ಮಂಗಳೂರಿನ ಮಹಿಳೆಯರ ಗೌರವ ರಕ್ಷಣೆ ನನ್ನ ಪ್ರಥಮ ಆದ್ಯತೆ ಮತ್ತು ಇದನ್ನು ನೂರಕ್ಕೆ ನೂರ್ರರಷ್ಟು ಜವಾಬ್ದಾರಿಯುತವಾಗಿ ನಾನು ಮುಂದೆ ಶಾಸಕನಾಗಿ ನಿಭಾಯಿಸಲಿದ್ದೇನೆ ದಯವಿಟ್ಟು ನನ್ನನ್ನು ಆರಿಸಿಯೆಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಶ್ರೀಕರ್ ಪ್ರಭು ಅವರು ನಗರದ ಸಿ ವಿ ನಾಯಕ್ ಹಾಲ್ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ ಮಹಿಳಾ ಮತದಾರರ ಸಮಾವೇಶದಲ್ಲಿ ಘೋಷಿಸಿದರು.
ಹಣಬಲದಿಂದ ಜನ ಸೇವೆ ಮಾಡದೇ ಚುನಾವಣೆ ಗೆಲ್ಲುವುದು ಅಸಾಧ್ಯ, ರಾಷ್ಟ್ರೀಯ ರಾಜಕೀಯ ಪಕ್ಷಗಳಲ್ಲಿ ಖಾಲಿ ಪೋಲಿಗಳು ವಿಜೃಂಬಿಸುತಿದ್ದರೆ ಇದೊಂದು ದುರಂತ ಎಂದು ಈ ಸಂದರ್ಭದಲ್ಲಿ ಅವರು ನುಡಿದರು. ಶ್ರೀಕರ ಪ್ರಭು ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ ಈ ಸಮಾರಂಭದಲ್ಲಿ ನಗರದ ವಿವಿಧ ವರ್ಗಗಳ ಸಾವಿರಾರು ಮಹಿಳೆಯರು ಶ್ರೀಕರ ಪ್ರಭುಗಳಿಗೆ ಬೆಂಬಲ ಸೂಚಿಸಿ ಭಾಗವಹಿಸಿದರು. ಅತಿಥಿಗಳಾಗಿ ಚಿತ್ರಕಲಾ ಪ್ರಭು, ಶ್ರೀಲತಾ ಗೋಪಾಲಕೃಷ್ಣ, ಗೀತಾ ಪಿ ಶೆಟ್ಟಿ, ವೀಣಾ ಸುರೇಶ್, ಜ್ಯೋತಿ ಶೆಟ್ಟಿ, ಪ್ರಸನ್ನ ರವಿ, ಸುಲಕ್ಷಣಾ ಪ್ರಭು, ದಿವ್ಯಶ್ರೀ, ಮಾಯಾ ನಾಯಕ್, ಉಮಾವತಿ ಹಾಗು ಶ್ರೀಕರ ಪ್ರಭು ಅಭಿಮಾನಿ ಬಳಗದ ಅಧ್ಯಕ್ಷರಾದ ಕೆ. ಪಿ. ಶೆಟ್ಟಿ ಬೇಡೆಮಾರ್ ಅವರು ಉಪಸ್ಥಿತರಿದ್ದರು.