Sunday, January 19, 2025
ಪುತ್ತೂರು

ಗಣೇಶ ಚತುರ್ಥಿ ಮತ್ತು ಗಾಂಧಿ ಜಯಂತಿಯ ದಿನವನ್ನು ಮಾಂಸ ರಹಿತ ದಿನವಾಗಿ ಆಚರಿಸಿ – ಪುತ್ತೂರು ಸಹಾಯಕ ಕಮಿಷನರ್ ಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಮನವಿ- ಕಹಳೆ ನ್ಯೂಸ್

ಪುತ್ತೂರು : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಪುತ್ತೂರು ವತಿಯಿಂದ ಕರ್ನಾಟಕ ಸರ್ಕಾರದ 11 ದಿನಗಳನ್ನು ಮಾಂಸಾಹಾರ ರಹಿತ ದಿನಗಳಾಗಿ ಆಚರಿಸುವಂತೆ (ಆದೇಶ ಸಂಖ್ಯೆ 2 HUD, 5 CGL/78 ತಾರೀಕು 08.01.1979) ಆದೇಶ ನೀಡಿದ್ದು, ಆ ಆದೇಶದಂತೆ ಬರುವ ಸೆಪ್ಟೆಂಬರ್ 10 ನೇ ತಾರೀಕು ಗಣೇಶ ಚತುರ್ಥಿಯಂದು ಮತ್ತು ಒಕ್ಟೋಬರ್ 2 ಗಾಂಧಿ ಜಯಂತಿಯಂದು ತಮ್ಮ ವ್ಯಾಪ್ತಿಯಲ್ಲಿ ಮಾಂಸಾಹಾರ ರಹಿತ ದಿನಗಳಾಗಿ ಆಚರಿಸಲು ಆ ದಿನದಂದು ಕಸಾಯಿಖಾನೆಗಳನ್ನು ಮತ್ತು ಎಲ್ಲಾ ಮಾಂಸದ ಅಂಗಡಿಗಳನ್ನು ಮುಚ್ಚಿಸಲು ಕ್ರಮಕೈಗೊಳ್ಳುವಂತೆ ಪುತ್ತೂರು ಸಹಾಯಕ ಕಮಿಷನರ್ ಗೆ ಮನವಿ ಮಾಡಿಕೊಳ್ಳಲಾಯಿತು.


ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆಯ ಅಧ್ಯಕ್ಷರಾದ ಡಾ ಕೃಷ್ಣಪ್ರಸನ್ನ, ನ್ಯಾಯವಾದಿ ಪ್ರಮುಖರಾದ ಮಾಧವ ಪೂಜಾರಿ, ವಿಶ್ವ ಹಿಂದೂ ಪರಿಷತ್ ಪ್ರಖಂಡ ಕಾರ್ಯದರ್ಶಿ ವಿಶಾಖ್ ಸಸಿಹಿತ್ಲು, ದೋಳ್ಪಾಡಿ ಬಜರಂಗದಳ ಸಂಚಾಲಕ ಹರೀಶ್ ಕುಮಾರ್, ಗೋರಕ್ಷಾ ಪ್ರಮುಖ್ ಕಿರಣ್ ಕುಮಾರ್ ರಾಮಕುಂಜ,ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡದ ಉಪಾಧ್ಯಕ್ಷರು ಸೇಸಪ್ಪ ಬೆಳ್ಳಿಪ್ಪಾಡಿ, ಬಜರಂಗದಳ ನಗರ ಸಂಚಾಲಕ ಚೇತನ್ ಬೊಳುವಾರು , ಸಂಜಯ್ ಮತ್ತಿತರರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು