Tuesday, January 21, 2025
ಪುತ್ತೂರು

ಕೆಮ್ಮಾರ ಹೊಳೆ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಕೊಚ್ಚಿ ಹೋಗಿ ಮೃತ ಪಟ್ಟ ಶಫೀಕ್ ಮನೆಗೆ ಪುತ್ತೂರು ಶಾಸಕರಾದ ಸಂಜೀವ ಮಠಂದೂರ್ ಭೇಟಿ- ಕಹಳೆ ನ್ಯೂಸ್

ಉಪ್ಪಿನಂಗಡಿ: ಕೆಮ್ಮಾರ ಹೊಳೆಯ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಕೊಚ್ಚಿ ಹೋಗಿ ಮೃತ ಪಟ್ಟ ಶಫೀಕ್‍ರವರ ಮನೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರ್ ಭೇಟಿ ನೀಡಿ ಸಾಂತ್ವನ ನೀಡಿದರಲ್ಲದೆ, ನೆರೆ ಸಂತ್ರಸ್ತರ ಪರಿಹಾರ ನಿಧಿಯಿಂದ ಪರಿಹಾರ ನೀಡುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಹಿರೇಬಂಡಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಶೌಕತ್ ಆಲಿ, ಮಾಜಿ ಅಧ್ಯಕ್ಷರಾದ ಮಾಲತಿ ಹರಿನಾರಾಯಣ, ಪಂಚಾಯತ್ ಸದಸ್ಯರಾದ ಹೇಮಂತ್ ಮೈತಲಿಕೆ, ಬೂತ್ ಕಾರ್ಯದರ್ಶಿ ವಾಮನ ಬರೆಮೇಲು, ಊರಿನ ಪ್ರಮುಖರಾದ ಇಸ್ಮಾಯಿಲ್ ಕೆಮ್ಮಾರ, ಖಾಸೀಂ ಕೆಮ್ಮಾರ, ಅದಂ ಕೆ. ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು