Sunday, January 19, 2025
ಸುದ್ದಿ

ಉಳ್ಳಾಲದ ಇಬ್ಬರು ಯುವಕರು ಒಮನ್‍ನ ಕಡಲಲ್ಲಿ ಮುಳುಗಿ ಸಾವು-ಕಹಳೆ ನ್ಯೂಸ್

ಮಂಗಳೂರು: ಎರಡು ವರ್ಷದ ಹಿಂದೆ ಉಳ್ಳಾಲದಿಂದ ಒಮನ್‍ಗೆ ಉದ್ಯೋಗಕ್ಕೆಂದು ತೆರಳಿದ್ದ ಇಬ್ಬರು ಯುವಕರು ಕಡಲಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಉಳ್ಳಾಲದ ರಿಜ್ವಾನ್ ಅಲೆಕಳ (25), ಉಳ್ಳಾಲ ಕೋಡಿ ಜಹೀರ್ (25) ಮೃತಪಟ್ಟವರು ಎಂದು ತಿಳಿದುಬಂದಿದೆ.
ಒಮನ್‍ನಲ್ಲಿ ಫಿಶ್ ಮಿಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಉಳ್ಳಾಲದ ರಿಜ್ವಾನ್ ಅಲೆಕಳ ಹಾಗೂ ಉಳ್ಳಾಲ ಕೋಡಿ ಜಹೀರ್‍ರವರು ಒಮನ್‍ನ ದುಕ್ಕುಂ ಎಂಬ ಕಡಲತೀರಕ್ಕೆ ಶುಕ್ರವಾರ ಸಂಜೆ ವೇಳೆ ವಿಹಾರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ರಿಜ್ವಾನ್ ನೀರಿನಲ್ಲಿ ಮುಳುಗುತ್ತಿದ್ದನು. ಆಗ ಜಹೀರ್ ಆತನನ್ನು ಉಳಿಸಲು ಈಜುತ್ತಾ ತೆರಳಿದ್ದಾನೆ. ಈ ವೇಳೆ ಸಾವಿನ ಭಯದಲ್ಲಿ ರಿಜ್ವಾನ್‍ನು ಜಹೀರ್‍ನ ಕುತ್ತಿಗೆಗೆ ಕೈ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಜಹೀರ್ ಕೂಡ ನೀರಾಪಾಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆಯಲ್ಲಿ ಉಳ್ಳಾಲ ಕೋಡಿ ಜಹೀರ್ ಎಂಬವರ ಮೃತದೇಹ ಪತ್ತೆಯಾಗಿದ್ದು, ರಿಜ್ವಾನ್‍ಗಾಗಿ ಹುಡುಕಾಟ ಮುಂದುವರಿದಿದೆ. ಇನ್ನು ಮೃತ ಜಹೀರ್‍ ಗೆ ಈಗಾಗಲೇ ಮದುವೆ ನಿಶ್ವಯವಾಗಿತ್ತು. ಕೆಲವೇ ದಿನಗಳಲ್ಲಿ ಆತ ತಾಯ್ನೆಡಿಗೆ ಆಗಮಿಸುವ ತಯಾರಿಯಲ್ಲಿದ್ದ ಎಂದು ತಿಳಿದುಬಂದಿದೆ.
ರವಿವಾರ (ಆ.29)ರಂದು ಒಮನ್‍ನಿಂದ ಭಾರತಕ್ಕೆ ವಿಮಾನವೊಂದು ಆಗಮಿಸಲಿದೆ. ಈ ವೇಳೆ ಮೃತದೇಹ ಸಾಗಿಸಲು ಇಂಡಿಯನ್ ಸೋಶೀಯಲ್ ಫೋರಮ್ ಪ್ರಯತ್ನದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು