Recent Posts

Monday, January 20, 2025
ಬಂಟ್ವಾಳ

ಪಂಜಿಕಲ್ಲು ಭಾಲೇಶ್ವರ ಗರಡಿ ಕೊಡಮಣಿತ್ತಾಯ ದೈವಕ್ಕೆ ಹಗಲು ‘ಸೋಣ ನೇಮ’ – ಕಹಳೆ ನ್ಯೂಸ್

ಬಂಟ್ವಾಳ: ಪಂಜಿಕಲ್ಲು ಗ್ರಾಮದ ಪ್ರಸಿದ್ಧ ಭಾಲೇಶ್ವರ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಕೊಡಮಣಿತ್ತಾಯ ದೈವಕ್ಕೆ ಸಾಂಪ್ರದಾಯಿಕ ಹಗಲು ‘ಸೋಣ ನೇಮ’ವು ಪಂಜಿಕಲ್ಲು ಗುತ್ತಿನ ಮನೆಯಿಂದ ದೈವದ ಭಂಡಾರ ಬಂದು ಸಂಪ್ರದಾಯದಂತೆ ಹಗಲು ನೇಮ ನಡೆಯಿತು. ಇದೇ ವೇಳೆ ದೈವ ಮತ್ತು ಬಸವ ಭೇಟಿ, ಹುಲಿ ವಾಹನ ಭೇಟಿಯು ನಡೆಯಿತು. ಪುರೋಹಿತ ಶ್ರೀಪತಿ ಭಟ್ ಪುಂಚೋಡಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಕುಮಾರ್ ಜೈನ್ ಪೀರ್ದೊಟ್ಟು, ಪ್ರಮುಖರಾದ ಕೃಷ್ಣರಾಜ್ ಜೈನ್, ವಿದ್ಯಾ ಕುಮಾರ್ ಇಂದ್ರ, ಕೆ.ಎನ್.ಶೇಖರ್, ರವಿ ಪೂಜಾರಿ ಪಾರೊಟ್ಟು, ಗಣೇಶ ಪ್ರಭು ಭಾವಂತಬೆಟ್ಟು, ದೇಜಪ್ಪ ಸಾಲ್ಯಾನ್, ಕೇಶವ ಪೂಜಾರಿ ಅಸಲ್ದೋಡಿ, ಗುತ್ತಿನ ಮನೆಯವರು ಇದ್ದರು. ಮಾಜಿ ಸಚಿವ ಬಿ.ರಮಾನಾಥ ರೈ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಪ್ರಮುಖರಾದ ಬೇಬಿ ಕುಂದರ್, ಬಿ.ಪದ್ಮಶೇಖರ ಜೈನ್, ಸುದರ್ಶನ್ ಜೈನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು