Sunday, January 19, 2025
ಕಡಬ

ಮುಂಬಯಿಯಲ್ಲಿ ನೆಲೆಸಿದ್ದ ಕಡಬದ ಹಿರಿಯ ಪತ್ರಕರ್ತ ಜನಾರ್ಧನ ಪುರಿಯ ನಿಧನ- ಕಹಳೆ ನ್ಯೂಸ್

ಕಡಬ:ಜರ್ನಲಿಸ್ಟ್ ಯೂನಿಯನ್ ಕಡಬ ಘಟಕದ ಗೌರವ ಅಧ್ಯಕ ಕುಟ್ರುಪಾಡಿ ಗ್ರಾಮದ ಪುರಿಯ ನಿವಾಸಿ, ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿದ್ದ ಜನಾರ್ದನ ಇ0ದು ನಿಧನ ಹೊಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಮುಂಬಯಿಯಲ್ಲಿದ್ದು ಅಸೌಖ್ಯದಿಂದ ಕೆಲ ದಿನಗಳ ಹಿಂದೆ ಎರಡು ಬಾರಿ ಆಸ್ಪತ್ರೆ ಗೆ ದಾಖಲಾಗಿದ್ದರು. ರಾತ್ರಿ ಮುಂಬಾಯಿಯ ಅವರ ನಿವಾಸದಲ್ಲಿ ಅಸ್ವಸ್ಥ ಗೊಂಡು ಕೊನೆಯುಸಿರೆಳೆದಿದ್ದಾರೆ. ಇವರು ಪತ್ನಿ ಪ್ರೇಮ, ಪುತ್ರ ಪ್ರತೀಕ್,ಪುತ್ರಿ ಪ್ರಿಯಾಂಕ ಅವರನ್ನು ಅಗಲಿದ್ದಾರೆ. ಮುಂಬಯಿ ಯಲ್ಲಿ ಪ್ರಕಟಗೊಳ್ಳುತ್ತಿದ್ದ ಪರಿವರ್ತನಾ ಸುದ್ದಿ ಎಂಬ ಮಾಸ ಪತ್ರಿಕೆಯನ್ನು ಕಡಬದಿಂದಲೂ ಪ್ರಕಟಿಸುತ್ತಿದ್ದರು. ಇವರು ಉತ್ತಮ ಲೇಖಕರಾಗಿ ಗುರುತಿಸಿಕೊಂಡಿದ್ದರು