Saturday, November 23, 2024
ಅಂಕಣವಾಣಿಜ್ಯ

ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಮಟ್ಟದ ಅತ್ಯುನ್ನತ ಶಿಕ್ಷಣ ಸಂಸ್ಥೆ ವಿವೇಕಾನಂದ ಪದವಿಪೂರ್ವ ಕಾಲೇಜು ; ದಾಖಲಾತಿ ಭರದಿಂದ ಸಾಗುತ್ತಿದೆ – ಕಹಳೆ ನ್ಯೂಸ್

” ವಿದ್ಯಾರ್ಥಿಗಳ ಉಜ್ವಲ ಭವಿಷ್ಯದೆಡೆಗೆ “

ಡಿ.ವಿ.ಜಿ.ಯವರ ‘ಮಂಕುತಿಮ್ಮನ ಕಗ್ಗ’ದ ‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂಬ ಸಾಲಿನಂತೆ ಗ್ರಾಮೀಣ ಮತ್ತು ಹಿಂದುಳಿದ ತಾಲೂಕುಗಳ ವಿದಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಹಿರಿಯರ ಆಶಯ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ, ಕಂಪ್ಯೂಟರ್ ಶಿಕ್ಷಣ, ಸಂಸ್ಕøತಿ-ದೇಶಪ್ರೇಮ ಬೆಳೆಸುವ ವಾತಾವರಣ ಮೊದಲಾದ ಹೊಸತನಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿರುವ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜು, ಮೌಲ್ಯಾಧರಿತ ಕಲಿಕೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುವ ಪ್ರತಿಷ್ಠಿತಸಂಸ್ಥೆಗಳಲ್ಲೊಂದಾಗಿ ಕನ್ನಡನಾಡಿನಾದ್ಯಂತ ಗುರುತಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜ್ಞಾನ, ವಾಣಿಜ್ಯ ಮತ್ತು ಕಲಾವಿಭಾಗಗಳಲ್ಲಿ ಶಿಕ್ಷಣವನ್ನು ನೀಡಲು ಬೇಕಾದ ಕೊಠಡಿಗಳು, ಸುಸಜ್ಜಿತವಾದಎಂಟು ಪ್ರಯೋಗಾಲಯಗಳು, ವಿದ್ಯಾಭ್ಯಾಸಕ್ಕೆ ಸೂಕ್ತ ಪರಿಸರವನ್ನು ನಿರ್ಮಿಸುವ ವಸತಿ ನಿಲಯಗಳು ವಿಸ್ತಾರವಾದ ಮೈದಾನ ಮತ್ತು ವ್ಯಾಯಾಮ ಶಾಲೆಗಳನ್ನು ಹೊಂದಿರುವ ಈ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕøತಿ, ಆಧ್ಯಾತ್ಮಿಕ ಪರಂಪರೆ, ದೇಶಪ್ರೇಮ, ಶಿಸ್ತು, ಸಚ್ಚಾರಿತ್ರ್ಯ, ಉತ್ತಮ ಹವ್ಯಾಸ, ಸದಭಿರುಚಿಗಳನ್ನು ಪೋಷಿಸುವ, ಬದುಕಿನ ಸಮಸ್ಯೆಗಳನ್ನು ಎದುರಿಸುವ ಮನೋಭಾವವನ್ನು ಬೆಳೆಸುವ ಗುರಿಯನ್ನುಹೊಂದಿದೆ. ಅರ್ಹ ವಿದ್ಯಾರ್ಥಿಗಳಿಗೆ ಕೇಂದ್ರ ಮತ್ತುರಾಜ್ಯ ಸರಕಾರಗಳಿಂದ, ಖಾಸಗಿ ಸಂಘ ಸಂಸ್ಥೆಗಳಿಂದ ಮತ್ತು ಹಲವಾರುದತ್ತಿ ನಿಧಿಗಳಿಂದಲಭ್ಯವಾಗುವ ವಿದ್ಯಾರ್ಥಿ ವೇತನಹಾಗೂ ಬಹುಮಾನ ಸೌಲಭ್ಯಗಳು ಇಲ್ಲಿವೆ.S.S.ಐ.ಅ ಅಥವಾತತ್ಸಮಾನ ಪರೀಕ್ಷೆಯಲ್ಲಿ 95% ಕ್ಕಿಂತಹೆಚ್ಚಿನ ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಶುಲ್ಕ ವಿನಾಯಿತಿಯಿದೆ.ಅರ್ಹ ಬಡ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿರಿಯಾಯಿತಿಯಿದ್ದುಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನೂಒದಗಿಸಲಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷಾಘಟಕದ ವತಿಯಿಂದ ಅ.ಇ.ಖಿ, I.I.ಖಿ, ಎ.ಇ.ಇ, ಓಇಇಖಿ ಮತ್ತುಇತರರಾಷ್ಟ್ರಮಟ್ಟದವೈದ್ಯಕೀಯ-ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ಬೇಕಾದ ಮಾಹಿತಿ ಮತ್ತು ನುರಿತಅಧ್ಯಾಪಕರಿಂದ ವಿವಿಧರೀತಿಯ ತರಬೇತಿಗಳ ಸೌಲಭ್ಯಗಳಿದ್ದು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅ.P.ಖಿ ತರಬೇತಿಯ ವ್ಯವಸ್ಥೆಯಿದೆ.ಪ್ರಥಮ ಪಿ.ಯು.ಸಿಯಿಂದ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ರಜಾದಿನಗಳಲ್ಲಿ ಬ್ರಿಡ್ಜ್‍ಕೋರ್ಸ್, ನಿಧಾನಕಲಿಕೆಯ ವಿದ್ಯಾರ್ಥಿಗಳಿಗೆ ಆಯಾ ವಿಷಯಗಳಲ್ಲಿ ಪೂರಕ ತರಗತಿಗಳು ಹಾಗೂ ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತದೆ.ಪದವಿಪೂರ್ವ ಶಿಕ್ಷಣ ಇಲಾಖೆ ನಿಗದಿಪಡಿಸಿದ ಪರೀಕ್ಷೆಗಳಲ್ಲದೆ ಹೆಚ್ಚುವರಿಯಾಗಿಎರಡುಆಂತರಿಕ, ಎರಡು ಪೂರ್ವಸಿದ್ಧತಾ ಪರೀಕ್ಷೆ ಮತ್ತು ಅನೇಕ ತರಗತಿ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು ಮೌಲ್ಯಮಾಪನದ ಅಂಕಗಳನ್ನು S.ಒ.S ಮೂಲಕ ಹೆತ್ತವರಿಗೆರವಾನಿಸಲಾಗುತ್ತದೆ.ಕಾಲೇಜಿನಲ್ಲಿ ಸುಸಜ್ಜಿತವಾದಗ್ರಂಥಾಲಯವಿದ್ದು ಸಾಹಿತ್ಯಕೃತಿಗಳನ್ನು ಅಭ್ಯಾಸ ಮಾಡಿಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವಿದೆ.ಅಂತೆಯೇಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ ಪೂರಕವಾದ ವಿಶೇಷ ಪುಸ್ತಕಗಳನ್ನೂ ಮನನ ಮಾಡಬಹುದಾಗಿದೆ.

ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳಿಗೆ ಸೂಕ್ತ ಅವಕಾಶಗಳನ್ನು ನೀಡಿಅವರ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ‘ಚಿಗುರು’ ಭಿತ್ತಿಪತ್ರಿಕೆ ಹಾಗೂ ವಾರ್ಷಿಕ ವಿಶೇಷಾಂಕ, ಲಲಿತಾಕಲಾ ಸಂಘ, ವಿಜ್ಞಾನ ಸಂಘ, ವಾಣಿಜ್ಯ ಸಂಘ, ಮಾನವಿಕ ಸಂಘ ಮುಂತಾದವುಗಳು ಕಾರ್ಯ ನಿರ್ವಹಿಸುತ್ತವೆ. ವಿದ್ಯಾವರ್ಧಕ ಸಂಘದಿಂದ ಸ್ಥಾಪನೆಗೊಂಡ ಸಮುದಾಯ ಬಾನುಲಿ ಕೇಂದ್ರವಾದ ‘ರೇಡಿಯೋ ಪಾಂಚಜನ್ಯ’ವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾವಿದ್ಯಾರ್ಥಿಗಳ ಪ್ರತಿಭೆಯನ್ನುರಾಜ್ಯದಾದ್ಯಂತಹಬ್ಬಿಸುವ ಮೂಲಕ ಅವರಿಗೆ ಹೊಸ ವ್ಯಕ್ತಿತ್ವವನ್ನು ನೀಡುತ್ತದೆ.ಸಾಹಿತ್ಯಕ, ಸಾಂಸ್ಕøತಿಕ, ವೈಜ್ಞಾನಿಕ ಮತ್ತು ಕ್ರೀಡಾವಲಯಗಳಲ್ಲಿ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರಮತ್ತುಜಾಗತಿಕಮಟ್ಟದ ಸಾಧನೆಯನ್ನು ಮಾಡಿ ವಿದ್ಯಾಸಂಸ್ಥೆಗೆಕೀರ್ತಿಯನ್ನುತಂದ ಪ್ರತಿಭಾವಂತ ವಿದ್ಯಾರ್ಥಿಗಳು ಇಲ್ಲಿಶಿಕ್ಷಣವನ್ನು ಪಡೆಯುತ್ತಿದ್ದಾರೆ.

ದೇಶಪ್ರೇಮವನ್ನು ಬೆಳೆಸುವುದರೊಂದಿಗೆ ಸೈನಿಕ ಶಿಕ್ಷಣವನ್ನು ಪಡೆಯುವುದಕ್ಕಾಗಿಓ.ಅ.ಅ. ವಿಭಾಗವುಸಕ್ರಿಯವಾಗಿಕಾರ್ಯಾಚರಿಸುತ್ತಿದ್ದು ಶಿಸ್ತು, ಸಂಯಮ ಮತ್ತು ಕ್ರಿಯಾಶೀಲತೆಯ ಪಾಠವನ್ನು ಹೇಳಿಕೊಡುತ್ತದೆ.ಹೆತ್ತವರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ನೇರ ಸಂಪರ್ಕವನ್ನುಕಲ್ಪಿಸುವ ಶಿಕ್ಷಕ-ರಕ್ಷಕ ಸಂಘವು ಹೆತ್ತವರನ್ನುತನ್ನ ಕಾರ್ಯಗಳಲ್ಲಿ ಸಹಭಾಗಿಯಾಗುವಂತೆ ಮಾಡಿಕಾಲೇಜಿನಅಭಿವೃದ್ಧಿಯಕಡೆಕೈಜೋಡಿಸುವಅವಕಾಶವನ್ನುನೀಡುತ್ತದೆ.

ಕಳೆದ ಆರು ವರ್ಷಗಳಲ್ಲಿ ಕಾಲೇಜಿನ ಫಲಿತಾಂಶ
2012-13  | 2013-14 | 2014-15 | 2015-16 |  2016-17 | 2017-18

ಹಾಜರಾದ ವಿದ್ಯಾರ್ಥಿಗಳು:  772               904          938          953         1055        1080
ಒಟ್ಟು ಫಲಿತಾಂಶ (%)    :    96                 97            97            96            96            97
ವಿಶಿಷ್ಟ ಶ್ರೇಣಿ                :    204             312           309          281          322          297
ಪ್ರಥಮದರ್ಜೆ                :    436             502           534          553          609           619

2016-17ನೇ ಸಾಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯುಉತ್ತಮ ಮುನ್ನಡೆಯನ್ನು ಸಾಧಿಸಿದ್ದು ಕಾಲೇಜಿನ ಮೇಲೆ ಜನರಿಗಿರುವ ಭರವಸೆಯನ್ನು ಹೆಚ್ಚಿಸಿದೆ.ಪದವಿಪೂರ್ವ ಶಿಕ್ಷಣ ಇಲಾಖೆಯು ನಿಗದಿಪಡಿಸಿದ ಪರೀಕ್ಷೆಯಲ್ಲಿಅತಿ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಮತ್ತುರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ ವಿಜ್ಞಾನ ವಿಭಾಗದ ಹರಿತಾ(600ರಲ್ಲಿ595) ವಿವೇಕಾನಂದ ಪದವಿಪೂರ್ವಕಾಲೇಜಿನಲ್ಲೇ ಹೊಸ ಇತಿಹಾಸವನ್ನು ಸೃಷ್ಟಿಸಿದರೆ,ವಾಣಿಜ್ಯ ವಿಭಾಗದ ಕೃಪಾ ರೈ (600ರಲ್ಲಿ 586) ಕಲಾ ವಿಭಾಗದ ಸುಮ್ಯಾ (600ರಲ್ಲಿ560) ಕಾಲೇಜಿನಲ್ಲೇಅತಿ ಹೆಚ್ಚು ಅಂಕಗಳನ್ನು ಗಳಿಸಿ ವಿದ್ಯಾಲಯದಮಕುಟಕ್ಕೆಗರಿ ತೊಡಿಸಿದ್ದಾರೆ. ಓ.ಇ.ಇ.ಖಿ ಪರೀಕ್ಷೆಯಲ್ಲಿ 528, ವೆಟರ್ನರಿಯಲ್ಲಿ 49, ಎಂಜಿನಿಯರಿಂಗ್‍ನಲ್ಲಿ 382 ಮತ್ತುಅ.ಇ.ಖಿ.ಯಆಯುರ್ವೇದ ವಿಭಾಗದಲ್ಲಿ 32ನೇ ರ್ಯಾಂಕ್ ಪಡೆದುಕೊಳ್ಳುವುದರ ಮೂಲಕ ಅನೀಶ ಜಿ. ವಿಶೇಷ ಸಾಧನೆಯನ್ನು ಮೆರೆದರೆ, ವೆಟರ್ನರಿಯಲ್ಲಿ 621, ಅಗ್ರಿಕಲ್ಚರ್‍ನಲ್ಲಿ 205, ಎಂಜಿನಿಯರಿಂಗ್‍ನಲ್ಲಿ 361 ಮತ್ತುಓ.ಇ.ಇ.ಖಿ ಲ್ಲಿ 2015ನೇರ್ಯಾಂಕ್ ಪಡೆದ ಸ್ವರೂಪ್‍ಎಲ್ಲರಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಕಲಾವಿಭಾಗದಲ್ಲಿ ನೂರಕ್ಕೆ ನೂರು ಫಲಿತಾಂಶವನ್ನು ಹೊಂದಿರುವ, ಪ್ರತಿವರ್ಷವೂ ನಿರಂತರವಾಗಿ 96% ಕ್ಕಿಂತ ಹೆಚ್ಚಿನ ಫಲಿತಾಂಶವನ್ನುದಾಖಲಿಸುತ್ತಾ ಬರುತ್ತಿರುವ ವಿವೇಕಾನಂದ ಪದವಿಪೂರ್ವಕಾಲೇಜಿನ ಹಿರಿಮೆಇನ್ನಷ್ಟುಹೆಚ್ಚುವಂತಾಗಲಿ.


2017-18ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಶೇಕಡಾ 97 ಫಲಿತಾಂಶವನ್ನು ದಾಖಲಿಸಿದೆ. ಒಟ್ಟು 297 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 619 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಾಣಿಜ್ಯ ವಿಭಾಗದ ಶಶಾಂಕ್ ಇವರು 592(98.6%) ಅಂಕಗಳನ್ನು ಪಡೆಯುವುದರ ಮೂಲಕ ಕಾಲೇಜಿನಲ್ಲಿ ಅಗ್ರಸ್ಥಾನಿಯಾಗಿದ್ದಾರೆ ಹಾಗೂ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಆಕಾಶ್ ಇ ಇವರು 589 (98.2%) ಅಂಕಗಳನ್ನು ಪಡೆದು ವಿಜ್ಞಾನ ವಿಭಾಗದಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಚನ್ನಬಸವ ಇವರು 563(93.8%) ಗಳಿಸುವುದರ ಮೂಲಕ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. ಒಟ್ಟು 32 ವಿದ್ಯಾರ್ಥಿಗಳು ಶೇಕಡಾ 95ಕ್ಕಿಂತ ಹೆಚ್ಚು ಅಂಕ ಪಡೆದು ಸಾಧನೆ ಮೆರೆದಿದ್ದಾರೆ.


ಈ ಸಾಲಿನ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಅವರು ನಡೆಸುವ ರಾಷ್ಟ್ರ ಮಟ್ಟದ ಜೆ.ಇ.ಇ. ಪರೀಕ್ಷೆಗಳ ಫಲಿತಾಂಶವು ಪ್ರಕಟಗೊಂಡಿದ್ದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಹತ್ತು ವಿದ್ಯಾರ್ಥಿಗಳು ತೇರ್ಗಡೆಗೊಂಡು ಜೆ.ಇ.ಇ. ಎಡ್ವಾನ್ಸ್‍ಡ್ ಪರೀಕ್ಷೆಯನ್ನು ಬರೆಯಲು ಅರ್ಹತೆ ಪಡೆದಿರುತ್ತಾರೆ.