Recent Posts

Sunday, January 19, 2025
ಸುದ್ದಿ

ಕಾಟಿಪಳ್ಳ ಫ್ರೆಂಡ್ಸ್ ಸರ್ಕಲ್ ನ ಮೈದಾನದ ಬಳಿ ನೂತನ ಅಂಗನವಾಡಿ ಕೇಂದ್ರಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಉತ್ತರದ ಶಾಸಕರಾದ ಡಾ.ವೈ ಭರತ್ ಶೆಟ್ಟಿ-ಕಹಳೆ ನ್ಯೂಸ್

ಮಂಗಳೂರು : ಕಾಟಿಪಳ್ಳ 3ನೇ ವಾರ್ಡ್ ನ ಕಾಟಿಪಳ್ಳ ಫ್ರೆಂಡ್ಸ್ ಸರ್ಕಲ್ ನ ಮೈದಾನದ ಬಳಿ ನೂತನ ಅಂಗನವಾಡಿ ಕೇಂದ್ರಕ್ಕೆ ಗುದ್ದಲಿ ಪೂಜೆಯನ್ನು ಮಂಗಳೂರು ನಗರ ಉತ್ತರದ ಶಾಸಕರಾದ ಡಾ.ವೈ ಭರತ್ ಶೆಟ್ಟಿ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

          

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸ್ಥಳೀಯ ಮಹಾ ನಗರ ಪಾಲಿಕೆ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿಯಾದ ಸುಚಿತ್ರ ಮತ್ತು CDPO ಅಧಿಕಾರಿ ಹರೀಶ್, ಮಹಾ ನಗರ ಪಾಲಿಕೆ ಸದಸ್ಯರುಗಳಾದ ಶೋಭಾ ರಾಜೇಶ್, ನಯನಾ ಕೋಟ್ಯಾನ್, ಶ್ವೇತಾ, ಲಕ್ಷ್ಮೀ ಶೇಖರ್ ದೇವಾಡಿಗ, ಮಾಜಿ ಉಪಮೇಯರ್ ವೇದಾವತಿ ಕುಳಾಯಿ, ರಾಷ್ಟ್ರೀಯ ಸ್ವಯಂ ಸಂಘದ ನಗರ ಸಂಘ ಚಾಲಕರಾದ ಶ್ರೀಯುತ ವಸಂತ್ ರಾವ್, ಯುವಮೋರ್ಚಾ ಅಧ್ಯಕ್ಷರಾದ ಭರತ್ ರಾಜ್ ಕೃಷ್ಣಾಪುರ, ಮಂಡಲ ಸದಸ್ಯರಾದ ಜಯಕುಮಾರ್, ಶಕ್ತಿ ಕೇಂದ್ರ ಪ್ರಮುಖರಾದ ಬಾಲಕೃಷ್ಣ ಸುವರ್ಣ, ಮಂಡಲ ಎಸ್.ಸಿ ಮೋರ್ಚಾದ ಕಾರ್ಯದರ್ಶಿ ಹರೀಶ್, ಬೂತ್ ಅಧ್ಯಕ್ಷ ಗಿರಿಧರ ಶೆಟ್ಟಿ, ಕಾಟಿಪಳ್ಳ ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷರಾದ ದೇವಿಕಿರಣ್ ಗಣೇಶಪುರ ಮತ್ತು ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಂಗನವಾಡಿ ಮೇಲ್ವಿಚಾರಕಿಯರಾದ ರೂಪ ಕಿರಣ್ ಹಾಗೂ ಸಹಾಯಕಿಯಾದ ಸೌಮ್ಯ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.