Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಪುತ್ತೂರಿನ ಅತ್ಯಂತ ನೈತಿಕ ” ಹಿಂದುಸ್ಥಾನ್ ಲಾಡ್ಜ್ ” ನ ಮುಂಭಾಗದಲ್ಲಿ ಬಸ್ ನಿಲ್ದಾಣದ ಆವರಣದಲ್ಲಿ ಯುವಕನಿಗೆ ಹಲ್ಲೆ ಪ್ರಕರಣ ; ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ – ಕಹಳೆ ನ್ಯೂಸ್

ಪುತ್ತೂರು ಸೆಪ್ಟೆಂಬರ್ 02: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ಭೇಟಿ, ಲಾಡ್ಜಿನಲ್ಲಿ ರೂಂ ಬುಕ್ ಮಾಡಲು ಬಂದ ಯುವಕನಿಗೆ ಪುತ್ತೂರಿನ ಹಿಂದೂಸ್ಥಾನ್ ಲಾಡ್ಜ್ ನ ಮುಂಬಾಗ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ನ್ಯಾಪ್ ಚ್ಯಾಟ್ ಮೂಲಕ ಪರಿಚಯವಾದ ಪುತ್ತೂರಿನ ಯುವತಿಯ ಭೇಟಿಯಾಗಲು ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ರಾಯಚೂರಿನ ಯುವಕ ಮತ್ತು ಆತನ ಸ್ನೇಹಿತನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು. ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಹಲ್ಲೆ ನಡೆಸಿದ್ದ ತಂಡದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು