Recent Posts

Sunday, January 19, 2025
ರಾಜಕೀಯ

ರಾಘವೇಶ್ವರಭಾರತೀ ಶ್ರೀಗಳ ಗೋ ಸಂರಕ್ಷಣೆಯ ಕಾರ್ಯಕ್ಕೆ ಸರಿಗಮಪ ಖ್ಯಾತಿಯ ಗಾಯಕಿ ಸುಹಾನ ಸೈಯದ್ ಬೆಂಬಲ ; “ಗೋಸ್ವರ್ಗ” ಯೋಜನೆಗೆ ದೇಣಿಗೆ ಸಮರ್ಪಣೆ – ಕಹಳೆ ನ್ಯೂಸ್

ಸಾಗರ : ಹೆಗ್ಗೋಡು ಸಮೀಪದ ಆತವಾಡಿಯ ಶ್ರೀ ತಿರುಮಲೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯವು ಇಂದು ಶ್ರದ್ಧಾ ಭಕ್ತಿ ಹಾಗೂ ಧಾರ್ಮಿಕ ವಿಧಿವಿಧಾನಗಳಿಂದ ನೆರವೇರಿತು. ಅಲ್ಲಿ ನಡೆದ ಧರ್ಮಸಭೆ ಕಾರ್ಯಕ್ರಮದಲ್ಲಿ ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸೈಯದ್ ಪಾಲ್ಗೊಂಡಿದ್ದರು. ಅಲ್ಲದೆ ಗೋಸಂರಕ್ಷಣೆಯ ಮಹತ್ವಾಕಾಂಕ್ಷೀ ಯೋಜನೆ  ಗೆ ಸುಹಾನ ಸೈಯದ್ ಅವರಿಂದ ದೇಣಿಗೆ ಸಮರ್ಪಣೆ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯ ಆರಂಭದಲ್ಲಿ ಪ್ರಾರ್ಥನೆಯನ್ನು ಮಾಡಿ ಸಭಿಕರನ್ನು ಹುಬ್ಬೆರಿಸುವಂತೆ ಮಾಡಿದ್ದರು. ಆ ಬಳಿಕ ಸುಹಾನಾ ಗೋಸ್ವರ್ಗ ಯೋಜನೆಗೆ ಮೆಚ್ಚುಗೆಯ ಮಾತಾನ್ನಾಡಿದರು. ತಾನು ಈ ಯೋಜನೆಯನ್ನು ಬೆಂಬಲಿಸುವುದಾಗಿ ಹೇಳಿದರು. ಗೋಸ್ವರ್ಗ ಯೋಜನೆಗೆ ತಮ್ಮ ದೇಣಿಗೆಯನ್ನು  ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಶ್ರೀಗಳವರಿಗೆ ಸಮರ್ಪಿಸಿ ಶ್ರೀಗಳಿಂದ ಆಶೀರ್ವಾದವನ್ನು ಪಡೆದರು. ಇದೀಗ  ಸುಹಾನಾ ಸೈಯದ್ ಎರಡನೇಯ ಬಾರಿಗೆ ದೇಣಿಗೆ ನೀಡಿದ್ದಾರೆ. ಅಲ್ಲದೆ ‘ಗೋ ನಿವಾಸ’ ದ 2 ಚದರ ಅಡಿಯ ಪ್ರಾಯೋಜಕತ್ವವನ್ನು ಪಡೆದರು. ಕಳೆದ ಬಾರಿ ಸರಿಗಮಪ ವೇದಿಕೆಯಲ್ಲಿ  ಪಡೆದಿದ್ದ ಹಣದಲ್ಲಿ ಗೋ ಸೇವೆಗೆ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು