Recent Posts

Monday, January 20, 2025
ಬಂಟ್ವಾಳ

ಲೊರೆಟ್ಟೋ ಬಾರಿಕ್ಕಾಡಿನಲ್ಲಿ ಕೆಂಪುಕಲ್ಲಿನ ಕೋರೆಗೆ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ ತಂಡ ಭೇಟಿ- ಕಹಳೆ ನ್ಯೂಸ್

ಬಂಟ್ವಾಳ: ಲೊರೆಟ್ಟೋ ಬಾರಿಕ್ಕಾಡಿನಲ್ಲಿ ಕೆಂಪುಕಲ್ಲಿನ ಕೋರೆಯ ಹೊಂಡಕ್ಕೆ ಬಿದ್ದು 12 ವರ್ಷದ ಬಾಲಕ ಮೃತಪಟ್ಟ ಸ್ಥಳಕ್ಕೆ ಬಂಟ್ವಾಳ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ ಅವರ ನೇತೃತ್ವದ, ಬಾಲವಿಕಾಸ ಸಮಿತಿಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳು ಆಟವಾಡಲು ಹೋಗಿ ಇಂತಹ ಘಟನೆ ನಡೆದಿರಬಹುದು ಎಂಬುದು ಪರಿಶೀಲನೆ ವೇಳೆ ಮೇಲ್ನೋಟಕ್ಕೆ ಕಂಡುಬಂದಿದ್ದು, ನಿಯಮ ಮೀರಿರುವ ಯಾವುದೇ ವಿಚಾರಗಳು ಕಂಡುಬಂದಿಲ್ಲ. ಮಕ್ಕಳು ಆಟ ಆಡಲು ತೆರಳುವ ವೇಳೆ ಪೋಷಕರು  ಜಾಗೃತೆ ವಹಿಸಬೇಕು. ಇಂತಹ ಕೋರೆಗಳಲ್ಲಿ ಮತ್ತೆ ಮತ್ತೆ ಪ್ರಾಣ ಹಾನಿಯಂತಹ ಘಟನೆಗಳು ಸಂಭವಿಸದಂತೆ ಸ್ಥಳೀಯರು ಮತ್ತು ಹೆತ್ತವರು ವಿಶೇಷ ಕಾಳಜಿ ವಹಿಸಬೇಕು ಎಂಬ ವಿಚಾರ ವನ್ನು ತಿಳಿಸಲಾಗಿದೆ ಎಂದು ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿಯವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿಯ ಪ್ರಮುಖರು ಹಾಜರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು