Recent Posts

Sunday, January 19, 2025
ಪುತ್ತೂರು

ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಮಾಹಿತಿ ಕಾರ್ಯಾಗಾರ–ಕಹಳೆ ನ್ಯೂಸ್

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾಂಸ್ಕøತಿಕ ಹಾಗೂ ವಾರ್ಷಿಕ ಸಂಚಿಕೆ ಸಮಿತಿಗಳ ಸದಸ್ಯರಿಗಾಗಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ, ಮಾತನಾಡಿದ, ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಅವರು ಸಾಂಸ್ಕøತಿಕ ತಂಡಗಳು ಆಯಾ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸುವಲ್ಲಿ ಸಹಕಾರಿ. ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳು ಅನಾವರಣಗೊಳ್ಳುವುದಕ್ಕೆ ವಿದ್ಯಾಸಂಸ್ಥೆಗಳಲ್ಲಿ ಸರಿಯಾದ ವೇದಿಕೆ ಕಲ್ಪಿಸಲ್ಪಟ್ಟಾಗ ವಿದ್ಯಾರ್ಥಿಗಳು ಸರ್ವತೋಮುಖ ಬೆಳವಣಿಗೆಗಳನ್ನು ಕಾಣುವುದಕ್ಕೆ ಸಾಧ್ಯ. ಈ ನೆಲೆಯಿಂದ ಶಿಕ್ಷಕರಿಗೆ ಬಹುದೊಡ್ಡ ಜವಾಬ್ದಾರಿಯಿದೆ. ವಾರ್ಷಿಕ ಸಂಚಿಕೆ ಆಯಾ ಸಂಸ್ಥೆಯನ್ನು ಸಮಾಜದ ಮುಂದೆ ಕಟ್ಟಿಕೊಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿನ ಬರವಣಿಗೆ, ಕಲೆಯೇ ಮೊದಲಾದ ಪ್ರತಿಭೆಗಳಿಗೆ ವೇದಿಕೆಯಾಗುವುದಲ್ಲದೆ ಸಂಸ್ಥೆಯ ಇತಿಹಾಸವನ್ನು ದಾಖಲೀಕರಣಗೊಳಿಸುವಲ್ಲಿ ವಾರ್ಷಿಕ ಸಂಚಿಕೆಗಳು ಅನಿವಾರ್ಯ. ಓದಿನ ಜತೆಗೆ ಸಾಂಸ್ಕøತಿಕವಾಗಿಯೂ, ಸಾಹಿತ್ಯಿಕವಾಗಿಯೂ ವಿದ್ಯಾರ್ಥಿಗಳು ಬೆಳವಣಿಗೆಯನ್ನು ಕಂಡುಕೊಳ್ಳುವಂತಾಗಬೇಕು. ಆಗ ಮಾತ್ರ ತಾನು ಓದಿದ ಸಂಸ್ಥೆಯ ಬಗೆಗೆ ಆ ವಿದ್ಯಾರ್ಥಿ ಹೆಚ್ಚು ಧನ್ಯತೆಯನ್ನು ಹೊಂದಬಹುದು ಎಂದು ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಮಾತನಾಡಿ ಅನೇಕ ವಿದ್ಯಾರ್ಥಿಗಳಲ್ಲಿ ವಿವಿಧ ಪ್ರತಿಭೆಗಳು ಸುಪ್ತಾವಸ್ಥೆಯಲ್ಲಿರುತ್ತವೆ. ಅದನ್ನು ಗುರುತಿಸುವ ಕಾರ್ಯ ಶಿಕ್ಷಕರಿಂದಾಗಬೇಕಿದೆ. ಅದರಲ್ಲೂ ಎಸ್‍ಎಸ್‍ಎಲ್‍ಸಿ, ಪಿಯುಸಿ ಯಂತಹ ಹಂತದಲ್ಲಿ ಓದಿನ ಒತ್ತಡವೇ ಅಧಿಕವಾಗಿರುವಾಗ ಪ್ರತಿಭೆಯ ಅನಾವರಣಕ್ಕೆ ಅವಕಾಶವಿಲ್ಲ ಎಂಬ ಭಾವನೆಯೂ ಬೆಳೆಯುವುದಕ್ಕೆ ಸಾಧ್ಯ. ಆದರೆ ಅಧ್ಯಯನದ ಜತೆಗೆ ವಿವಿಧ ಮುಖಗಳಲ್ಲಿ ವಿದ್ಯಾರ್ಥಿಯ ಅಭಿವೃದ್ಧಿಯ ನೆಲೆಯಿಂದ ಶಿಕ್ಷಕಕರು ಕಾರ್ಯತತ್ಪರರಾಗುವುದು ಉತ್ತಮ ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ, ಉಪಪ್ರಾಚಾರ್ಯೆ ಸುಜನಿ ಬೋರ್ಕರ್, ವಿವಿಧ ಅಂಬಿಕಾ ಸಂಸ್ಥೆಗಳ ಸಾಂಸ್ಕøತಿಕ ಹಾಗೂ ವಾರ್ಷಿಕ ಸಂಚಿಕೆ ಸಮಿತಿಗಳ ಸಂಯೋಜಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು