Recent Posts

Sunday, January 19, 2025
ರಾಜಕೀಯ

BREAKING NEWS : ಉಂಡಮನೆಗೆ ಕನ್ನಹಾಕಿದ ಗಂಗಾಧರ್ ಗೌಡರ ಮೇಲೆ ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲು – ಕಹಳೆ ನ್ಯೂಸ್

ಬೆಳ್ತಂಗಡಿ : ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಹರೀಶ್ ಪೂಂಜರ ಮೇಲೆ ಸುಳ್ಳು ಆರೋಪ ಮಾಡಿದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಗಂಗಾಧರ ಗೌಡರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು.
ಬಿಜೆಪಿ ಟಿಕೆಟ್ ತನ್ನ ಮಗನಿಗೆ ಅಥವಾ ತನಗೆ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಶ್ರೀ ಗಂಗಾಧರ ಗೌಡರು ಬಿಜೆಪಿ ಅಭ್ಯರ್ಥಿ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ, ಅವರು ನಡೆಸಿದ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಅವಹೇಳನ ಮಾಡಿ ಭಾಷಣ ಮಾಡಿದ್ದರು. ಇದರ ವಿರುದ್ಧ ಶ್ರೀ ಹರೀಶ್ ಪೂಂಜ ಅವರು ಕೇಸು ದಾಖಲಿಸಿ, ಗಂಗಾಧರ ಗೌಡರ ವಿರುದ್ಧ ರೂಪಾಯಿ ಒಂದು ಕೋಟಿ ಹತ್ತು ಲಕ್ಷ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಮೊಕದ್ದಮೆಯ ವಿಚಾರಣೆ ಕೈಗೆತ್ತಿಕೊಂಡ ಘನ ನ್ಯಾಯಾಲಯವು ಶ್ರೀ ಹರೀಶ್ ಪೂಂಜ ಅವರ ವಿರುದ್ಧ ಯಾವುದೇ ಸುಳ್ಳು ಆರೋಪ ಮಾಡದಿರುವಂತೆ ಗಂಗಾಧರ ಗೌಡರಿಗೆ ತಡೆಯಾಜ್ಞೆ ನೀಡಿದೆ. ಹರೀಶ್ ಪೂಂಜ ಪರ ನ್ಯಾಯವಾದಿಗಳಾದ ಶ್ರೀ ಶಂಭು ಶರ್ಮ ಹಾಗೂ ಶ್ರೀ ಅಜೇಯ್ ಸುವರ್ಣ ವಾದ ಮಂಡಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು