Monday, January 20, 2025
ಪುತ್ತೂರು

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ನಡೆದ 7ನೇ  ವರ್ಷದ ವಿದ್ಯಾಗಣಪತಿ ಉತ್ಸವ – ಕಹಳೆ ನ್ಯೂಸ್

ಪುತ್ತೂರು: ಸರಕಾರದ ಕೋವಿಡ್-19  ನಿಯಮದಂತೆ ಧರ್ಮಸ್ಥಳ ಬಿಲ್ಡಿಂಗ್‌ನ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ವೇದಮೂರ್ತಿ ಸುಬ್ರಹ್ಮಣ್ಯ ಹೊಳ್ಳರವರ ನೇತೃತ್ವದಲ್ಲಿ 7ನೇ   ವರುಷದ ವಿದ್ಯಾಗಣಪತಿ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು. ಸಂಸ್ಥೆಯ ಸಂಚಾಲಕರಾದ ಪಿ. ವಿ ಗೋಕುಲ್‌ನಾಥ್ ದಂಪತಿ, ಅಂಬಿಕಾ ಶಿಕ್ಷಣ ಸಂಸ್ಥೆಯ ಟ್ರಸ್ಟಿ ನಿವೃತ್ತ ಶಿಕ್ಷಕರಾದ ಶ್ರೀಸುರೇಶ್ ಶೆಟ್ಟಿ, ಸುದಾನ ವಸತಿಯುತ ಶಾಲೆಯ ಸಂಚಾಲಕರಾದ ರೇ. ವಿಜಯ್ ಹಾರ್ವಿನ್, ಡಾ.ರವಿಪ್ರಕಾಶ್ ಮತ್ತು ಅವರ ಪತ್ನಿ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವಿಜಯಸರಸ್ವತಿ, ಕಾವು ಹೇಮನಾಥ ಶೆಟ್ಟಿ ಮತ್ತು ಅನಿತಾಹೇಮನಾಥ ಶೆಟ್ಟಿ, ಆರಕ್ಷಕ ಸಿಬ್ಬಂದಿ, ಸಂಸ್ಥೆಯ ಸಿಬ್ಬಂದಿಗಳು ಮತ್ತು ನಿಯಮಿತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು