ಬಂಟ್ವಾಳ: ನೆಹರು ಯುವ ಕೇಂದ್ರ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ನಗರ ಆರೋಗ್ಯ ಕೇಂದ್ರ ಬಂಟ್ವಾಳ ಸ್ನೇಹಾಂಜಲಿ ಸೇವಾ ಸಂಫ(ರಿ) ಅಜ್ಜಿಬೆಟ್ಟು – ಬಿ.ಸಿ.ರೋಡ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೊವೀಡ್-19 ಜನಜಾಗೃತಿ ಕಾರ್ಯಕ್ರಮ ಹಾಗೂ ಲಸಿಕೆ ವಿತರಣೆ ಕಾರ್ಯಕ್ರಮವು ಬಿ.ಸಿ.ರೋಡಿನ ಅಜ್ಜಿಬೆಟ್ಟು ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಬಂಟ್ವಾಳ ತಾಲೂಕಿನ ಮಾನ್ಯ ಶಾಸಕರಾದ ಶ್ರೀ ರಾಜೇಶ್ ನಾಯಕ್ ಉಳಿಪಾಡಿಗುತ್ತು ಭೇಟಿ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಗರ ಆರೋಗ್ಯಕೇಂದ್ರ ಆರೋಗ್ಯಾಧಿಕಾರಿಯಾದ ಅಶ್ವಿನಿ , ಅಕ್ಷತಾ ಹಾಗೂ ಸಿಬ್ಬಂದಿಗಳು ಮತ್ತು ನೆಹರು ಯುವ ಕೇಂದ್ರ ಮಂಗಳೂರು ಜಿಲ್ಲಾ ಯುವ ಸಮನ್ವಯಧಿಕಾರಿ ರಘವೀರ್ ಸೂಟರ್ ಪೇಟೆ, ತಾಲೂಕು ಯುವ ಸಂಯೋಜಕ ಆಶಿಶ್ ಅಜ್ಜಿಬೆಟ್ಟು ಹಾಗೂ ಸ್ನೇಹಾಂಜಲಿ ಸೇವಾ ಸಂಘದ ಪ್ರಮುಖರಾದ ಸದಾನಂದ ರಂಗೋಲಿ, ರಾಜೇಶ್, ನಾಗೇಶ್ ಅಜ್ಜಿಬೆಟ್ಟು, ಗೋಪಾಲ ಸುವರ್ಣ, ಪ್ರಮೋದ್ ಅಜ್ಜಿಬೆಟ್ಟು, ಜಯಂತ್ ಅಗ್ರಬೈಲ್, ಕೇಶವ ದೈಪಲ, ಪ್ರದೀಪ್ ಅಜ್ಜಿಬೆಟ್ಟು, ಪ್ರಣಮ್ ಅಜ್ಜಿಬೆಟ್ಟು, ಪ್ರಶಾಂತ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು.