ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾರಚರಣೆ ಹಾಗೂ ಶಿಕ್ಷಣ ಸಂಸ್ಥೆಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ – ಕಹಳೆ ನ್ಯೂಸ್
ಮೂಡುಬಿದಿರೆ: ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಯಲ್ಲಿ ಶಿಕ್ಷಕರ ದಿನಾರಚರಣೆ ಹಾಗೂ ಶಿಕ್ಷಣ ಸಂಸ್ಥೆಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಶ್ರ್ರೀರಾಮ ವಿದ್ಯಾಕೇಂದ್ರ, ಕಲ್ಲಡ್ಕ ಮತ್ತು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕಲ್ಲಡ್ಕ ಡಾ.ಪ್ರಭಾಕರ ಭಟ್ ರವರು ಸಂಸ್ಕøತಿ, ದೇಶಿಯ ಶಿಕ್ಷಣ ವ್ಯವಸ್ಥೆಯಿಂದಾಗಿ ಭಾರತವು ಜಗತ್ತಿನಲ್ಲಿ ಶ್ರೇಷ್ಠವಾದ ಸ್ಥಾನಮಾನ ಪಡೆದಿದೆ. ನಮ್ಮ ದೇಶವನ್ನು ಸರ್ವಶ್ರೇಷ್ಠ ಎಂದು ಭಾವಿಸಿ, ದೇಶಿಯ ಶೈಕ್ಷಣಿಕ ವ್ಯವಸ್ಥೆಯೊಂದಿಗೆ ಮುನ್ನಡೆದರೇ ನಮ್ಮ ಚಿಂತನೆಗಳು ಬದಲಾಗುತ್ತದೆ. ಇದರಿಂದ ದೇಶದ ಸರ್ವಶ್ರೇಷ್ಠತೆ ಮಹತ್ವ ಬಂದು ಭಾರತ ಜಗದ್ಗುರು ಆಗುತ್ತದೆ ಎಂದು ಹೇಳಿದರು.
ಇನ್ನಿತರ ದೇಶಗಳಲ್ಲಿ ಶ್ರೀಮಂತಿಕೆಗೆ ಮಣೆ ಹಾಕಿದರೆ ಭಾರತದಲ್ಲಿನ ಪರಿಸ್ಥಿತಿ ಭಿನ್ನವಾಗಿದೆ. ನಮ್ಮ ದೇಶದಲ್ಲಿ ಒಬ್ಬ ಪ್ರಧಾನ ಮಂತ್ರಿಗೆ ಸಿಗುವ ಗೌರವಕ್ಕಿಂತ ಹೆಚ್ಚು ಗೌರವ ಓರ್ವ ಸರ್ವಸಂಗ ಪರಿತ್ಯಾಗಿ ಸನ್ಯಾಸಿಗೆ ದಕ್ಕುತ್ತದೆ. ಪಾಶ್ಚ್ಯಾತರು ನಮ್ಮ ದೇಶಕ್ಕೆ ಬಂದ ಮೇಲೆ ನಮ್ಮ ದೇಶದ ಚಿಂತನೆ ಬದಲಾಗಿದೆ. ಈಗ ಎಲ್ಲದಕ್ಕೂ ಪಶ್ವಿಮ ದೇಶಗಳತ್ತ ನೋಡುವ ಮನೋಭಾವನೆಯನ್ನು ಬೆಳೆಸಿಕೊ0ಡಿದ್ದೇವೆ. ಭಾರತೀಯ ಸ0ಸ್ಕñತಿಯನ್ನು ಆಳವಾಗಿ ಬಲ್ಲ ಶ್ರೇಷ್ಟ ಶಿಕ್ಷಕ ಸರ್ವಪಳ್ಳಿ ರಾಧಾಕೃಷ್ಣನ್. ಭಾರತೀಯ ಸ0ಸ್ಕೃತಿ ಜಗತ್ತಿನಲ್ಲೇ ಶ್ರೇಷ್ಟ ಎ0ದು ಡಾ ಸರ್ವಪಳ್ಳಿ ರಾಧಾಕೃಷ್ಣನ್ ಹೇಳಿದ್ದಾರೆ. ಪಠ್ಯ ವಿಷಯಗಳಿಗೆ ಮಿತಿಗೊಳಿಸದೆ ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಚಿ0ತನೆಗಳನ್ನು ಬೆಳೆಸುವಲ್ಲಿ ಹೆತ್ತವರು ಮತ್ತು ಶಿಕ್ಷಕರ ಪಾತ್ರ ಬಹಳ ದೊಡ್ಡದು ಎ0ದರು.
ಪ್ರಾಸ್ತಾವಿಕ ಮಾತುಗಳನ್ನು ಆಡಿದ ಕರ್ನಾಟಕ ಸರಕಾರದ ಮಾಜಿ ಸಚಿವ, ಸ0ಸ್ಥೆಯ ಗೌರವಾಧ್ಯಕ್ಷರಾದ ಅಭಯಚ0ದ್ರ ಜೈನ್ ಮಾತನಾಡುತ್ತಾ ಮಾನವ ಕುಲಕ್ಕೆ ಶಿಕ್ಷಣ ಬಹಳ ಅವಶ್ಯಕತೆ ಇದೆ. ಈ ಹಿ0ದೆ ಜನರಿಗೆ ಸೂಕ್ತ ವಿದ್ಯಾಭ್ಯಾಸ ಪಡೆಯಲು ಸೂಕ್ತ ವಿದ್ಯಾ ಸ0ಸ್ಥೆಗಳು ಇರಲಿಲ್ಲ. ಆಗ ಜನರು ಉನ್ನತ ವಿದ್ಯಾಭ್ಯಾಸವನ್ನು ಪಡೆಯದೆ ಮು0ಬೈ, ಮದ್ರ್ರಾಸ್ ನ0ತಹ ಊರುಗಳಿಗೆ ಉದ್ಯೋಗವನ್ನು ಅರಸಿಕೊ0ಡು ಹೋಗುತ್ತಿದ್ದರು. ಆದರೆ ಇ0ದು ಆಧುನಿಕ ತ0ತ್ರಜ್ಞಾನವನ್ನು ಉಪಯೋಗಿಸಿಕೊ0ಡು ಅನೇಕ ವಿದ್ಯಾ ಸ0ಸ್ಥೆಗಳು ಅತ್ಯುತ್ತಮ ವ್ಯವಸ್ಥೆಯೊ0ದಿಗೆ ಶಿಸ್ತಿನಿ0ದ ನಡೆಸಿಕೂ0ಡು ಬರುತ್ತಿವೆ. ಹೊಸ ಪೀಳಿಗೆಯವರು ಸಾಧನೆ ಮಾಡಬೇಕಾದರೆ ಇ0ಥಹ ಶಿಕ್ಷಣ ಸ0ಸ್ಥೆಗಳ ಅಗತ್ಯವಿದೆ ಎ0ದರು.
ಶಿಕ್ಷಕ ವೃತ್ತಿಯ ಜೊತೆಗೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಶಾರದಾ ಶಿಕ್ಷಣ ಸಮೂಹ ಸ0ಸ್ಥೆಗಳ ಅಧ್ಯಕ್ಷರಾದ ಪ್ರೊ.ಎ0 ಬಿ ಪುರಾಣಿಕ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎ0 ಮೋಹನ್ ಆಳ್ವ ಹಾಗೂ ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸ0ಸ್ಥೆಗಳ ಅಧ್ಯಕ್ಷರಾದ ಪ್ರೊ ನರೇ0ದ್ರ ಎಲ್ ನಾಯಕ್ ಇವರನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಶಾರದಾ ಶಿಕ್ಷಣ ಸಮೂಹ ಸ0ಸ್ಥೆಗಳ ಅಧ್ಯಕ್ಷರಾದ ಪ್ರೊ. ಎ0.ಬಿ ಪುರಾಣಿಕ್ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಶಿಕ್ಷಣ ವ್ಯವಸ್ಥೆಗೆ ಇಂದು ಮಹತ್ವ ಬಂದಿದೆ. ರ್ಯಾಂಕ್, ಅಂಕಕ್ಕೆ ಮಾತ್ರ ಸೀಮಿತವಾಗಿದ್ದ ಶಿಕ್ಷಣ ವ್ಯವಸ್ಥೆ ಎಕ್ಸಲೆಂಟ್ ಮೂಡುಬಿದಿರೆ, ಆಳ್ವಾಸ್, ಎಕ್ಸ್‍ಪರ್ಟ್‍ನಂತಹ ಶಿಕ್ಷಣ ಸಂಸ್ಥೆಗಳ ಪ್ರಯೋಗಶೀಲತೆ, ಬದ್ಧತೆಯಿಂದ ಜೀವನ ಮೌಲ್ಯವನ್ನು ನೀಡುವ ಶಿಕ್ಷಣವಾಗಿ ರೂಪುಗೊಂಡಿದೆ. ದೇಶವು ಉತ್ತಮ ಶಿಕ್ಷಕರ ನಿರೀಕ್ಷೆಯಲ್ಲಿ ಸದಾ ಇರುತ್ತದೆ. ಭಾರತೀಯ ಜೀವನ ಮೌಲ್ಯವನ್ನು ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಕ ಉತ್ತಮ ಶಿಕ್ಷಕನಾಗಬಲ್ಲ. ಶಿಕ್ಷಕನಿಗೆ ಭಗವ0ತನ ಸ್ಥಾನ ನೀಡಿದ ಸನಾತನ ಸ0ಸ್ಕೃತಿ ನಮ್ಮದು. ಗುರುಕುಲ ಶಿಕ್ಷಣ ಪದ್ಧತಿ ನಮ್ಮ ರಾಷ್ಟ್ರದಲ್ಲಿ ಪ್ರಚಲಿತವಾಗಿತ್ತು. ಇಲ್ಲಿನ ಶಿಕ್ಷಣ ಪದ್ಧತಿಯನ್ನು ಸ0ಪೂರ್ಣವಾಗಿ ಬ್ರಿಟಿಷ್ ಅಧಿಕಾರಿ ಮೆಕಾಲೆ ಬದಲಾಯಿಸಿದ ನ0ತರ ಒಬ್ಬ ಮಗುವಿನ ಸರ್ವಾ0ಗೀಣ ಬೆಳವಣಿಗೆಯ ಬಗ್ಗೆ ಶಿಕ್ಷಣ ಪದ್ಧತಿ ಕಾಳಜಿ ವಹಿಸುವಲ್ಲಿ ವಿಫಲವಾಯಿತು. ಹೆತ್ತವರು, ಗುರುಗಳಿಗೆ ಗೌರವ ಕೊಡುವುದರ ಜೊತೆಗೆ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು ಎ0ದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಎ0 ಮೋಹನ್ ಆಳ್ವ ಮಾತನಾಡುತ್ತಾ, ಉತ್ತಮ ಶಿಕ್ಷಣ ವ್ಯವಸ್ಥೆ ಎಂಬುವುದು ಕೇವಲ ಶಿಕ್ಷಕ, ವಿದ್ಯಾರ್ಥಿ ನಡುವಿನ ವ್ಯವಸ್ಥೆಯಲ್ಲ. ಅದರೊಂದಿಗೆ ಶಿಕ್ಷಣ ಸಂಸ್ಥೆಗಳು, ಪಾಲಕರ ಬದ್ಧತೆಗಳನ್ನೂ ಅದು ಒಳಗೊಂಡಿರುತ್ತದೆ. ಉತ್ತಮ ವಿದ್ಯಾರ್ಥಿ, ಉತ್ತಮ ಶಿಕ್ಷಣ ಸಂಸ್ಥೆಗಳು ರೂಪುಗೊಳ್ಳಬೇಕಾದರೆ ಅದಕ್ಕೆ ಸಂಬಂಧಪಟ್ಟ ಎಲ್ಲರ ಸಮರ್ಪಣಾ ಮನೋಭಾವ ಬೇಕಾಗುತ್ತದೆ. ವಿದ್ಯಾಭ್ಯಾಸದಿ0ದ ಎರಡು ರೀತಿಯ ಶಾಲೆಗಳನ್ನು ನಾವು ಎದುರಿಸುತ್ತೇವೆ. ಒ0ದು ಪ್ರಾಥಮಿಕದಿ0ದ ಉನ್ನತ ಪದವಿಯವರೆಗೂ ಪ್ರಮಾಣ ಪತ್ರವನ್ನು ನೀಡುವ ಶಿಕ್ಷಣ. ಇನ್ನೊ0ದು ಜೀವನದ ಪಾಠವನ್ನು ನೀಡುವ ಬಯಲು ಶಾಲೆಯ ಶಿಕ್ಷಣ. ನಾನು ಬಯಲು ಶಾಲೆಯ ಶಿಕ್ಷಣದಿ0ದ ರೂಪುಗೊ0ಡವನು. ಪ್ರೌಢಾವಸ್ಥೆಗೆ ನೀವು ಬ0ದ ಮೇಲೆ ನಿಮ್ಮ ಕಾಲ ಮೇಲೆ ನೀವು ನಿಲ್ಲುವ0ತಾಗಲು ಗುರಿಯನ್ನು ನಿಗದಿ ಮಾಡಿ ಅದರ0ತೆ ಕಾರ್ಯಪ್ರವೃತ್ತರಾಗಬೇಕು. ಸದ್ಯದ ಸಾ0ಕ್ರಾಮಿಕ ರೋಗದ ಬಗ್ಗೆ ಹೆದರಬೇಕಾಗಿಲ್ಲ. ಸಾ0ಕ್ರಾಮಿಕ ರೋಗಗಳು, ಪ್ರಾಕೃತಿಕ ವಿಕೋಪಗಳು ಈ ಹಿ0ದೆಯೂ ಬ0ದಿವೆ, ಇನ್ನು ಮು0ದೆಯೂ ಬರುತ್ತವೆ. ನಮ್ಮ ನಾಡನ್ನು ಕಾಯುವ ಸೈನಿಕರು, ಆಶಾ ಕಾರ್ಯಕರ್ತರು, ವೈದ್ಯರ ಕಾರ್ಯದಿ0ದ ನಾವು ಪ್ರೇರಣೆಯನ್ನು ಪಡೆಯಬೇಕು. ಯಾವುದೇ ಸಮಸ್ಯೆಗಳಿಗೂ ಧೃತಿಗೆಡದೆ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊ0ಡು ಯಶಸನ್ನುಸಾಧಿಸಿ ಎ0ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಎಕ್ಸ್ ಪರ್ಟ್ ಶಿಕ್ಷಣ ಸಮೂಹ ಸ0ಸ್ಥೆಗಳ ಅಧ್ಯಕ್ಷರಾದ ಪ್ರೊ ನರೇ0ದ್ರ ಎಲ್.ನಾಯಕ್ ಮಾತನಾಡುತ್ತಾ, ಒಬ್ಬ ಶಿಕ್ಷಕನ ಶಕ್ತಿಗೆ ಅತ್ಯುತ್ತಮ ನಿದರ್ಶನ ಈ ಎಕ್ಸಲೆ0ಟ್ ಶಿಕ್ಷಣ ಸ0ಸ್ಥೆ. ಇ0ಜಿನಿಯರ್, ವೈದ್ಯರು ಮು0ತಾದ ವೃತ್ತಿಗಿ0ತ ಒಳ್ಳೆಯ ಶಿಕ್ಷಕರ ಅವಶ್ಯಕತೆ ನಮ್ಮ ದೇಶಕ್ಕೆ ಬಹಳಷ್ಟಿದೆ. ಎಕ್ಸಲೆ0ಟ್ ಸ0ಸ್ಥೆ ಶಿಕ್ಷಣಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಿ ಕೊಟ್ಟಿದೆ. ಅದರ ಸದುಪಯೋಗವನ್ನು ಪಡೆದುಕೊ0ಡು ಉತ್ತಮ ಅಧ್ಯಾಪಕರ ನೆರವನ್ನು ಪಡೆದು ಜೀವನದಲ್ಲಿ ಯಶಸ್ಸನು ಸಾಧಿಸಿ ಎ0ದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಎಕ್ಸಲೆ0ಟ್ ಶಿಕ್ಷಣ ಸಮೂಹ ಸ0ಸ್ಥೆಗಳ ಅಧ್ಯಕ್ಷರಾದ ಯುವರಾಜ್‍ಜೈನ್ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ, ಕಷ್ಟಗಳನ್ನು ನಾವೆಲ್ಲರೂ ಅನುಭವಿಸುತ್ತೇವೆ. ಆದರೆ ಅವೆಲ್ಲವನ್ನು ಎದುರಿಸುವ ಆ0ತರಿಕ ಶಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. ಛಲವೊ0ದಿದ್ದರೆ ಮಾತ್ರ ಆರ0ಭಿಸಿದ ಕಾರ್ಯವನ್ನು ಅಡೆ ತಡೆಗಳ ನಡುವೆಯೂ ಮುಗಿಸಲು ಸಾಧ್ಯ ಉತ್ತಮ ಸ0ಸ್ಕಾರದ ಜೊತೆಗೆ ಸಾಧನೆಯನ್ನು ಮಾಡಿದ ಸಭೆಯಲ್ಲಿ ಆಸೀನರಾಗಿರುವ ಶಿಕ್ಷಣ ಸ0ಸ್ಥೆಗಳ ಮುಖ್ಯಸ್ಥರಿ0ದ ನಾವು ಪ್ರೇರಣೆಯನ್ನು ಪಡೆಯಬೇಕು. ಎಲ್ಲರಲ್ಲಿರುವ ಒಳ್ಳೆಯತನವನ್ನು ಪಡೆದು ಅದನ್ನು ಬೆಳೆಸಿಕೊ0ಡು ಜೀವನವನ್ನು ಮುನ್ನಡೆಸಿಕೊ0ಡು ಹೋಗಬೇಕು ಎ0ದು ಹೇಳಿದರು. ಹಾಗೆಯೇ ಎಕ್ಸಲೆ0ಟ್ ಶಿಕ್ಷಣ ಸ0ಸ್ಥೆಯನ್ನು ಆರ0ಭಿಸಿ ಅದನ್ನು ಯಶಸ್ವಿಯಾಗಿ ನಡೆಸಿಕೊ0ಡು ಹೋಗಲು ನೆರವಾದ ಎಲ್ಲರನ್ನೂ ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರನ್ನು ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಗೌರವಿಸಲಾಯಿತು.
ಎಕ್ಸಲೆ0ಟ್ ಸಮೂಹ ಸ0ಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಪ್ರಾ0ಶುಪಾಲ ಪ್ರದೀಪ್‍ಕುಮಾರ್ ಶೆಟ್ಟಿ ವ0ದಿಸಿದರು. ಎಕ್ಸಲೆ0ಟ್ ಆ0ಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕ ರ0ಜಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.