Tuesday, January 21, 2025
ಪುತ್ತೂರು

ವೀಕೆಂಡ್ ಕಪ್ರ್ಯೂ ಅನ್ನು ರದ್ದು ಮಾಡುವ ಬಗ್ಗೆ ಪುತ್ತೂರು ಶಾಸಕರಿಗೆ ಮನವಿ ಸಲ್ಲಿಸಿದ ಮೊಬೈಲ್ ರೇಟೈಲ್ರ್ ಅಸ್ಸೋಸಿಯೇಶನ್ ನ ಪದಾಧಿಕಾರಿಗಳು- ಕಹಳೆ ನ್ಯೂಸ್

ವೀಕೆಂಡ್ ಕಪ್ರ್ಯೂ ಅನ್ನು ರದ್ದು ಮಾಡುವ ಬಗ್ಗೆ ಪುತ್ತೂರು ಮೊಬೈಲ್ ರೇಟೈಲ್ರ್ ಅಸ್ಸೋಸಿಯೇಶನ್ ನ ಪದಾಧಿಕಾರಿಗಳು ಇಂದು ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕರು ಸೋಮವಾರ ದಿವಸ ಮುಖ್ಯಮಂತ್ರಿಗಳು , ಉಸ್ತುವಾರಿ ಸಚಿವರುಗಳಲ್ಲಿ ಮಾತನಾಡಿ ಮುಂದಿನ ವಾರದ ಅಂತ್ಯದ ಮೊದಲು ನಮ್ಮಲ್ಲಿ ವೀಕೆಂಡ್ ಕಪ್ರ್ಯೂವನ್ನು ರದ್ದುಪಡಿಸುವ ನಿರ್ಣಯ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ. ಮತ್ತು ಪುತ್ತೂರು ಅಸಿಸ್ಟೆಂಟ್ ಕಮಿಷನರ್ ಮತ್ತು ದಕ್ಷಿಣಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. AIMRA ದಕ್ಷಿಣ ಕನ್ನಡ ಉಪ್ಪಾದಕ್ಷ ಶಶಿರಾಜ್ ರೈ , ಪುತ್ತೂರು ಮೊಬೈಲ್ ರೇಟೈಲ್ರ್ ಅಧ್ಯಕ್ಷ ಪ್ರವೀಣ್ ಅಮೈ , ಗೌರವಾಧ್ಯಕ್ಷ ಸಿರಾಜ್ ಮತ್ತು ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು