Tuesday, January 21, 2025
ರಾಜಕೀಯರಾಜ್ಯಸುದ್ದಿ

” ದೇಶದ ಮದರಸಾಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆ ” ; ಕಲಬುರ್ಗಿಯಲ್ಲಿ ಸಿ. ಟಿ ರವಿ ಆಕ್ರೋಶ – ಕಹಳೆ ನ್ಯೂಸ್

ಕಲಬುರ್ಗಿ : “ಓಲೈಕೆ ರಾಜಕಾರಣದಿಂದ ದೇಶದ ಮದರಸಾಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಿದ್ದು, ದೇಶದಲ್ಲಿ ಇನ್ನಷ್ಟು ಪಾಕಿಸ್ತಾಗಳು ಸೃಷ್ಟಿಯಾಗುವ ಸಂಭವವಿದೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ದೇಶದ ಧರ್ಮಗ್ರಂಥಗಳನ್ನು ಓದಿದವರು ಯಾರೂ ತಾಲಿಬಾನಿಗಳಾಗುವುದಿಲ್ಲ. ಬದಲಾಗಿ, ಅವರೆಲ್ಲಾ ದಾರ್ಶನಿಕರಾಗಿದ್ದಾರೆ” ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ಹಿಂದೂಗಳು ಈ ದೇಶದಲ್ಲಿ ಬಹುಸಂಖ್ಯಾತರಾಗಿ ಉಳಿದಿದ್ದರೆ ಮಾತ್ರ ಅಂಬೇಡ್ಕರ್‌ ರಚಿಸಿ ಸಂವಿಧಾನ ಉಳಿಯುತ್ತದೆ. ಸಮಾನತೆಯ ಕಲ್ಪನೆ ನಮ್ಮ ನಂಬಿಕೆಯಲ್ಲಿದೆ. ಅದೇ ನಂಬಿಕೆ ಹಾಗೂ ಆದರ್ಶಗಳನ್ನು ಹೊಂದಿರುವ ಜನರು ಬಹುಸಂಖ್ಯಾರಾಗಿದ್ದಾಗ, ಸಮಾನತೆ ಹಾಗೂ ಮಹಿಳಾ ಸ್ವಾತಂತ್ರ್ಯ ಮುಂದುವರಿಯುತ್ತದೆ. ಇಲ್ಲದಿದ್ದಲ್ಲಿ ನಾವು ಸಹ ಅಫ್ಗಾನ್‌ನ ಸ್ಥಾನದಲ್ಲಿಯೇ ಇರುತ್ತೇವೆ” ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ಮೊದಲು ದೇಶ ಎನ್ನುವ ತತ್ವವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕಾಂಗ್ರೆಸ್ಸಿಗರು ದೇಶ ಮೊದಲು ಎನ್ನುವ ತತ್ವವನ್ನು ಮರೆತು ರಾಜಕಾರಣ ಮಾಡುತ್ತಿದ್ದಾರೆ. ಅಲ್ಲದೇ, ದೇಶಭಕ್ತಿಯ ಸಂಘಟನೆಯನ್ನು ತಾಲಿಬಾನ್‌ನೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ” ಎಂದಿದ್ದಾರೆ.

“ಕಳೆದ 24 ವರ್ಷಗಳಿಂದ ಕಾಂಗ್ರೆಸ್‌‌ ಹೊಸ ನಾಯಕರನ್ನು ಹುಡುಕಿತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರು ತಮ್ಮದೇ ತಂಡವನ್ನು ಕಟ್ಟಲಿಲ್ಲ. ಆದರೂ, ಕಾಂಗ್ರೆಸ್‌ನಲ್ಲಿ 4-5 ಮಂದಿ ಸಿಎಂ ಆಗುವ ಬಗ್ಗೆ ಹಗಲುಗನಸು ಕಾಣುತ್ತಿದ್ದಾರೆ” ಎಂದು ಹೇಳಿದ್ದಾರೆ