Tuesday, January 21, 2025
ಸುದ್ದಿ

ವಿಟ್ಲ : ವಿವಾಹಿತನಿಂದ ಅಪ್ರಾಪ್ತೆಯ ಅಪಹರಣ ಪ್ರಕರಣ; ದೂರು ದಾಖಲು– ಕಹಳೆ ನ್ಯೂಸ್

ವಿಟ್ಲ : ವಿವಾಹಿತ ಯುವಕನೊಬ್ಬನು ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬAಧ ಬಾಲಕಿಯ ಹೆತ್ತವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಚನೆಯಂತೆ ವಿಟ್ಲ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ. ಆರೋಪಿಯನ್ನು ಇಡ್ಕಿದು ಗ್ರಾಮದ ಕೋಲ್ಪೆ ನಿವಾಸಿ ಮಹಮ್ಮದ್ ಎಂಬವರ ಮಗ ಶಮೀರ್ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಳೆವಯಸ್ಸಲ್ಲೇ ಹೆತ್ತವರ ವಿರೋಧದ ನಡುವೆಯೂ ಪುಣಚದ ಯುವತಿಯನ್ನು ವಿವಾಹವಾಗಿದ್ದ ಶಮೀರ್ ಬಳಿಕ ಆಕೆಯನ್ನು ತ್ಯಜಿಸಿದ್ದಾನೆ. ಈತನು ಆಕೆಗೆ ಬೇರೆ ಯುವಕನ ಜೊತೆ ವಿವಾಹ ಮಾಡಿರುವ ಬಗ್ಗೆ ಸ್ಥಳೀಯರಿಂದ ತಿಳಿದಿದೆ. ಈತನು ಪುತ್ತೂರು ನಗರ ಠಾಣಾ ಪೊಲೀಸರು ಶಾಲಾ ಬಾಲಕಿಯರನ್ನು ಚುಡಾಯಿಸಿದ ಆರೋಪದಲ್ಲಿ ವಶಕ್ಕೆ ಪಡೆದು ಗೂಸ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಮತ್ತೆ ತನ್ನದೇ ಗ್ರಾಮದ ಅಪ್ರಾಪ್ತೆ(17)ಯನ್ನು ಪುಸಲಾಯಿಸಿದ ಆರೋಪಿ ಶುಕ್ರವಾರ ಮಧ್ಯಾಹ್ನ ಕರೆದೊಯ್ದಿರುವ ಬಗ್ಗೆ ಮಾಹಿತಿ ಪಡೆದ ಆಕೆಯ ಹೆತ್ತವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಿದ ಮಾಹಿತಿಯಂತೆ ವಿಟ್ಲ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾಗಿತ್ತು ರಾತ್ರಿ ಬಾಲಕಿಯು ಮರಳಿ ಬಂದಿದ್ದಾಳೆAಬ ಮಾಹಿತಿ ಲಭ್ಯವಾಗಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕಾರಣ ಬಾಲಕಿ ಪೊಲೀಸರ ಮುಂದೆ ಹೇಳಿಕೆ ನೀಡಿದ ಬಳಿಕವಷ್ಟೇ ಪ್ರಕರಣದ ನಿಜಾಂಶ ಬಯಲಾಗಲಿದೆ.