Recent Posts

Monday, January 20, 2025
ಪುತ್ತೂರು

ಕುಂಜೂರು ಪಂಜ ಶಾಲೆ ಚಾವಣಿ ನಿರ್ಮಾಣಕ್ಕೆ ಕರ್ನಾಟಕ ಬ್ಯಾಂಕಿಂದ ರೂ. 5ಲಕ್ಷ ದೇಣಿಗೆ ಹಸ್ತಾಂತರ- ಕಹಳೆನ್ಯೂಸ್

ಪುತ್ತೂರು: ಕರ್ನಾಟಕ ಬ್ಯಾಂಕ್ ಕಡೆಯಿಂದ ಪುತ್ತೂರಿನ ಕುಂಜೂರು ಪಂಜ ಸರಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿಯನ್ನು ಹೊಸತಾಗಿ ನಿರ್ಮಿಸಲು ಘೋಷಣೆ ಆಗಿದ್ದ ರೂ. 5ಲಕ್ಷದ ದೇಣಿಗೆಯನ್ನು ಇಂದು ಶಾಲೆಯ ಸಮಿತಿಗೆ ಹಸ್ತಾಂತರಿಸಲಾಯಿತು.. ಪುತ್ತೂರಿನ ಬ್ಯಾಂಕ್ ಶಾಖೆಯ ಮ್ಯಾನೇಜರ್, ಶ್ರೀ ಶೈಲೇಶ್ ಕುಮಾರ್ ಮೊತ್ತದ ಡಿ.ಡಿಯನ್ನು ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾದ್ಯಾಯರಿಗೆ ನೀಡಿದರು..
ಕಾರ್ಯಕ್ರಮದಲ್ಲಿ ಪ್ರಸ್ಥಾಪನೆ ಗೈದ ಕಟ್ಟಡ ಸಮಿತಿ ಸಂಚಾಲಕ, ವಿಶ್ವೇಶ್ವರ ಭಟ್ ರವರು ಗ್ರಾಮಾಂತರ ಪ್ರದೇಶದ ಸಾಮಾನ್ಯವಾಗಿ ಬಡ ಮಕ್ಕಳೇ ಕಲಿಯುವ ಈ ಶಾಲೆಗೆ ಇಷ್ಟು ದೊಡ್ಡ ಮೊತ್ತವನ್ನು ಬ್ಯಾಂಕ್ ತನ್ನ CSR ನಿಧಿ (ಕಮ್ಯುನಿಟಿ ಸರ್ವೀಸ್ ಜವಾಬ್ದಾರಿ) ನೀಡುವ ಮೂಲಕ ತಮ್ಮ ಸಾಮಾಜಿಕ ಬದ್ದತೆ ಯನ್ನು ಮೆರೆದಿದ್ದಾರೆ.. ಇದಕ್ಕಾಗಿ ಪ್ರಯತ್ನ ಪಟ್ಟ ರಾಮ ಭಟ್ ಬಂಗಾರಡ್ಕ ಕೂಡಾ ಕಲಿತ ಶಾಲೆಗೆ ಅಪಾರ ಕಾಳಜಿ ತೋರಿದ್ದಾರೆ ಎಂದು ಅಭಿನಂದಿಸಿದರು.. ಅದೇ ರೀತಿ ಎರಡು ಲಕ್ಷದ ಸಹಾಯ ನೀಡಿದ ಧರ್ಮಸ್ಥಳ ಗ್ರಾಮಾಭಿವೃದ್ದಿಯ ನೇತಾರ ಶ್ರೀ ವೀರೇಂದ್ರ ಹೆಗ್ಗಡೆ ಹಾಗು ಸಹಕಾರ ನೀಡಿದ ಊರ ಮಹನೀಯರನ್ನೂ ಸ್ಮರಿಸಿದರು..

ಜಾಹೀರಾತು
ಜಾಹೀರಾತು
ಜಾಹೀರಾತು

ರಾಮ ಭಟ್ ಬಂಗಾರಡ್ಕ ಮಾತಾನಾಡಿ, ಹಳ್ಳಿ ಶಾಲೆಗೆ ಈ ರೀತಿ ಬೆಂಬಲ ನೀಡುವುದು ಪುಣ್ಯದ ಕೆಲಸ ಎಂದು ಬ್ಯಾಂಕನ್ನು ಶ್ಲಾಘಿಸಿದರು.. ಶಾಖಾ ಪ್ರಭಂದಕರಾದ, ಶ್ರೀ ಶೈಲೇಶ್ ರವರು ಈ ತರದ ಅರ್ಹ ಶಾಲೆಗೆ ಹಣ ನೀಡಿದಾಗ ಅದು ಸದ್ವಿನಿಯೋಗ ಆಗ್ತದೆ ಅಂತಾ ಸಂಸ್ಥೆಗೆ ವಿಶ್ವಾಸ ಅಂತ ಹೇಳಿದರು. ಶಾಲೆಯ ನೂತನ ಸಂಚಾಲಕ, ಮಹಾಬಲ ರೈ ಯವರು ಸಹಕರಿಸಿದ ಎಲ್ಲರನ್ನು ಸ್ಮರಿಸುತ್ತಾ ಧನ್ಯವಾದ ಅರ್ಪಿಸಿದರು. ಶಿಕ್ಷಕಿ ಮೋನಿಕಾ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು