ಅಲಹಾಬಾದ್ : ಗೋ ಹತ್ಯೆ ಆರೋಪದಲ್ಲಿ ಜಾವೇದ್ ಎಂಬಾತನಿಗೆ ಜಾಮೀನು ನಿರಾಕರಿಸುವ ವೇಳೆ ಅಲಹಾಬಾದ್ ಕೋರ್ಟ್ ಮಹತ್ವದ ಸೂಚನೆ ನೀಡಿದ್ದು, ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ, ಅವುಗಳ ರಕ್ಷಣೆ ಹಿಂದೂಗಳ ಮೂಲಭೂತ ಹಕ್ಕನ್ನಾಗಿ ಮಾಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಹೈಕೋರ್ಟ್‍ನ ಈ ನಿಲುವು ದೇಶದಲ್ಲಿ ಗೋರಕ್ಷಣೆ ಕುರಿತ ದನಿಗೆ ಹೆಚ್ಚಿನ ಬಲ ನೀಡುವ ನಿರೀಕ್ಷೆಯಿದೆ. ದೇಶದ ಸಂಸ್ಕøತಿ ಮತ್ತು ನಂಬಿಕೆಗೆ ಧಕ್ಕೆಯಾದಾಗ ಇಡೀ ದೇಶ ದುರ್ಬಲವಾಗುತ್ತದೆ ಎಂಬುದು ನಮಗೆ ಗೊತ್ತಿದೆ ಎಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಳಿದರು.
ಮೂಲಭೂತ ಹಕ್ಕು ಗೋಮಾಂಸ ತಿನ್ನುವವರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಗೋವನ್ನು ಪೂಜಿಸುವವರು ಆರ್ಥಿಕವಾಗಿ ಅದನ್ನು ಅವಲಂಬಿಸಿರುತ್ತಾರೆ. ಅವರಿಗೂ ಅರ್ಥಪೂರ್ಣ ಜೀವನ ನಡೆಸುವ ಹಕ್ಕಿದೆ ಎಂದು ಕೋರ್ಟ್ ಹೇಳಿದೆ. ಜೀವಿಸುವ ಹಕ್ಕು ಕೊಲ್ಲುವ ಹಕ್ಕಿಗಿಂತ ಮೇಲಿನದ್ದು. ಗೋಮಾಂಸ ತಿನ್ನುವವರ ಹಕ್ಕನ್ನು ಒಂದು ಮೂಲಭೂತ ಹಕ್ಕೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಹಸು ಮುದಿಯಾದಾಗಲೂ ಬಲು ಉಪಯೋಗಿ, ಅದರ ಸಗಣಿ ಹಾಗೂ ಮೂತ್ರ ಕೃಷಿ, ಔಷಧ ತಯಾರಿಕೆಯಲ್ಲಿ ಉಪಯೋಗಕಾರಿಯಾಗಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅದು ಮುದಿಯಾದರೂ ರೋಗಪೀಡಿತವಾದರೂ ತಾಯಿಯಂತೆ ಪೂಜಿಸಲಾಗುತ್ತದೆ ಎಂದೂ ಕೋರ್ಟ್ ಹೇಳಿದ್ದು, ಹಿಂದುಗಳು ಮಾತ್ರವಲ್ಲದ ಮುಸ್ಲಿಮರು ಕೂಡ ಅವುಗಳ ಮಹತ್ವವನ್ನು ಅರಿತಿದ್ದಾರೆ. ಮುಸ್ಲಿಮರು ತಮ್ಮ ಆಳ್ವಿಕೆಯ ವೇಳೆ ಗೋವು ಭಾರತದ ಸಂಸ್ಕೃತಿಯ ಒಂದು ಮುಖ್ಯ ಭಾಗವೆಂದು ಪರಿಗಣಿಸಿದ್ದರು. ಐವರು ಮುಸ್ಲಿಂ ಆಡಳಿತಗಾರರು ಗೋ ಹತ್ಯೆಯನ್ನು ನಿಷೇಧಿಸಿದ್ದರು. ಬಾಬರ್, ಹುಮಾಯೂನ್ ಮತ್ತು ಅಕ್ಕರ್ ಕೂಡ ಮುಸ್ಲಿಂ ಧಾರ್ಮಿಕ ಹಬ್ಬಗಳಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಿದ್ದರು ಎಂದು ಕೋರ್ಟ್ ನೆನಪಿಸಿದೆ. ಮೈಸೂರಿನ ನವಾಬ ಹೆರ ಅಲಿ ಗೋ ಹತ್ಯೆಯನ್ನು ಶಿಕ್ಷಾರ್ಹ ಅಪರಾಧ ಎಂದು ಕಾನೂನು ಮಾಡಿದ್ದರು ಎಂದಿದೆ.