Sunday, January 19, 2025
ಪುತ್ತೂರು

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವತಿಯಿಂದ ಧಾರ್ಮಿಕ ಶಿಕ್ಷಣ ಮತ್ತು ಸಂಸ್ಕಾರದ ಶಿಕ್ಷಣವನ್ನು ಕೊಡುವ ಯೋಚನೆ – ವಿಶ್ವ ಹಿಂದೂ ಪರಿಷದ್ ಬಜರಂಗದಳ ಸ್ವಾಗತ- ಕಹಳೆ ನ್ಯೂಸ್

ಪುತ್ತೂರು:  ಶ್ರೀ ಮಹಾಲಿಂಗೇಶ್ವರ ದೇವಾಲಯದ ವತಿಯಿಂದ ಧಾರ್ಮಿಕ ಶಿಕ್ಷಣ ಮತ್ತು ಸಂಸ್ಕಾರದ ಶಿಕ್ಷಣವನ್ನು ಕೊಡುವ ಯೋಚನೆಯನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಅತ್ಯಂತ ಹರ್ಷದಿಂದ ಸ್ವಾಗತಿಸುತ್ತಿದ್ದೇವೆ ಮತ್ತು ಇದಕ್ಕೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದೇವೆ.
ಧಾರ್ಮಿಕ ಶಿಕ್ಷಣ ಮತ್ತು ಸಂಸ್ಕಾರವನ್ನು ಮಕ್ಕಳಿಗೆ ಕಳಿಸುವಂತಹ ಕಾರ್ಯಾ ಇತರ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಎಲ್ಲಾ ದೇವಸ್ಥಾನಗಳಿಗೆ ಮಾದರಿಯಾಗಲಿ ಮತ್ತು ಪ್ರೇರಣೆಯಾಗಲಿ.

ಈ ರೀತಿಯ ದಿಟ್ಟ ನಿಲುವನ್ನು ತೆಗೆದುಕೊಂಡಿರುವ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಮತ್ತು ಅವರ ತಂಡಕ್ಕೆ ಹಾರ್ದಿಕ ಕೃತಜ್ಞತೆಗಳನ್ನು ಹಿಂದೂ ಸಮಾಜದ ಪರವಾಗಿ ಸಲ್ಲಿಸುತ್ತಿದ್ದೇವೆ.
ಮತ್ತು ಇವತ್ತು ದೇವಾಲಯಗಳು ಭಾವನೆ ಮತ್ತು ಭಕ್ತೀಯ ಕೇಂದ್ರ ಆಗಬೇಕು ಎಂಬ ದೃಷ್ಟಿಯಿಂದ ಅಲ್ಲಿ ಅನ್ಯ ಚಟುವಟಿಕೆಗಳು ನಡೆಯಬಾರದು ಮತ್ತು ಭಕ್ತಾದಿಗಳಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ದೇವಾಲಯದ ಗದ್ದೆಯಲ್ಲಿ ವಾಹನ ಪಾರ್ಕಿಂಗ್ ಹಿಂದೂ ಭಕ್ತಾದಿಗಳಿಗೆ ಮಾತ್ರ ಎನ್ನುವ ನಿರ್ಧಾರವನ್ನು ಮಾಡಿದ್ದಾರೆ ಇದು ಅತ್ಯಂತ ಸರಿಯಾದ ಒಳ್ಳೆಯ ನಿರ್ಧಾರ ಎಂಬುದನ್ನು ಈ ಮೂಲಕ ತಿಳಿಸುತ್ತಿದ್ದೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು