದು ಅವರಿಗೆ ಸಹೋದರತೆಯನ್ನು ತೋರಿಸಿ ಅವರಿಗೆ ಉದ್ಯೋಗವನ್ನು ಒದಗಿಸುತ್ತಿದೆ. ಅಲ್ಲದೇ ಬಾಬರ್‍ನನ್ನು ವೈಭವೀಕರಿಸುವ ‘ದಿ ಎಂಪೈರ್’ ಹೆಸರಿನ ವೆಬ್‍ಸಿರೀಸ್.ನ ಪ್ರದರ್ಶನವಾಗುತ್ತಿರುವಾಗ ಬಾಲಿವುಡ್ ನಿರ್ದೇಶಕ ಕಬೀರ್ ಖಾನ್‍ಗೆ, ನಿಜವೆಂದರೆ ಮೊಘಲರೇ ‘ರಾಷ್ಟ್ರ ಕಟ್ಟಿದವರು’ ಎಂಬ ಸಾಕ್ಷಾತ್ಕಾರವಾಯಿತು. ಮೊಘಲರು ಮತ್ತು ಮುಸ್ಲಿಂ ಆಡಳಿತಗಾರರನ್ನು ಖಳನಾಯಕರಂತೆ ಬಿಂಬಿಸುವುದು ಚಿಂತಾಜನಕವಾಗಿದೆ ಎಂದು ಅವರು ಹೇಳಿದರು. ಆಕ್ರಮಣಕಾರಿ ಮೊಘಲರು ‘ರಾಷ್ಟ್ರ ಕಟ್ಟಿದ್ದರೆ’ ಭಾರತದಲ್ಲಿನ ಪ್ರಭು ಶ್ರೀರಾಮನಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜರ ವರೆಗೆ ಆಗಿ ಹೋಗಿರುವ ಹಿಂದೂ ರಾಜರು ಯಾರಾಗಿದ್ದರು ? ಎಂಬ ಪ್ರಶ್ನೆ ಮೂಡುತ್ತದೆ. 17 ಬಾರಿ ಸೋಮನಾಥ ದೇವಸ್ಥಾನ, 18 ಬಾರಿ ಜಗನ್ನಾಥ ದೇವಸ್ಥಾನಗಳನ್ನು ಯಾರು ಕೊಳ್ಳೆಹೊಡೆದರು ? ಅಯೋಧ್ಯೆ-ಮಥುರಾ-ಕಾಶಿಯಲ್ಲಿ ಹಿಂದೂಗಳ ಭವ್ಯ ದೇವಸ್ಥಾನಗಳನ್ನು ಯಾರು ಕೆಡವಿದರು ? ಸಿಕ್ಖ್ ಗುರುಗಳ ಮೇಲೆ ಅಮಾನವೀಯ ದೌರ್ಜನ್ಯ ನಡೆಸಿ ಅವರನ್ನು ಯಾರು ಹತ್ಯೆಗೈದರು ? ಕಾಶ್ಮೀರದಲ್ಲಿ ಇಸ್ಲಾಮೀ ರಾಷ್ಟ್ರವನ್ನು ಕಟ್ಟಲು 30 ವರ್ಷಗಳ ಹಿಂದೆ ಹಿಂದೂ ಪಂಡಿತರ ಮೇಲೆ ಮಾಡಿದ ದೌರ್ಜನ್ಯಗಳಿಂದಾಗಿ ನಿರಾಶ್ರಿತರಾದ ಒಬ್ಬನೊಬ್ಬ ಹಿಂದೂ ಪಂಡಿತನು ಇಂದು ಕಾಶ್ಮೀರಕ್ಕೆ ಮರಳಲಿಲ್ಲ. ಇμÉ್ಟಲ್ಲ ಆದರೂ ಭಾರತದಲ್ಲಿ ಅಸುರಕ್ಷಿತತೆ, ಭಯವೆನಿಸುತ್ತಿದೆ ಎಂಬ ಹುಯಿಲು ಹಾಕುತ್ತ ಕೈಚೆಲ್ಲಿ ಕುಳಿತುಕೊಳ್ಳುವುದಕ್ಕಿಂತಲೂ ಈಗ ಸಂಪೂರ್ಣ ಇಸ್ಲಾಮೀ ಶರಿಯಾ ಅನ್ವಯವಾಗುವ ಅಫ್ಘಾನಿಸ್ತಾನಕ್ಕೆ ಹೋಗಿ ಅಲ್ಲಿ ರಾಷ್ಟ್ರ ಕಟ್ಟುವ ಕಾರ್ಯವನ್ನು ಮಾಡಬೇಕು ಎಂದು ಕಬೀರ ಖಾನರಿಗೆ ಹಿಂದೂ ಜನಜಾಗೃತಿ ಸಮಿತಿಯು ಸಲಹೆ ನೀಡಿದೆ.
ಇದು ಮೊಗಲ ಆಕ್ರಮಣಕಾರಿಗಳ ವಾಸ್ತವಿಕ ಅತ್ಯಾಚಾರಿ ಇತಿಹಾಸದ ಮೇಲೆ ಕಂಬಳಿ ಹೊದಿಸಿ ತಾಲಿಬಾನಿನನ್ನು ಸಮರ್ಥಿಸುವ ಒಳಸಂಚಾಗಿದೆ. ನಿಜವಾಗಿಯೂ ಈ ಆಕ್ರಮಣಕಾರಿಗಳ ಕ್ರೂರತೆಯ ವರ್ಣನೆಯು ಅವರದೇ ಅಖಬಾರ ಇತ್ಯಾದಿ ಇತಿಹಾಸದ ಗ್ರಂಥಗಳಲ್ಲಿವೆ. ಇವುಗಳಲ್ಲಿ ಅವರು ಹಿಂದೂಗಳನ್ನು ಬಲಪೂರ್ವಕವಾಗಿ ಮುಸಲ್ಮಾನರನ್ನಾಗಿಸಿರುವುದು, ದೇವಸ್ಥಾನಗಳ ವಿಧ್ವಂಸ ಮಾಡಿರುವುದು, ಮಹಿಳೆಯರನ್ನು ಗುಲಾಮರನ್ನಾಗಿಸಲು ನೀಡಿದ ಆದೇಶಗಳು ಇಂದಿಗೂ ಲಭ್ಯವಿರುವಾಗ ಅವರನ್ನು ಖಳನಾಯಕರೆಂದು ತೋರಿಸಿದಾಗ ಬೇಸರ ವ್ಯಕ್ತಪಡಿಸುವುದನ್ನು ನೋಡಿದಾಗ ಆಶ್ಚರ್ಯವೆನಿಸುತ್ತದೆ. ಸಿಕ್ಖ್ ಗುರು, ತಮ್ಮ ಸ್ವಂತ ಸಹೋದರ ದಾರಾ ಶಿಕೋಹ, ಛತ್ರಪತಿ ಸಂಭಾಜಿ ಮಹಾರಾಜ ಇವರಿಗೆ ಚಿತ್ರಹಿಂಸೆ ನೀಡಿ ಹತ್ಯೆಗೈದ ಕ್ರೂರಿ ಔರಂಗಜೇಬನು ‘ರಾಷ್ಟ್ರ ಕಟ್ಟಿದವನೇ’ ? ತಾಲಿಬಾನಿ ವಿಚಾರಶೈಲಿಗೆ ಸಹಾಯ ಮಾಡುವ ಕಬೀರ ಖಾನರಿಗೆ ಪಾಠ ಕಲಿಸಲು ಅವರ ಮುಂಬರುವ ಎಲ್ಲ ಚಲನಚಿತ್ರಗಳು, ಹಾಗೆಯೇ ಕ್ರೂರ ಬಾಬರನ ವೈಭವೀಕರಣ ಮಾಡುವ ‘ದಿ ಎಂಪಾಯರ್’ ವೆಬ್‍ಸೀರಿಸ್ ತೋರಿಸುವ ‘ಡಿಸ್ನೀ ಹಾಟ್‍ಸ್ಟಾರ್’ ಅನ್ನು ಹಿಂದೂಗಳು ಬಹಿಷ್ಕರಿಸಬೇಕು ಎಂದು ಸಮಿತಿಯು ಕರೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು