Recent Posts

Monday, January 20, 2025
ಸುದ್ದಿ

ಕೃಷಿ ಅಧ್ಯಯನಕ್ಕೆಂದು ಫಾರ್ಮ್ ಹೌಸ್‍ಗೆ ತೆರಳಿದ್ದ ವೈದ್ಯೆಯ ದುರಂತ ಅಂತ್ಯ – ಕಹಳೆ ನ್ಯೂಸ್

ವಿಟ್ಲ : ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್‍ಗೆ ಹೋಗಿದ್ದ ವೈದ್ಯೆಯೊಬ್ಬರು ದುರಂತ ಸಾವಿಗೀಡಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದ ಅಡ್ಯನಡ್ಕ ವಾರಣಾಶಿಯಲ್ಲಿ ನಡೆದಿದೆ.

ಡಾ.ಮೈಜೀ ಕರೋಲ್ ಫರ್ನಾಂಡೀಸ್ (31) ಮೃತ ಯುವತಿ. ಕೃಷಿ ಅಧ್ಯಯನಕ್ಕೆಂದು ಕೇಪು ಗ್ರಾಮದ ವಾರಾಣಸಿ ಫಾರ್ಮ್ ಹೌಸ್‍ಗೆ ಎರಡು ದಿನಗಳ ಹಿಂದೆ ಆಗಮಿಸಿದ್ದರು. ಮಂಗಳವಾರ ಸೆಪ್ಟೆಂಬರ್ 14 ರಂದು ಸಂಜೆ 5.45 ರ ಫಾರ್ಮ್ ಹೌಸ್‍ನ ಕೃಷಿ ಹೊಂಡದ ಬಳಿ ತೆರಳಿದ್ದ ವೇಳೆ ಆಯಾತಪ್ಪಿ ಕೆರೆಗೆ ಬಿದ್ದಿದ್ದಾರೆ. ಸಾಕಷ್ಟು ಸಮಯ ಕಳೆದರೂ ಆಕೆ ಹಿಂತಿರುಗದ ಕಾರಣ, ಹುಡುಕಾಡಿದಾಗ ನೀರಿನಡಿಯಲ್ಲಿದ್ದ ದೇಹ ಹೊರ ತೆಗೆದು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಕೆಲ ಹೊತ್ತಲ್ಲೇ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ವಿಟ್ಲ ಠಾಣಾ ಪೆÇಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು