Recent Posts

Sunday, January 19, 2025
ಸಿನಿಮಾ

ಸದ್ದು ಮಾಡಿ, ಸುದ್ದಿಯಾಗುತ್ತಿದೆ ‘ ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ‘ ಕಿರುಚಿತ್ರದ ಫೋಸ್ಟರ್..! – ಕಹಳೆ ನ್ಯೂಸ್

ಮಂಗಳೂರು: ವೇಗವಾಗಿ ಮುನ್ನುಗ್ಗುತ್ತಿರುವ ಈ ಜಗತ್ತಿನಲ್ಲಿ ಅತ್ತಿತ್ತ ಕಡೆಯ ಸುಖ ದುಃಖಗಳ ಬಗ್ಗೆ ಯೋಚಿಸದೇ ಹಗಲು ರಾತ್ರಿ ಕಷ್ಟ ಪಟ್ಟು ಒಬ್ಬ ವ್ಯಕ್ತಿ ದುಡೀತಾನೆ ಅಂತ ಆದ್ರೆ ಅದು ಹೊಟ್ಟೆಗಾಗಿ. ಅದೇ ರೀತಿ ಹೊಟ್ಟೆ ಪಾಡಿಗಾಗಿ ಹಾಗೂ ಕನಸಿನ ಪಾಡಿಗಾಗಿ ಸಿನಿಮಾದ ಬೆನ್ನು ಬಿದ್ದ ಕೆಲವರು ‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಎಂದು ಹೇಳೋಕೆ ಹೊರಟಿದ್ದಾರೆ.  ಮಂಗಳೂರಿನ ಸಿನಿ ತಂಡವೊಂದು ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ’ ಎಂಬ ಶೀರ್ಷಿಕೆಯ ಹೊಚ್ಚ ಹೊಸ ಕಿರು ಚಿತ್ರದೊಂದಿಗೆ ಸಧ್ಯದಲ್ಲೇ ನಿಮ್ಮ ಮುಂದೆ ಬರಲು ಸಜ್ಜಾಗುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ನಿನ್ನೆ ಖ್ಯಾತ ಚಲನಚಿತ್ರ ನಟ ಪೃಥ್ವಿ ಅಂಬಾರ್, ಅವರ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಬಿಡುಗಡೆ ಮಾಡಿದ್ದು ಸಧ್ಯಕ್ಕೆ ಪೋಸ್ಟರ್ ಬಹಳ ಸದ್ದು ಮಾಡುತ್ತಿದೆ. ವಿಕ್ರಮ್ ರಾವ್ ಈ ಚಿತ್ರದ ನಿರ್ಮಾಪಕರಾಗಿದ್ದು ರಕ್ಷಿತ್ ಚಿನ್ನು ಅವರು ಆಕ್ಷನ್ ಕಟ್ ಹೇಳಿದ್ದಾರೆ.  ಕೋಸ್ಟಲ್ ವುಡ್ ಸ್ಟಾರ್ ಡೈರೆಕ್ಟರ್ ಕೆ ಸೂರಜ್ ಶೆಟ್ಟಿಯವರು ಈ ಚಿತ್ರಕ್ಕೆ ಕಥೆ ಬರೆದಿದ್ದು ಪ್ರಪ್ರಥಮವಾಗಿ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಮಿಂಚುವ ಮೂಲಕ ನಟನೆಗೆ ಕಾಲಿಟ್ಟಿದ್ದಾರೆ. ಇವರ ಜೊತೆಗೆ ಆರ್. ಜೆ. ತ್ರಿಶೂಲ್, ಮಧುರಾ ಆರ್. ಜೆ , ರಾಘವ್ ಸೂರಿ ಹಾಗೂ ಪ್ರವೀಣ್ ಬೇಕಲ್ ಇತರ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅತೀ ಶೀಘ್ರದಲ್ಲಿ ತಂಡ ತಮ್ಮ ಚಿತ್ರದೊಂದಿಗೆ ನಿಮ್ಮ ಮುಂದೆ ಬರಲಿದ್ದಾರೆ.