Wednesday, January 22, 2025
ಸುಳ್ಯ

ಸುಳ್ಯ ರಬ್ಬರ್ ಟ್ಯಾಪರ್ಸ್ ಮಜ್ದೂರು ಸಂಘದ ವತಿಯಿಂದ ಸಚಿವ ಅಂಗಾರರಿಗೆ ಅಭಿನಂದನೆ – ಕಹಳೆ ನ್ಯೂಸ್

ಸುಳ್ಯ: ಕರ್ನಾಟಕ ಸರ್ಕಾರದ ಬಂದರು ಮತ್ತು ಮೀನುಗಾರಿಕಾ ಸಚಿವರಾದ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಸ್.ಅಂಗಾರರನ್ನು ರಬ್ಬರ್ ಟ್ಯಾಪರ್ಸ್ ಮಜ್ದೂರು ಸಂಘದ (ಭಾರತೀಯ ಮಜ್ದೂರು ಸಂಘ ಬೆಳ್ತಂಗಡಿ ಸಂಯೋಜಿತ) ವತಿಯಿಂದ ಸುಳ್ಯದಲ್ಲಿ ಭೇಟಿ ಮಾಡಿ ಅಭಿನಂದಿಸಲಾಯಿತು. ನಂತರ ರಬ್ಬರ್ ಟ್ಯಾಪರ್ಸ್ ಕೃಷಿ ಕಾರ್ಮಿಕರ ಕಷ್ಟ ನಷ್ಟಗಳನ್ನು ಸಚಿವರಿಗೆ ಮನವರಿಕೆ ಮಾಡಲಾಯಿತು.


ಈ ಸಂದರ್ಭದಲ್ಲಿ ರಬ್ಬರ್ ಟ್ಯಾಪರ್ಸ್ ಮಜ್ದೂರು ಸಂಘದ ಪರವಾಗಿ ಕಾರ್ಮಿಕರ ವಿವಿಧ ಬೇಡಿಕೆಯ ಮನವಿಯನ್ನು ಅರ್ಜಿಯ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಬ್ಬರ್ ಟ್ಯಾಪರ್ಸ್ ಮಜ್ದೂರು ಸಂಘದ ಅಧ್ಯಕ್ಷರಾದ ದಯಾನಂದ, ಪ್ರಧಾನ ಕಾರ್ಯದರ್ಶಿ ನಾಗರಾಜ್, ಖಜಾಂಚಿ ರಾಜ, ಸಂಘಟನ ಕಾರ್ಯದರ್ಶಿ ಭುವನೇಶ್ವರ ಕಾರಿಂಜ, ಬಂಟ್ವಾಳ ತಾಲ್ಲೂಕಿನ ರಬ್ಬರ್ ಟ್ಯಾಪರ್ಸ್ ಮಜ್ದೂರು ಸಂಘದ ಅಧ್ಯಕ್ಷರಾದ ಮನೋಜ್ ಮೂರ್ಜೆ, ಬೆಳ್ತಂಗಡಿ ತಾಲ್ಲೂಕಿನ ರಬ್ಬರ್ ಟ್ಯಾಪರ್ಸ್ ಮಜ್ದೂರು ಸಂಘದ ಅಧ್ಯಕ್ಷರಾದ ಯೋಗೀಶ್ ಮುಂತಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು