Tuesday, January 21, 2025
ದಕ್ಷಿಣ ಕನ್ನಡಪುತ್ತೂರು

ಪುತ್ತೂರು: ಕಾರ್ತಿಕ್ ಮೇರ್ಲ ಹತ್ಯೆಯಾಗಿ ಇಂದಿಗೆ ಎರಡು ವರ್ಷ:; ಹಿಂ.ಜಾ. ವೇ.ಯಿಂದ ಕಾರ್ತಿಕ್ ಮೇರ್ಲ ಸ್ಮಾರಕ ಬಸ್ ನಿಲ್ದಾಣದಲ್ಲಿ ದೀಪ ಪ್ರಜ್ವಲಿಸಿ ಸ್ಮರಣೆ

ಪುತ್ತೂರು: ಹಿಂದೂ ಜಾಗರಣ ವೇದಿಕೆಯ ಪುತ್ತೂರು ತಾಲೂಕು ಕಾರ್ಯದರ್ಶಿಯಾಗಿದ್ದ ಕಾರ್ತಿಕ್ ಮೇರ್ಲ ರವರು ಹತ್ಯೆಯಾಗಿ ಇಂದಿಗೆ ಎರಡು ವರ್ಷ ಸಂದಿದ್ದು, ಈ ನಿಟ್ಟಿನಲ್ಲಿ ಕಾರ್ತಿಕ್ ಮೇರ್ಲ ರವರ ಎರಡನೇ ವರ್ಷದ ಸ್ಮರಣೆಗಾಗಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ತಿಕ್ ಮೇರ್ಲ ಸ್ಮಾರಕ ಬಸ್ ನಿಲ್ದಾಣದಲ್ಲಿ ಸೇರಿ ಕಾರ್ತಿಕ್ ಮೇರ್ಲ ರನ್ನು ಸ್ಮರಿಸಿದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ವಿಭಾಗ ಕಾರ್ಯದರ್ಶಿ ನ್ಯಾಯವಾದಿ ಚಿನ್ಮಯ್ ರೈ, ಜಿಲ್ಲಾ ಪ್ರಧಾನ‌ ಕಾರ್ಯದರ್ಶಿಅಜಿತ್ ರೈ ಹೊಸಮನೆ, ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜ ನಗರ, ಕಾರ್ಯದರ್ಶಿ ಅವಿನಾಸ್ ಪುರುಷರಕಟ್ಟೆ, ಭೂ ಸುರಕ್ಷ ಪ್ರಮುಖ್ ಕೃಷ್ಣಪ್ರಸಾದ್ ಶೆಟ್ಟಿ, ಧನಂಜಯ‌ ಪಟ್ಲ, ನಗರ ಕಾರ್ಯದರ್ಶಿ ಕಿರಣ್ ಬೆದ್ರಾಳ, ಉಪಾಧ್ಯಕ್ಷ ಗೀತೇಶ್ ರೈ ಮಡಪ್ಪಾಡಿ, ಮಾತೃ ಸುರಕ್ಷ ಪ್ರಮುಖ್ ಸ್ವಸ್ತಿಕ್ ಸರ್ವೆ, ಕಾರ್ಯದರ್ಶಿ ಪುಷ್ಪರಾಜ್ ಸವಣೂರು, ನಗರ ಕಾರ್ಯದರ್ಶಿ ರಾಜು ಕೋರ್ಟುರಸ್ತೆ, ಮನೀಷ್ ಕುಲಾಲ್, ರಜನೀಶ್,‌ಮನೀಷ್‌ಬಿರ್ವ,‌ಮನೋಜ್, ಪ್ರೀತಂ ಆರ್ಲಪದವು, ಸಹೋದರ ದೀಪಕ್ ಸೇರಿದಂತೆ ಹಲವು ಮಂದಿ‌ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು