Wednesday, January 22, 2025
ಸುದ್ದಿ

ಮಂಗಳೂರು ನಾಗುರಿ ಅಂಜೆಲೂರ್ ಗಾರ್ಡಿಯನ್ ಏಂಜಲ್ಸ್ ಚರ್ಚ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಡಿ. ವೇದವ್ಯಾಸ್ ಕಾಮತ್- ಕಹಳೆ ನ್ಯೂಸ್

ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯ 37ನೇ ಮರೋಳಿ ವಾರ್ಡಿನ ನಾಗುರಿ ಅಂಜೆಲೂರ್ ಗಾರ್ಡಿಯನ್ ಏಂಜಲ್ಸ್ ಚರ್ಚ್ ಬಳಿ 33 ಲಕ್ಷ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ಮಾತನಾಡಿದ ಮಂಗಳೂರು ದಕ್ಷಿಣದ ಶಾಸಕರಾದ ಡಿ. ವೇದವ್ಯಾಸ್ ಕಾಮತ್, ಮರೋಳಿ ವಾರ್ಡಿನ ಅಂಜೆಲೂರ್ ಗಾರ್ಡಿಯನ್ ಏಂಜಲ್ಸ್ ಚರ್ಚ್ ಬಳಿ ಅಭಿವೃದ್ಧಿ ಕಾಮಗಾರಿಯ ಕುರಿತು ಸ್ಥಳೀಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿದ ಪ್ರಕಾರ 33 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ವಾರ್ಡಿನ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದರು.


ಈ ಸಂದರ್ಭದಲ್ಲಿ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂದೀಪ್ ಗರೋಡಿ, ಸ್ಥಳೀಯ ಕಾರ್ಪೋರೇಟರ್ ಕೇಶವ್ ಮರೋಳಿ, ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ ಚಂದ್ರ ಶೆಟ್ಟಿ, ನಾಗೋರಿ ಚರ್ಚಿನ ಧರ್ಮಗುರುಗಳಾದ ಫಾದರ್ ವಿಲಿಯಂ ಮಿನೇಜಸ್ ಹಾಗೂ ಚರ್ಚಿನ ಉಪಾಧ್ಯಕ್ಷರುಗಳಾದ ನೋಯೆಲ್ ಪಿಂಟೋ, ಬಿಜೆಪಿ ಪ್ರಮುಖರಾದ ಸಂಜಯ್ ಪ್ರಭು, ಪ್ರಭಾ ಮಾಲಿನಿ, ಆಶಾ ಡಿ ಸಿಲ್ವ ಅಜಯ್ ಕುಮಾರ್, ಕಿರಣ್ ರೈ, ಕಿರಣ್ ದೇವಾಡಿಗ, ಪ್ರಕಾಶ್ ಗರೋಡಿ, ವಸಂತ್ ಪೂಜಾರಿ, ಸರಳ ಮರೋಳಿ, ಮಾಲತಿ ಶೆಟ್ಟಿ, ಜಗದೀಶ್ ಶೆಣೈ, ಫೆಡ್ರಿಕ್ ಪೌಲ್, ಅಜಿತ್ ಡಿ.ಸಿಲ್ವ, ಜಗನ್ನಾಥ ಆಡು ಮರೋಳಿ, ಜಗದೀಶ್, ಪ್ರಶಾಂತ್, ಕೃಷ್ಣ , ಪ್ರವೀಣ್, ರಘು, ಮೋಹನ್, ಸತೀಶ್, ಹರಿ ಭಂಡಾರಿ, ಮಹೇಶ್, ಚರ್ಚಿನ ಪ್ರಮುಖರಾದ ಅಲ್ವಿನ್ ಡಿಸಿಲ್ವ, ಆಲ್ಬರ್ಟ್ ಲಸ್ರಾಡೊ, ಲ್ಯಾನ್ಸಿ ಮೊಂತೆ ರೋ, ಹುಬರ್ಟ್ ಲಸ್ರಾಡೊ, , ಫೆಲಿಕ್ಸ್ ಮೊರಾಸ್, ವಾರ್ಡಿನ ಗುರಿಕಾರದ ನೋರ ಫನಾರ್ಂಡೀಸ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು