Wednesday, January 22, 2025
ಬಂಟ್ವಾಳ

ಹಿರಿಯ ವಿದ್ಯಾರ್ಥಿ ಸಂಘ ಕುದುರೆಬೆಟ್ಟು ಇದರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಂದನಾ ಕಾರ್ಯಕ್ರಮ- ಕಹಳೆ ನ್ಯೂಸ್

ಕಲ್ಲಡ್ಕ : ಹಿರಿಯ ವಿದ್ಯಾರ್ಥಿ ಸಂಘ ಕುದುರೆಬೆಟ್ಟು ಇದರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಂದನಾ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ರಾಮ ವಿದ್ಯಾಕೇಂದ್ರದ ಶಿಕ್ಷಕರಾದ ಜಿನ್ನಪ್ಪ ಎಳ್ತಿಮಾರ್, ಗೋಳ್ತಮಜಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾರಾಯಣಗೌಡ ಮತ್ತು ಕುದುರೆಬೆಟ್ಟು ಶಾಲಾ ಸಹಶಿಕ್ಷಕಿ ಶ್ರೀಮತಿ ಮಮತಾ ಟೀಚರ್ ಅತಿಥಿ ಶಿಕ್ಷಕಿಯರಾದ ರೇಖಾ ನೆಟ್ಲ, ಶ್ರೀಮತಿ ಬಬಿತಾ ಪ್ರಶಾಂತ್ ಅಂಗನವಾಡಿ ಶಿಕ್ಷಕಿ ಶ್ರೀಮತಿ ಸುರೇಖಾ ಟೀಚರ್, ಸಹಾಯಕಿ ಶ್ರೀಮತಿ ಜಯಂತಿ ಇವರಿಗೆ ಸ್ಮರಣಿಕೆ ನೀಡಿ ಗುರು ನಮನ ಸಲ್ಲಿಸಲಾಯಿತು.. ಹಾಗೂ ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ಶ್ರೀಮತಿ ಚೇತನ ಟೀಚರ್ ಅವರಿಗೆ ಸ್ಮರಣಿಕೆ ನೀಡಿ ಗುರುನಮನ ಸಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಗ್ರಾಮದೈವದ ಚಾಕಿರಿ ಸೇವೆ ಮಾಡುವ ಕೃಷ್ಣಪ್ಪ ಪೂಜಾರಿ ಬೋಲ್ಪೊಡಿ , ಹಿರಿಯರಾದ ಶೇಖರ್ ಸಾಲಿಯಾನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಮೇಶ್. ಕೆ, ಹಿರಿಯ ವಿದ್ಯಾರ್ಥಿ ಸಂಘದ ಸಲಹೆಗಾರರಾದ , ಸುಂದರ ಪಾದೆ ಪ್ರಧಾನ ಕಾರ್ಯದರ್ಶಿ ಪುರಂದರ ದಾಸಕೊಡಿ, ರವಿ ಸುವರ್ಣ ಬೈಲು ,ನಿತಿನ್ ಕುಮಾರ್, ಸನತ್ ಕುಮಾರ್, ಪ್ರಕಾಶ್ ,ನಿತಿನ್ ಮಿತ್ತಬೈಲು, ಸಂತೋಷ್ ಕುಮಾರ್ ಬೊಳ್ಪೋಡಿ , ಶ್ರೀಮತಿ ಸುಲತ, ಶ್ರೀಮತಿ ಶಶಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಸದಸ್ಯರು ವಿದ್ಯಾಭಿಮಾನಿಗಳು ಪಾಲ್ಗೊಂಡಿದ್ದರು. ಕು! ಪೂಜಾ ಮತ್ತು ಕು! ಕುಶಿ ಪ್ರೇರಣ ಗೀತೆಯೊಂದಿಗೆ ಹಿರಿಯ ವಿದ್ಯಾ ಸಂಘದ ಅಧ್ಯಕ್ಷರಾದ ಸುನಿಲ್ ಕುಮಾರ್ ಸ್ವಾಗತಿಸಿ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಿವರಾಜ್ ವಂದಿಸಿದರು.