ದಕ್ಷಿಣ ಕನ್ನಡದಲ್ಲಿ ಕೇವಲ ಮೂರು ದಿನ ಮಾತ್ರ ಸರಳ ಗಣೇಶೋತ್ಸವ ಆಚರಣೆಗೆ ಆದೇಶ ನೀಡಿದ ಜಿಲ್ಲಾಡಳಿತ – ಕಹಳೆ ನ್ಯೂಸ್
ಮಂಗಳೂರು: ದ.ಕ ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಣೆ ಸಂಬಂಧ ನಿಯಾಮವಳಿ ಪ್ರಕಟಗೊಂಡಿದೆ. ಸರ್ಕಾರದ ಆದೇಶದಲ್ಲಿ ಕೆಲವು ಬದಲಾವಣೆ
ಮಾಡಿ ದ.ಕ. ಜಿಲ್ಲಾಡಳಿತ ಮಾರ್ಗಸೂಚಿ ಪ್ರಕಟಿಸಿದೆ.
ದ.ಕ ಜಿಲ್ಲೆಯಲ್ಲಿ 3 ದಿನ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಿದ್ದು, ದೇವಸ್ಥಾನ, ಸಮುದಾಯ ಭವನ, ಮನೆಗಳಲ್ಲಿ ಸರಳ ಆಚರಣೆಗೆ ಸೂಚಿಸಿದೆ, ಶಾಮಿಯಾನ ಪೆಂಡಾಲ್ ಹಾಕಿ ಗಣೇಶೋತ್ಸವ ಆಚರಣೆಗೆ ಅವಕಾಶವಿಲ್ಲ. ಯಾವುದೇ ಮೈದಾನ ಅಥವಾ ಜನನಿಬಿಡ ಪ್ರದೇಶಗಳಲ್ಲಿ ಆಚರಣೆ ಇಲ್ಲ ಎಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅದೇಶಿಸಿದ್ದಾರೆ.