Recent Posts

Monday, January 20, 2025
ಬೆಳ್ತಂಗಡಿ

ಉಜಿರೆ ಬೆನಕ ಆಸ್ಪತ್ರೆಯಲ್ಲಿ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಮತ್ತು ರಾಷ್ಟ್ರೀಯ ಪೌಷ್ಟಿಕ ಸಪ್ತಾಹದ ತಾಲೂಕು ಮಟ್ಟದ ಸಮಾರೋಪ ಕಾರ್ಯಕ್ರಮ- ಕಹಳೆ ನ್ಯೂಸ್

ಬೆಳ್ತಂಗಡಿ: ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಬೆಳ್ತಂಗಡಿ ರೋಟರಿ ಆನ್ಸ್ ಕ್ಲಬ್ ಪಂಚಾಯತ್ ಉಜಿರೆ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಮತ್ತು ಶಿಶು ಅಭಿವೃದ್ಧಿಇಲಾಖೆಯ ಸಹಯೋಗದಲ್ಲಿ ನಡೆದ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಮತ್ತು ರಾಷ್ಟ್ರೀಯ ಪೌಷ್ಟಿಕ ಸಪ್ತಾಹದ ತಾಲೂಕು ಮಟ್ಟದ ಸಮಾರೋಪ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆನಕ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಗೋಪಾಲಕೃಷ್ಣ ಅವರು ಬೆಳೆವ ಸಿರಿ ಮೊಳಕೆಯಲ್ಲಿ ಎಂಬುದು ಅರ್ಥಪೂರ್ಣವಾದ ಗಾದೆ. ಯಾವುದೇ ಒಂದು ಬೀಜ ಮೊಳಕೆ ಬಿಟ್ಟ ಕೂಡಲೇ ಅದರ ಆರೈಕೆ ಮಾಡಬೇಕು. ಸಮಯಕ್ಕೆ ಸರಿಯಾಗಿ ಬೇಕಾದ ಪೋಷಕಾಂಶಗಳನ್ನು ನೀಡಿದಾಗ ಮೊಳಕೆಯೊಡೆದ ಬೀಜ ಸಮೃದ್ಧವಾಗಿ ಬೆಳೆದು ಉತ್ತಮ ಫಲವನ್ನು ಕೊಡಲು ಸಾಧ್ಯ. ಅಂತೆಯೇ ಮಕ್ಕಳನ್ನು ಬಾಲ್ಯದಲ್ಲಿ ಸರಿಯಾಗಿ ಪಾಲನೆ ಪೋಷಣೆ ಮಾಡುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಬೇಕು ಎಂದು ಕರೆ ನೀಡಿದರು.

ಬೆನಕ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯ ಡಾ.ಶಂತನು ಪ್ರಭು ಮಾತನಾಡುತ್ತಾ ಮಕ್ಕಳ ಆರೋಗ್ಯ ಹದಗೆಡಲು ಮುಖ್ಯ ಕಾರಣ ಅಪೌಷ್ಟಿಕತೆ. ಆದ್ದರಿಂದ ಮುಂದಿನ ಕೊರೋನಾದ ಮೂರನೇ ಅಲೆಯನ್ನು ಎದುರಿಸುವಲ್ಲಿ ಮಕ್ಕಳ ಅಪೌಷ್ಟಿಕತೆಯ ನಿವಾರಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಕರೆ ಹೇಳಿದರು.
ಅಂಗನವಾಡಿಗಳ ಮೇಲ್ವಿಚಾರಕಿ ರತ್ನಾವತಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸೇವಿಸುವ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಪೋಷಕಾಂಶಗಳು ಇಲ್ಲದೇ ಇದ್ದಲ್ಲಿ ಅಪೌಷ್ಟಿಕತೆ ತಲೆದೋರಿ ಮಕ್ಕಳ ದೇಹದ ಬೆಳವಣಿಗೆ ಹಾಗೂ ರೋಗನಿರೋಧಕ ಶಕ್ತಿ ಕುಂದುತ್ತವೆ. ಆದುದರಿಂದ ಪೌಷ್ಟಿಕ ಆಹಾರದ ಬಗ್ಗೆ ತಿಳುವಳಿಕೆ ಅತೀ ಅಗತ್ಯ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ತಂಗಡಿ ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ನವೀನಾ ಜಯ ಜಯಕುಮಾರ್ ಮಾತನಾಡುತ್ತ ಅಪೌಷ್ಟಿಕತೆಗೆ ಮುಖ್ಯ ಕಾರಣ ಮಕ್ಕಳ ಆರೋಗ್ಯ ಮತ್ತು ಅಗತ್ಯ ಆಹಾರ ಪದ್ಧತಿಯ ಬಗ್ಗೆ ಹಾಗೂ ಆಹಾರದ ಪೋಷಕಾಂಶಗಳ ಬಗ್ಗೆ ಗಮನ ನೀಡದಿರುವುದೇ ಆಗಿದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಲಭ್ಯವಿರುವ ಹಾಗೂ ಮನೆಯಲ್ಲೇ ತಯಾರಿಸಬಹುದಾದ ಸಾಂಪ್ರದಾಯಿಕ ಆಹಾರದ ಬಗ್ಗೆ ಆಸಕ್ತಿವಹಿಸಬೇಕು ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆನಕ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕಾರ್ಯಕ್ರಮ ನಿರ್ವಹಿಸಿದರು, ಆಸ್ಪತ್ರೆಯ ಮ್ಯಾನೇಜರ್ ದೇವಸ್ಯ ವರ್ಗಿಸ್ ಸ್ವಾಗತಿಸಿ, ರೋಟರಿ ಆನ್ಸ್ ಕಾರ್ಯದರ್ಶಿ ಡಾ. ಭಾರತಿ ಗೋಪಾಲಕೃಷ್ಣ ವಂದಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯವಾಗಿ ಲಭ್ಯವಿರುವ ಪೌಷ್ಠಿಕಾಂಶಯುಕ್ತ ಆಹಾರ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು ೬೦ ಮಕ್ಕಳ ತಪಾಸಣೆಯನ್ನು ನಡೆಸಿ ಅಪೌಷ್ಟಿಕತೆಯಿರುವ ಆಯ್ದ ೫೦ ಮಕ್ಕಳಿಗೆ ಪ್ರೊಟೀನ್ ಪೌಡರ್ ವಿತರಿಸಲಾಯಿತು