Sunday, January 19, 2025
ಅಂಕಣ

‘ದಿ ಎಂಪಾಯರ್ : ಕ್ರೂರಿ ಇಸ್ಲಾಮಿಕ್ ಆಕ್ರಮಣಕಾರಿಗಳ ಗುಣಗಾನ’ ಈ ವಿಷಯದಲ್ಲಿ ಆನ್‌ಲೈನ್ ವಿಶೇಷ ಸಂವಾದ !- ಕಹಳೆ ನ್ಯೂಸ್

ಕ್ರೂರ ಮೊಘಲರ ವೈಭವೀಕರಿಸುವ ಚಲನಚಿತ್ರಗಳನ್ನು ಮತ್ತು ಅವರ ಪ್ರಾಯೋಜಕರನ್ನು ಹಿಂದೂಗಳು ಬಹಿಷ್ಕರಿಸಬೇಕು ! – ನ್ಯಾಯವಾದಿ ಸುಭಾಷ ಝಾ, ಸರ್ವೋಚ್ಚ ನ್ಯಾಯಾಲಯ

ಇಂದು ಬಾಲಿವುಡ್‌ನವರು ಮುಸಲ್ಮಾನರ ಶ್ರದ್ಧಾಸ್ಥಾನಗಳ ಮೇಲೆ ಆಘಾತ ಮಾಡುವ ಚಲನಚಿತ್ರಗಳನ್ನು ನಿರ್ಮಿಸಲು ಹೆದರುತ್ತಿದ್ದಾರೆ; ಏಕೆಂದರೆ ಅವರಿಗೆ ತಮ್ಮ ಜೀವ ಹೋಗಬಹುದು ಅಥವಾ ತಾವು ದೊಡ್ಡ ವಿರೋಧವನ್ನು ಎದುರಿಸಬೇಕಾಗುತ್ತದೆ, ಎಂಬ ಭಯ ಕಾಡುತ್ತಿದೆ. ಹಿಂದೂಗಳ ಶ್ರದ್ಧಾಸ್ಥಾನಗಳ ಮೇಲೆ ಆಘಾತ ಮಾಡಿದರೆ ಹಿಂದೂ ಸಮಾಜವೂ ತಮಗೆ ಹಾನಿ ಮಾಡಬಹುದೆಂದು ಅರಿತುಕೊಂಡರೆ, ಅವರು ಹಿಂದೂಗಳ ವಿರುದ್ಧ ಚಲನಚಿತ್ರಗಳನ್ನು ನಿರ್ಮಿಸಲು ಧೈರ್ಯ ಮಾಡುವುದಿಲ್ಲ. ಇದಕ್ಕಾಗಿ ಎಲ್ಲ ಹಿಂದೂಗಳು ಸಂಘಟಿತರಾಗಿ ಇಂತಹ ಚಲನಚಿತ್ರಗಳನ್ನು ಮತ್ತು ಚಲನಚಿತ್ರಗಳ ಎಲ್ಲ ಪ್ರಾಯೋಜಕರ ವಸ್ತುಗಳನ್ನು ಬಹಿಷ್ಕರಿಸಬೇಕು. ಅವರಿಗೆ ತೀವ್ರವಾಗಿ ವಿರೋಧಿಸಬೇಕು. ಹಾಗಾದರೆ ಮಾತ್ರ ಬಾಲಿವುಡ್ ಈ ಬಗ್ಗೆ ಗಮನ ಹರಿಸಬಹುದು. ಅದಕ್ಕಾಗಿ ಹಿಂದೂಗಳು ನಿರಂತರ ಪ್ರಯತ್ನಗಳನ್ನು ಮಾಡಬೇಕು. ಇತರ ಹಿಂದೂಗಳಿಗೂ ತಿಳಿಸಿ ಹೇಳಬೇಕು, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಸುಭಾಷ ಝಾ ಇವರು ಹೇಳಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ದಿ ಎಂಪಾಯರ್ : ಕ್ರೂರಿ ಇಸ್ಲಾಮಿಕ್ ಆಕ್ರಮಣಕಾರಿಗಳ ಗುಣಗಾನ’ ಈ ಕುರಿತು ಆಯೋಜಿಸಲಾಗಿದ್ದ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಮಯದಲ್ಲಿ ಮಾತನಾಡಿದ ವಿವೇಕಾನಂದ ಕಾರ್ಯ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ. ನೀರಜ್ ಅತ್ರಿಯವರು, ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿರುವಾಗ ಬಾಬರ್‌ನನ್ನು ವೈಭವೀಕರಿಸುವ ‘ದಿ ಎಂಪಾಯರ್’ ಎಂಬ ವೆಬ್ ಸಿರೀಸ್ ಬರುತ್ತದೆ. ಅದು ಕಾಕತಾಳಿಯವಲ್ಲ ಆದರೆ ಪಿತೂರಿಯಾಗಿದೆ. ಹಿಂದೆ ಅವರು ಖಡ್ಗದ ಬಲದಿಂದ ಹೋರಾಡುತ್ತಿದ್ದರು. ಈಗ ಮನಸ್ಸಿನ ಮೇಲೆ ಅತಿ ಹೆಚ್ಚು ಪ್ರಭಾವ ಬೀರುವ ‘ವೆಬ್ ಸಿರೀಸ್’ನಂತಹ ಆಧುನಿಕ ತಂತ್ರಜ್ಞಾನವನ್ನು ಆಯುಧವೆಂದು ಬಳಸುತ್ತಿದ್ದಾರೆ. ನಾವು ಕೂಡ ಈ ರೀತಿಯ ಅಸತ್ಯ ಪ್ರಚಾರಕ್ಕೆ ಅದೇ ಭಾಷೆಯಲ್ಲಿ ಅಧ್ಯಯನ ಪೂರ್ಣ ಉತ್ತರ ನೀಡಬೇಕು. ಆಗ ಮಾತ್ರ ‘ಕಬೀರ್ ಖಾನ್’ನಂತಹ ಮುಸ್ಲಿಂ ನಿರ್ದೇಶಕರು ‘ಮೊಘಲರು ರಾಷ್ಟ್ರವನ್ನು ಕಟ್ಟಿದವರು’ ಎಂದು ಬಹಿರಂಗವಾಗಿ ಸುಳ್ಳು ಹೇಳಲು ಧೈರ್ಯ ಮಾಡುವುದಿಲ್ಲ. ಅಲ್ಲದೇ ಕೇಂದ್ರೀಯ ಶಿಕ್ಷಣ ಸಂಸ್ಥೆಗಳು, ಸೆನ್ಸಾರ್ ಮಂಡಳಿಗಳು ಮತ್ತು ಅನೇಕ ಸ್ಥಳಗಳಲ್ಲಿ ಕಮ್ಯುನಿಸ್ಟ್ ಮತ್ತು ಜಿಹಾದಿ ಮನಸ್ಥಿತಿಯ ಜನರು ಕುಳಿತ್ತಿದ್ದಾರೆ. ಅವರಿಗೆ ಉತ್ತರಿಸುವ ಸಲುವಾಗಿ ಸ್ವಾತಂತ್ರ್ಯವೀರ ಸಾವರಕರರು ಹೇಳಿದಂತೆ, ‘ರಾಜಕಾರಣವನ್ನು ಹಿಂದೂಕರಣಗೊಳಿಸಬೇಕು’. ಇದರಿಂದ ನಿಜವಾದ ಇತಿಹಾಸವು ಜನರ ಮುಂದೆ ಬರುವುದು, ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸನಾತನ ಸಂಸ್ಥೆಯ ಧರ್ಮಪ್ರಚಾರಕ ಶ್ರೀ. ಅಭಯ ವರ್ತಕ ಇವರು ಮಾತನಾಡುತ್ತಾ, ‘ಮೊಘಲ್-ಎ-ಆಜಮ್’ನಿಂದ ‘ದಿ ಎಂಪಾಯರ್’ವರೆಗೆ ಇಸ್ಲಾಮಿಕ್ ದಾಳಿಕೋರರ ಗುಣಗಾನ ಮಾಡುವ ಮೂಲಕ ಅವರನ್ನು ವೈಭವೀಕರಿಸಲಾಗಿದೆ. ಮೊಘಲರ ಮೇಲೆ ನಂಬಿಕೆ ಇಡುವವರು ಹಿಂದೆಯೂ ಇದ್ದರು ಮತ್ತು ಇಂದಿಗೂ ಜೀವಂತವಾಗಿದ್ದಾರೆ. ರಾಮಮಂದಿರದೊಂದಿಗೆ ಅನೇಕ ಹಿಂದೂ ದೇವಾಲಯಗಳನ್ನು ಕೆಡವಿದ ಬಾಬರ್‌ನು ತೈಮೂರ್‌ನ ವಂಶಜನಾಗಿದ್ದನು. ಆತ ಮನುಷ್ಯನಲ್ಲ ಹಿಂಸಾತ್ಮಕ ಪ್ರಾಣಿಯಾಗಿದ್ದನು. ಇಂದು ನಟ ಸೈಫ್ ಅಲಿ ಖಾನ್ ತನ್ನ ಮಗನಿಗೆ ತೈಮೂರ್ ಎಂದು ಹೆಸರಿಟ್ಟಿದ್ದಾನೆ. ಇದರಿಂದ ಆತನ ಮನಸ್ಥಿತಿ ಗಮನಕ್ಕೆ ಬರುತ್ತದೆ. ತಾಲಿಬಾನ್‌ನಿಂದ ಮುಂದೆ ಭಾರತದ ಮೇಲೆ ದಾಳಿಯಾಗಬಹುದು. ಇಂತಹ ಸಮಯದಲ್ಲಿ ‘ದಿ ಎಂಪಾಯರ್’ ಚಿತ್ರವು ಬಾಬರನ್ನು ಪುನಃ ಜೀವಂತಗೊಳಿಸಿ ಭಾರತದಲ್ಲಿ ತಾಲಿಬಾನ್ ಬೆಂಬಲಿಗರಿಗೆ ಸ್ಫೂರ್ತಿ ನೀಡುವ ಕೆಲಸ ಆರಂಭಿಸಿದೆ’, ಎಂದು ಹೇಳಿದರು. ಹಿಂದೂ ಜನಜಾಗೃತಿ ಸಮಿತಿಯ ಮಧ್ಯಪ್ರದೇಶ ಮತ್ತು ರಾಜಸ್ಥಾನದ ಸಮನ್ವಯಕರಾದ ಶ್ರೀ. ಆನಂದ ಜಾಖೋಟಿಯಾ ಅವರು ಮಾತನಾಡುತ್ತಾ, ಯಾವಾಗ ಕರೀಮ್ ಲಾಲಾ, ದಾವೂದ್ ಮುಂತಾದ ಐದು ಪ್ರಮುಖ ಅಪರಾಧಿ ಗ್ಯಾಂಗ್‌ಗಳಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಇರುವಾಗ ಆ ಬಗ್ಗೆ ಚಲನಚಿತ್ರ ನಿರ್ಮಿಸುವಾಗ ಡಾನ್ ಪಾತ್ರವನ್ನು ಯಾವಾಗಲೂ ಹಿಂದೂಗಳಿಗೆ ನೀಡಲಾಗುತ್ತಿತ್ತು. ಅಂದರೆ ಅಪರಾಧಿಯಾರೆಂದರೆ ಒಬ್ಬ ಹಿಂದೂ. ಅಮಿತಾಭ್ ಬಚ್ಚನ್ ಪಾತ್ರದಲ್ಲಿ ನಟಿಸಿರುವ ‘ವಿಜಯ್’ ದೇವಸ್ಥಾನಕ್ಕೆ ಹೋಗುವುದಿಲ್ಲ; ಆದರೆ ‘೭೮೬’ ಬ್ಯಾಡ್ಜ್ ಅವನನ್ನು ಉಳಿಸುತ್ತದೆ, ಎಂದು ತೋರಿಸಲಾಗಿದೆ. ಅದೇ ಮನಸ್ಥಿತಿ ಇಂದಿಗೂ ಬಾಲಿವುಡ್‌ನಲ್ಲಿದೆ ಎಂದು ಹೇಳಿದರು.