
ಸುಬ್ರಹ್ಮಣ್ಯ: ಕಳೆದ 30 ವರ್ಷಗಳಿಂದ ನಿಟ್ಟೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯದ ಹೆಸರಾಂತ ವೈದ್ಯರಾದ ಡಾ. ಬಿ ಕೆ ಭಟ್‍ರವರು ನಿನ್ನೆ ತಡ ರಾತ್ರಿ ನಿಧನರಾಗಿದ್ದಾರೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ ಡಾ. ಬಿ ಕೆ ಭಟ್‍ರವರು ಮಂಗಳೂರಿನ ಕೆ.ಎಂ.ಸಿ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಕೊರೋನಾ ಪಾಸಿಟಿವ್ ಬಂದಿತ್ತೆನ್ನಲಾಗಿದೆ. ಮೃತರು ಪತ್ನಿ, ಒರ್ವ ಪುತ್ರ ಹಾಗೂ ಬಂಧುಗಳನ್ನು ಅಗಲಿರುವುದಾಗಿ ತಿಳಿದು ಬಂದಿದೆ.