Sunday, January 19, 2025
ಪುತ್ತೂರು

ನವಚೇತನ ತೋಟಗಾರಿಕಾ ರೈತ ಉತ್ಪದಕಾರ ಕಂಪನಿ ನಿಯಮಿತ ಕಲ್ಲೇರಿ ಇದರ ಗುಂಪಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿಯ ಸಮಾಲೋಚನ ಸಭೆ-ಕಹಳೆ ನ್ಯೂಸ್

ನವಚೇತನ ತೋಟಗಾರಿಕಾ ರೈತ ಉತ್ಪದಕಾರ ಕಂಪನಿ ನಿಯಮಿತ ಕಲ್ಲೇರಿ ಇದರ ಗುಂಪಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿಯ ಸಮಾಲೋಚನ ಸಭೆಯನ್ನು ತಣ್ಣೀರುಪಂತ ಹಾಲುತ್ಪದಕಾರ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಕಂಪೆನಿಯ ಅಧ್ಯಕ್ಷರಾದ ಲಿಂಗಪ್ಪ ನಾಯ್ಕ ಉರುವಾಲು ಇವರು ವಹಿಸಿದ್ದರು ಈ ಸಭೆಯಲ್ಲಿ ಕಂಪೆನಿಯ ಅಭಿವೃದ್ಧಿಯ ಬಗ್ಗೆ ಹಾಗು ತಂಡಗಳನ್ನು ಸಕ್ರಿಯಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಕಂಪೆನಿಯ ಉಪಾಧ್ಯಕ್ಷರಾದ ಪುರಂದರ ಗೌಡ ಏನ್. ನಿರ್ದೇಶಕರಾದ ಬಿ.ನಿರಂಜನ್ ತಿಮ್ಮಯ್ಯ ಗೌಡ, ವಾಸಪ್ಪ ಗೌಡ, ಕಂಪೆನಿಯ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ನಾರಾಯಣ ಶೆಟ್ಟಿ ಮತ್ತು ಲೆಕ್ಕಿಗ ನಿತಿನ್ ಕುಮಾರ್ ಮತ್ತು ತಂಡದ ಅಧ್ಯಕ್ಷ ಕಾರ್ಯದರ್ಶಿಗಳು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು