Recent Posts

Sunday, January 19, 2025
ಸುದ್ದಿ

ತೋಡಾರು ನವಚೇತನ ಸೇವಾ ಬಳಗ (ರಿ) ತಂಡದ ವತಿಯಿಂದ ದ್ವಿತೀಯ ಪಿ.ಯು.ಸಿಯಲ್ಲಿ 90% ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ-ಕಹಳೆ ನ್ಯೂಸ್

ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಎಂಬ ಮಾತಿನಂತೆ ತೋಡಾರು ನವಚೇತನ ಸೇವಾ ಬಳಗ ರಿಜಿಸ್ಟರ್ ತಂಡವು ದ್ವಿತೀಯ ಪಿ.ಯು.ಸಿ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 90  ಕ್ಕಿಂತ ಹೆಚ್ಚು ಅಂಕಗಳಿಸಿದ 6 ವಿದ್ಯಾರ್ಥಿಗಳನ್ನು ಗುರುತಿಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ವತ್ತೂರಿನಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತಗೊಂಡ ವಿದ್ಯಾರ್ಥಿಗಳು ತಂಡದ ಬಗ್ಗೆ ಇನ್ನಷ್ಟು ಸಮಾಜ ಸೇವೆ ನಿಮ್ಮಿಂದಾಗಲಿ ಹಾಗೆಯೇ ಶಿಕ್ಷಣಕ್ಕೆ ನಿಮ್ಮ ಸಹಕಾರ ಎಂದಿಗೂ ಇರಲಿ ಎಂದು ಶುಭ ಹಾರೈಸಿದರು. ಸನ್ಮಾನ ಕಾರ್ಯಕ್ರಮಕ್ಕೆ ಸತೀಶ್.ಕೆ ಬಜಾಲ್ ಸೌದಿ ಅರೇಬಿಯಾ ಇವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಈ ಸಂದರ್ಭದಲ್ಲಿ ನವಚೇತನ ಸೇವಾ ಬಳಗ ರಿಜಿಸ್ಟರ್ ತಂಡದ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರಾದ ಸಂತೋಷ್ ಪೂಜಾರಿ ಹೊಕ್ಕಾಡಿಗೋಳಿ, ಸದಸ್ಯರಾದ ದೀಕ್ಷಿತ್ ದೇವಾಡಿಗ ನಂದಲಿಕೆ, ಶೈಲೇಶ್ ಕೋಟ್ಯಾನ್ ಸೂಡ, ಸುಧೀರ್ ಪೂಜಾರಿ ಇರ್ವತ್ತೂರು, ನಾಗರಾಜ್ ಕುಲಾಲ್ ಬೆಲ್ಮನ್, ಮುಕೇಶ್ ಸಾಲ್ಯಾನ್ ನಂದಲಿಕೆ, ಪ್ರಸನ್ನ ಆಚಾರ್ಯ ನಂದಲಿಕೆ, ಜಾನ್ ಸೂಡ, ಹಾಗೂ ಕೃಷ್ಣ ಸುವರ್ಣ ವೇಣೂರ್, ಉಪಸ್ಥಿತರಿದ್ದರು. ದೀಕ್ಷಿತ್ ನಂದಲಿಕೆ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ಜಾಹೀರಾತು

ಜಾಹೀರಾತು
ಜಾಹೀರಾತು